More

    ರೈತರ ಬೆಳೆಗೆ ಬೆಂಬಲ ಬೆಲೆ ಬೇಕು

    ವಿಜಯಪುರ: ಸರ್ಕಾರ ರೈತರಿಗೆ ಸಹಾಯಧನ ನೀಡುವ ಬದಲು ಅವರ ಬೆಳೆಗೆ ಬೆಂಬಲ ಬೆಲೆ ಘೋಷಿಸಬೇಕೆಂದು ಶಾಸಕ ಶಿವಾನಂದ ಪಾಟೀಲ ಹೇಳಿದರು.
    ಬಸವನಬಾಗೇವಾಡಿಯ ಯರನಾಳದ ವಿರಕ್ತ ಮಠದಲ್ಲಿ ಕೃಷಿ ಇಲಾಖೆ, ಆತ್ಮ ಯೋಜನೆ, ಕೃಷಿ ಮಹಾವಿದ್ಯಾಲಯದ ಸಹಯೋಗದಲ್ಲಿ ಈಚೆಗೆ ನಡೆದ ಕಿಸಾನ್ ಗೋಷ್ಠಿಯಲ್ಲಿ ಅವರು ಮಾತನಾಡಿದರು.
    ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕು. ಅದನ್ನು ಬಿಟ್ಟು ಕೇವಲ ಸಹಾಯಧನ ನೀಡಿ ಕೈತೊಳೆದುಕೊಂಡರೆ ಸಾಲದು. ಇಂದು ಜಾತಿಗೊಂದು ನಿಗಮ ಹುಟ್ಟಿಕೊಳ್ಳುತ್ತಿವೆ. ಸರ್ಕಾರ ಆ ನಿಟ್ಟಿನಲ್ಲಿಯೇ ಕಾರ್ಯ ನಿರ್ವಹಿಸುತ್ತಿದೆ. ಬದಲಾಗಿ ರೈತರತ್ತ ಗಮನ ಹರಿಸುತ್ತಿಲ್ಲವೆಂದು ಅವರು ಬೇಸರ ವ್ಯಕ್ತಪಡಿಸಿದರು.
    ಆತ್ಮ ಉಪಯೋಜನಾ ನಿರ್ದೇಶಕ ಡಾ.ಎಂ.ಬಿ. ಪಟ್ಟಣಶೆಟ್ಟಿ ಮಾತನಾಡಿ, ರೈತರು ಜಮೀನುಗಳಲ್ಲಿ ಕನಿಷ್ಠ 50 ಮರಗಳನ್ನು ನೆಡಬೇಕು. ಇದರಿಂದ ಪರಿಸರದಲ್ಲಿ ಆಮ್ಲಜನಕ ಪ್ರಮಾಣ ಹೆಚ್ಚಾಗುವುದರ ಜತೆಗೆ ಮಳೆ ಪ್ರಮಾಣವೂ ಹೆಚ್ಚಲಿದೆ ಎಂದರು.
    ನಂದಿಹಾಳ ಕೊಡೇಕಲ್ ಮಠದ ಸಂಗಯ್ಯ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಕೃಷಿಕ ಸಮಾಜದ ಅಧ್ಯಕ್ಷ ಬಿ.ಎಲ್. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಕೃಷಿ ಮಹಾವಿದ್ಯಾಲಯದ ಡೀನ್ ಡಾ. ಎಸ್.ಬಿ. ಕಲಘಟಗಿ, ಕೃಷಿ ಜಂಟಿ ನಿರ್ದೇಶಕ ಡಾ. ಡಿ.ಡಬ್ಲುೃ. ರಾಜಶೇಖರ, ಚಂದ್ರಶೇಖರಗೌಡ ಪಾಟೀಲ, ವಿಶ್ವನಾಥ ಪಾಟೀಲ, ಪ್ರಕಾಶ ಆರ್. ಚವ್ಹಾಣ್, ಎಂ.ಎಚ್. ಯರಝರಿ, ಆತ್ಮ ಯೋಜನೆ ಸಿಬ್ಬಂದಿ ಸಿ.ಸಿ. ಹಡಪದ, ಪುಷ್ಪಾ ಗುಡದಿನ್ನಿ, ಸಾಗರ ಎಂ. ಬಾಗೇವಾಡಿ, ಅಣ್ಣಾಸಾಹೇಬಗೌಡ ಪಾಟೀಲ, ಸೀತಾ ದೊಡಮನಿ, ಮಧು ಪಾಟೀಲ, ಶರಣು ಮನಗೂಳಿ, ಶರಣು ಕಾಟಕರ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts