More

    ಕೋಲಾರಕ್ಕೆ ಯರಗೋಳ್​ ನೀರು

    ಪರೀಕ್ಷಾರ್ಥವಾಗಿ ಪೈಪ್​ಲೈನ್​ ಮೂಲಕ ನೀರು ಸರಬರಾಜು

    ಕೋಲಾರ: ದಶಕಗಳ ಹೋರಾಟದ ಫಲವಾಗಿ ಯರಗೋಳ್​ ಡ್ಯಾಂ ನಿರ್ಮಾಣವಾಗಿ ವರ್ಷಗಳೇ ಕಳೆದರೂ ಡ್ಯಾಂಗೆ ನೀರು ತುಂಬಿರಲಿಲ್ಲ. ಕಳೆದ ವರ್ಷ ವರುಣನ ಕೃಪೆಯಿಂದ ತುಂಬಿ ತುಳುಕುತ್ತಿದ್ದರೂ ಕೋಲಾರ ಸೇರಿದಂತೆ ಯೋಜನೆಗೆ ಒಳಪಡುವ ನಗರ ಮತ್ತು ಗ್ರಾಮಗಳಿಗೆ ಕುಡಿಯುವ ನೀರು ಕಲ್ಪಿಸಲು ಸಾಧ್ಯವಾಗಿರಲಿಲ್ಲ. 77ನೇ ಸ್ವಾತಂತ್ರ್ಯ ದಿನಾಚರಣೆಯ ವಿಶೇಷ ಎಂಬಂತೆ ಎರಡು ದಿನ ಮುನ್ನವೇ ಯರಗೋಳ್​ ನೀರು ಪರೀಾರ್ಥವಾಗಿ ಪೈಪ್​ಲೈನ್​ ಮೂಲಕ ಕೋಲಾರಕ್ಕೆ ಹರಿಸಲಾಗಿದೆ.
    ಕಳೆದ ಒಂದು ತಿಂಗಳಿನಿಂದ ಪೈಪ್​ಲೈನ್​ ಪರೀಕ್ಷೆಗೆ ಯರಗೋಳ್​ ನೀರನ್ನು ಬಂಗಾರಪೇಟೆಯ ಹುಣಸನಹಳ್ಳಿ ಸಮೀಪ ನಿರ್ಮಿಸಿರುವ ಓವರ್​ಹೆಡ್​ ಟ್ಯಾಂಕ್​ ಮೂಲಕ ಮಾಲೂರು ಪಟ್ಟಣಕ್ಕೆ ಹಾಗೂ ಬೂದಿಕೋಟೆ ದೊಡ್ಡ ಕೆರೆಯಲ್ಲಿ ನಿರ್ಮಿಸಿರುವ ಓವರ್​ಹೆಡ್​ ಟ್ಯಾಂಕ್​ ಮೂಲಕ ಕೋಲಾರ ನಗರದ ಹೊರವಲಯದ ಸ್ಯಾನಿಟೋರಿಯಂ ಬಳಿಯ ನೀರು ಶುದ್ಧೀಕರಣ ಟಕ ಮತ್ತು ಓವರ್​ಹೆಡ್​ ಟ್ಯಾಂಕ್​ಗೆ ಭಾನುವಾರ ನೀರನ್ನು ಪರೀಾರ್ಥ ಯಶಸ್ವಿಯಾಗಿ ಹರಿಸಲಾಗಿದೆ.
    ಕೋಲಾರದಲ್ಲಿ ನಾಲ್ಕು ಓವರ್​ಹೆಡ್​ ಟ್ಯಾಂಕ್​ಗಳ ನಿರ್ಮಾಣಕ್ಕೆ ಉದ್ದೇಶಿಸಲಾಗಿತ್ತಾದರೂ ನಗರಸಭೆ ಅಧಿಕಾರಿ ಹಾಗೂ ಜನಪ್ರತಿನಿಧಿಗಳ ರ್ನಿಲಕ್ಷ$್ಯದಿಂದಾಗಿ ಈವರೆಗೆ ಎರಡು ಕಡೆ ಟ್ಯಾಂಕ್​ ನಿರ್ಮಾಣಕ್ಕೆ ಸ್ಥಳಾವಕಾಶ ಒದಗಿಸದ ಕಾರಣ ಈಗಾಗಲೇ ನಿರ್ಮಾಣಗೊಂಡಿರುವ ಎರಡು ಟ್ಯಾಂಕ್​ಗಳಿಗೆ ಮಾತ್ರ ನೀರು ತುಂಬಿಸಿ ಅಲ್ಲಿಂದಲೇ ನಗರದ ಮನೆಗಳ ನಲ್ಲಿಗಳಿಗೆ ಯರಗೋಳ್​ ನೀರು ಹರಿಸಲು ಸರ್ಕಾರ ಸೂಚಿಸಿದೆ.
    ಬಹುತೇಕ 2&3 ತಿಂಗಳಲ್ಲಿ ಯರಗೋಳ್​ ನೀರನ್ನು ಕೋಲಾರ, ಬಂಗಾರಪೇಟೆ ಹಾಗೂ ಮಾಲೂರು ಪಟ್ಟಣ ಮತ್ತು ಮಾರ್ಗ ಮಧ್ಯದ 45 ಹಳ್ಳಿಗಳಿಗೆ ಹರಿಸುವ ಭರವಸೆಯನ್ನು ಅಧಿಕಾರಿಗಳು ನೀಡಿದ್ದಾರೆ.
    ಕೆಜಿಎಫ್​ ಚಿನ್ನದ ಗಣಿ ಮತ್ತು ಸುತ್ತಮುತ್ತಲಿನ ಸುಮಾರು 1 ಲಕ್ಷಕ್ಕೂ ಹೆಚ್ಚು ಹೆಕ್ಟೇರ್​ ಪ್ರದೇಶದಲ್ಲಿ ಬೀಳುವ ಮಳೆಯ ನೀರು ವಲಗಮಾದಿ, ಬಲಮಂದೆ ಮತ್ತು ದೋಣಿಮಡುಗು ಪಂಚಾಯಿತಿಗಳ ಮೂಲಕ ಸುಮಾರು 0.5 ಟಿಎಂಸಿಗೂ ಹೆಚ್ಚು ಮಳೆ ನೀರು ಪ್ರತಿ ವರ್ಷ ಸರಾಗವಾಗಿ ಹರಿಯುತ್ತಿದ್ದು ಈ ಕಾಲುವೆ ಬಲಮಂದೆ ಗ್ರಾಪಂನ ದೊಡ್ಡಪನಾಂಡ್ರಹಳ್ಳಿಯ ಎದ್ದುಲಮಡುಗು ಪ್ರದೇಶದಿಂದ ಯರಗೋಳ್​ ಡ್ಯಾಂಗೆ ಕೇವಲ 5 ಕಿ.ಮೀ ದೂರವಿದ್ದು ಈ ನೀರನ್ನು ಗ್ರಾ$್ಯವಿಟಿ ಮೂಲಕವೇ ಯರಗೋಳ್​ ಡ್ಯಾಂಗೆ ಹರಿಸಬಹುದು. ಕೆಜಿಎಫ್​ ವ್ಯಾಪ್ತಿಯಲ್ಲಿ ಬೀಳುವ ಮಳೆ ನೀರನ್ನು ಇದೇ ಡ್ಯಾಂನಲ್ಲಿ ಶೇಖರಿಸಿ ಕುಡಿಯುವ ನೀರಿಗಾಗಿ ಬಳಸಿದರೆ ಕೋಲಾರ, ಮಾಲೂರು ಮತ್ತು ಬಂಗಾರಪೇಟೆ ತಾಲೂಕುಗಳೊಂದಿಗೆ ಕೆಜಿಎಫ್​ ನಗರ ಮತ್ತು ಉದ್ದೇಶಿಸಿರುವ ಕೈಗಾರಿಕೆ ವಲಯಕ್ಕೆ ನೀರು ಪೂರೈಸಬಹುದಾಗಿದೆ ಎಂದು ತರು ಅಂದಾಜಿಸಿದ್ದಾರೆ.

    ಕೆಜಿಎಫ್​ ನಗರಕ್ಕೆ ನೀರು: ಮೂಲ ಯೋಜನೆಯಲ್ಲಿ ಕೆಜಿಎಫ್​ ನಗರಕ್ಕೆ ನೀರು ದೊರಕಿಸುವ ಆಲೋಚನೆ ಇರಲಿಲ್ಲ. ಇದೀಗ ಬೆಮೆಲ್​ನಿಂದ ವಶಪಡಿಸಿಕೊಂಡ 962 ಎಕರೆ ಜಮೀನಿನಲ್ಲಿ ಕೈಗಾರಿಕೆ ಕಾರಿಡಾರ್​ ಅಥವಾ ಇಂಟಿಗ್ರೇಟೆಡ್​ ಟೌನ್​ಶಿಪ್​ ನಿರ್ಮಾಣ ಮಾಡಲು ಉದ್ದೇಶಿಸಿರುವ ಹಿನ್ನಲೆಯಲ್ಲಿ ಅಲ್ಲಿಗೂ ಯರಗೋಳ್​ ನೀರನ್ನು ಹರಿಸಲು ಉದ್ದೇಶಿಸಲಾಗುತ್ತಿದೆ ಎಂದು ತಿಳಿದುಬಂದಿದೆ. ಇದಕ್ಕೆ ಕಾರಣವೂ ಇದ್ದು ಯರಗೋಳ್​ ಡ್ಯಾಂ ಕೋಲಾರದಿಂದ ಕಾಮಸಮುದ್ರಂ ಮತ್ತು ಮಾಲೂರಿನಿಂದ ಬೂದಿಕೋಟೆ ಮಾರ್ಗವಾಗಿ ಎರಡು ಕಾಲುವೆಗಳ ಮೂಲಕ ಮಳೆ ನೀರು ಹರಿದು ಒಂದೆಡೆ ಸೇರಿ ತಮಿಳುನಾಡು ಸೇರುತ್ತಿದ್ದ ನದಿಗೆ ಅಣೆಕಟ್ಟು ನಿರ್ಮಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts