More

    ಯರಗೇರಾವನ್ನು ತಾಲೂಕು ಕೇಂದ್ರವನ್ನಾಗಿ ಮಾಡಿ; ಹೋರಾಟ ಸಮಿತಿ ಪದಾಧಿಕಾರಿಗಳ ಒತ್ತಾಯ

    ರಾಯಚೂರು: ತಾಲೂಕಿನ ಹೋಬಳಿ ಕೇಂದ್ರವಾಗಿರುವ ಯರಗೇರಾವನ್ನು ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡುವಂತೆ ಒತ್ತಾಯಿಸಿ ಯರಗೇರಾ ತಾಲೂಕು ರಚನೆ ಹೋರಾಟ ಸಮಿತಿ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿ, ಸ್ಥಾನಿಕ ಅಧಿಕಾರಿ ಆಸೀಫ್‌ಗೆ ಮನವಿ ಸಲ್ಲಿಸಿದರು.

    ಯರಗೇರಾವನ್ನು ತಾಲೂಕು ಕೇಂದ್ರವನ್ನಾಗಿ ಮಾಡುವುದರಿಂದ ರಾಯಚೂರು ತಾಲೂಕಿನ ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಿರುವ ಗ್ರಾಮಗಳ ಜನರಿಗೆ ಅನುಕೂಲವಾಗಲಿದೆ. ಯರಗೇರಾ, ಗಿಲ್ಲೆಸುಗೂರು, ತಲಮಾರಿ ಜಿಪಂ ಹಾಗೂ ಕಲ್ಮಲಾ ಕ್ಷೇತ್ರದ ಕೆಲವು ಗ್ರಾಮಗಳನ್ನು ಸೇರಿಸಿ ಯರಗೇರಾವನ್ನು ತಾಲೂಕು ಕೇಂದ್ರವನ್ನಾಗಿ ಮಾಡಬೇಕು. ಪ್ರತ್ಯೇಕ ಉಪ ನೋಂದಣಾಧಿಕಾರಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಆರಂಭವಾದರೆ ಈ ಭಾಗದ ಜನರಿಗೆ ಅನುಕೂಲವಾಗಲಿದೆ.

    ಯರಗೇರಾ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿದ್ದು, ಸ್ನಾತಕೋತ್ತರ ಕೇಂದ್ರವನ್ನು ನೂತನ ವಿವಿಯಾಗಿ ಈಗಾಗಲೇ ಘೋಷಣೆ ಮಾಡಲಾಗಿದೆ. ಪೊಲೀಸ್ ಠಾಣೆ, ಪಿಯು ಕಾಲೇಜು, ವಿದ್ಯುತ್ ಉಪ ಕೇಂದ್ರವಿದ್ದು, ತಾಲೂಕು ಕೇಂದ್ರವಾಗಲು ಸೂಕ್ತವಾಗಿದೆ. ಶೀಘ್ರ ಈ ಬಗ್ಗೆ ಅಧಿವೇಶನದಲ್ಲಿ ಚರ್ಚಿಸಿ, ತಾಲೂಕು ಘೋಷಿಸಬೇಕೆಂದು ಆಗ್ರಹಿಸಿದರು.

    ಸಮಿತಿ ಸಂಚಾಲಕ ಮಹ್ಮದ್ ನಿಜಾಮುದ್ದೀನ್, ಜಿಪಂ ಸದಸ್ಯ ಖಾಸಿಂ ನಾಯಕ್, ಮುಖಂಡರಾದ ಡಾ.ಲಕ್ಷ್ಮಿಕಾಂತ, ಹರಿಶ್ಚಂದ್ರರೆಡ್ಡಿ, ಬಸವರಾಜ ಹೂಗಾರ, ಕೆ.ಲಕ್ಷ್ಮಿಪತಿ, ಕೆ.ನಲ್ಲಾರೆಡ್ಡಿ ನಾಯಕ, ವಿದ್ಯಾನಂದರೆಡ್ಡಿ, ಸತ್ಯನಾರಾಯಣ ಶೆಟ್ಟಿ, ಸುಶೀಲಮ್ಮ, ಮಂಗಮ್ಮ, ಶ್ರೀನಿವಾಸರೆಡ್ಡಿ, ಮಹ್ಮದ್ ಅಜೀಜ್, ವೆಂಕಟೇಶ ಶೆಟ್ಟಿ ಹಾಗೂ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts