More

    ಮಾಜಿ ಪ್ರಧಾನಿ ದೇವೇಗೌಡ ಆರೋಗ್ಯದಲ್ಲಿ ಚೇತರಿಕೆ: ಆಸ್ಪತ್ರೆಯಿಂದ ಬಿಡುಗಡೆ

    ಬೆಂಗಳೂರು: ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಅವರು ಅನಾರೋಗ್ಯಕ್ಕೀಡಾಗಿದ್ದರಿಂದ ಬೆಂಗಳೂರಿನ ಮಣಿಪಾಲ್‌ ಆಸ್ಪತ್ರೆಗೆ ದಾಖಲಾಗಿತ್ತು. ಅವರ ಆರೋಗ್ಯದಲ್ಲಿ ಚೇತರಿಕೆಯಾಗಿದ್ದರಿಂದ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಮಾಡಲಾಗಿದೆ.

    ಇದನ್ನೂ ಓದಿ:ಆಂಧ್ರದಲ್ಲಿ ಹಕ್ಕಿ ಜ್ವರ: ಸಹಸ್ರಾರು ಕೋಳಿ ಸಾವು, ಮೊಟ್ಟೆ ನಾಶ!

    ದೇವೇಗೌಡ ಅವರನ್ನು ನಗರದ ಪದ್ಮನಾಭನಗರದಲ್ಲಿರುವ ಅವರ ನಿವಾಸಕ್ಕೆ ಕರೆದೊಯ್ಯಲಾಗಿದೆ. ಅನಾರೋಗ್ಯದಿಂದ 4 ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ದೇವೇಗೌಡರಿಗೆ ಗುರುವಾರ ಬೆಳಿಗ್ಗೆ ಉಸಿರಾಟ ಸಮಸ್ಯೆ ಕಾಣಿಸಿಕೊಂಡಿದ್ದು, ಕೂಡಲೇ ಅವರನ್ನು ಮಣಿಪಾಲ್‌ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದರು. ಅಲ್ಲಿನ ಶ್ವಾಸಕೋಶ ತಜ್ಞ ಡಾ.ಸತ್ಯನಾರಾಯಣ ಅವರು ಪರೀಕ್ಷೆ ನಡೆಸಿ, ಆಸ್ಪತ್ರೆಯಲ್ಲಿಯೇ ದಾಖಲಿಸಿಕೊಂಡು ನಿಗಾವಹಿಸಿದ್ದರು.

    ಸದ್ಯ ದೇವೇಗೌಡರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಆತಂಕ ಪಡುವ ಅಗತ್ಯ ಇಲ್ಲ ಎಂದು ಬೆಂಗಳೂರಿನ ಹಳೇ ವಿಮಾನ ನಿಲ್ದಾಣ ರಸ್ತೆಯ ಮಣಿಪಾಲ್‌ ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದರು.

    ಮುಂದಿನ ವಾರ ಮಂಡ್ಯ ಪ್ರವಾಸ ನಿಗದಿಯಾಗಿತ್ತು: ಮುಂದಿನ ಲೋಕಸಭೆ ಚುನಾವಣೆಯ ತಯಾರಿ ನಿಟ್ಟಿನಲ್ಲಿ ಮುಂದಿನ ವಾರ ದೇವೇಗೌಡ ಅವರು ಮಂಡ್ಯ ಪ್ರವಾಸಕ್ಕೆ ಮುಂದಾಗಿದ್ದರು. ಈ ಬಗ್ಗೆ ಸ್ವತಃ ಅವರೇ ಕಾರ್ಯಕ್ರಮಗಳಲ್ಲಿ ಮಾಹಿತಿ ನೀಡಿ ಅಲ್ಲಿನ ಜನರ ನಾಡಿಮಿಡಿತ ತಿಳಿದುಕೊಳ್ಳಲು ಜಿಲ್ಲೆಯಾದ್ಯಂತ ಒಂದು ವಾರ ಪ್ರವಾಸ ಮಾಡುವುದಾಗಿ ತಿಳಿಸಿದ್ದರು. ಸದ್ಯ ಅನಾರೋಗ್ಯಕ್ಕೀಡಾಗಿ ಆಸ್ಪತ್ರೆ ದಾಖಲಾಗಿದ್ದರು.

    ಎಚ್‌ಡಿ ದೇವೇಗೌಡ ಅವರಿಗೆ 90 ವರ್ಷಗಳು ಪೂರ್ಣಗೊಂಡಿವೆ. ವಯೋಸಹಜ ಸಮಸ್ಯೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ಆಗಾಗ ಆರೋಗ್ಯ ಕೈಕೊಡುತ್ತಲೇ ಇದೆ. ಆದರೂ ಸಹ ಅವರು ಸಕ್ರಿಯ ರಾಜಕಾರಣದಲ್ಲಿದ್ದು, ಸದ್ಯ ಅವರು ಲೋಕಸಭೆ ಚುನಾವಣೆಯ ಪ್ರಚಾರ, ಸಭೆಗಳನ್ನು ನಡೆಸುತ್ತಿದ್ದಾರೆ. ಈ ಇಳಿವಯಸ್ಸಿನಲ್ಲೂ ಸಹ ಅವರು ಅಧಿವೇಶನದಲ್ಲಿ ಭಾಗವಹಿಸಲು ಬೆಂಗಳೂರು ಟು ದೆಹಲಿ ಹಾಗೂ ಲೋಕಸಭಾ ಚುನಾವಣೆ ಸಂಬಂಧ ಬೆಂಗಳೂರಿನಿಂದ ಹಾಸನಕ್ಕೆ ಹೋಗಿದ್ದರು. ಅಲ್ಲದೇ ಅವರು ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕಾಗಿ ಅಯೋಧ್ಯೆಗೆ ಹೋಗಿಬಂದಿದ್ದರು.

    ಲೋಕಸಭೆ ಚುನಾವಣೆ 20 ಕ್ಷೇತ್ರದಲ್ಲಿ ಗೆಲುತ್ತೇವೆ: ಸಿದ್ದರಾಮಯ್ಯ

    ಆಂಧ್ರದಲ್ಲಿ ಹಕ್ಕಿ ಜ್ವರ: ಸಹಸ್ರಾರು ಕೋಳಿ ಸಾವು, ಮೊಟ್ಟೆ ನಾಶ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts