More

    ಮಕ್ಕಳಿಗೆ ಪೌಷ್ಟಿಕ ಆಹಾರ ಸಮರ್ಪಕ ವಿತರಿಸುತ್ತಿಲ್ಲ ಎಂದು ಜಿಪಂ ಸಿಇಒಗೆ ಮುರಡಿ ಗ್ರಾಮಸ್ಥರ ಆರೋಪ

    ಅಂಗನವಾಡಿ ಕೇಂದ್ರಕ್ಕೆ ಭೇಟಿ | ಮಕ್ಕಳ ದಾಖಲಾತಿ, ಅಡುಗೆ ಕೊಠಡಿ ವೀಕ್ಷಣೆ

    ಯಲಬುರ್ಗಾ: ತಾಲೂಕಿನ ಮುರಡಿ ಗ್ರಾಮದ ಒಂದನೇ ಅಂಗನವಾಡಿ ಕೇಂದ್ರಕ್ಕೆ ಜಿಪಂ ಸಿಇಒ ರಘುನಂದನ್ ಮೂರ್ತಿ ಸೋಮವಾರ ಭೇಟಿ ನೀಡಿ ಮಕ್ಕಳ ದಾಖಲೆ ಹಾಗೂ ಅಡುಗೆ ಕೊಠಡಿ ವೀಕ್ಷಿಸಿದರು.

    ದಾಖಲಾತಿ ಪರಿಶೀಲಿಸುವ ವೇಳೆ ಹಾಜರಾತಿಯಲ್ಲಿ ಮಕ್ಕಳ ಸಂಖ್ಯೆ ಅಧಿಕವಿದ್ದು, ಗೈರಾದ ಮಕ್ಕಳು ಹೆಚ್ಚಿರುವುದು ಕಂಡು ಬಂತು. ಅಂಗನವಾಡಿ ಮೇಲ್ವಿಚಾರಕಿ ಹಾಗೂ ಕಾರ್ಯಕರ್ತೆಯರು ಗೈರಾಗಿದ್ದು, ಸಮರ್ಪಕ ಮಾಹಿತಿ ಪಡೆಯಲು ಸಿಇಒಗೆ ತೊಂದರೆಯಾಯಿತು.

    ಮಕ್ಕಳಿಗೆ ಸಮರ್ಪಕವಾಗಿ ಪೌಷ್ಟಿಕ ಆಹಾರ ವಿತರಿಸುತ್ತಿಲ್ಲ. ಗರ್ಭಿಣಿ, ಬಾಣಂತಿಯರಿಗೆ ಸರ್ಕಾರದ ಯೋಜನೆಗಳು ಸಮರ್ಪಕವಾಗಿ ತಲುಪಿಸುತ್ತಿಲ್ಲ, ಅಂಗನವಾಡಿ ಮೇಲ್ವಿಚಾರಕರು ಕೇಂದ್ರಕ್ಕೆ ಭೇಟಿ ನೀಡುತ್ತಿಲ್ಲ. ಈ ಕುರಿತು ಸಂಬಂಧಿಸಿದ ಮೇಲಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಾರ್ವಜನಿಕರು, ಸಿಇಒ ಗಮನಕ್ಕೆ ತಂದರು.

    ಬಳಿಕ ಸಿಇಒ ರಘುನಂದನ್ ಮೂರ್ತಿ, ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿಗೆ ದೂರವಾಣಿ ಮೂಲಕ ಕರೆ ಮಾಡಿ, ಗ್ರಾಮೀಣ ಪ್ರದೇಶದ ಮಕ್ಕಳಿಗೆ ಸರಿಯಾಗಿ ಆಹಾರ ಪೂರೈಕೆ, ಮಕ್ಕಳ ಹಾಜರಾತಿ ಹೆಚ್ಚಳ, ಮಕ್ಕಳಿಗೆ ವೈದ್ಯಕೀಯ ಪರೀಕ್ಷೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

    ಶುದ್ಧ ಕುಡಿವ ನೀರಿನ ಘಟಕಕ್ಕೆ ಭೇಟಿ: ಗ್ರಾಪಂ ಕಚೇರಿ ಹತ್ತಿರದ ಶುದ್ಧ ಕುಡಿವ ನೀರಿನ ಘಟಕಕ್ಕೆ ಸಿಇಒ ಭೇಟಿ ನೀಡಿ ನೀರಿನ ಗುಣಮಟ್ಟ ಪರೀಕ್ಷಿಸಿದರು. ಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಅಂಗನವಾಡಿ ಕೇಂದ್ರಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಪಿಡಿಒಗೆ ಸೂಚಿಸಿದರು.

    ಶಾಲಾ ಕಟ್ಟಡ ಕಾಮಗಾರಿ ವೀಕ್ಷಣೆ: ಗ್ರಾಮದ ಹೊರ ವಲಯದಲ್ಲಿ ನಿರ್ಮಾಣ ಹಂತದ ಆರ್‌ಎಂಎಸ್‌ಎ ಪ್ರೌಢ ಶಾಲೆ ಕಟ್ಟಡ ಕಾಮಗಾರಿ ಸ್ಥಳಕ್ಕೆ ರಘುನಂದನ್ ಮೂರ್ತಿ ಭೇಟಿ ನೀಡಿ ವೀಕ್ಷಿಸಿದರು. ಕಟ್ಟಡ ಕಾಮಗಾರಿ ವಿಳಂಬ ಕುರಿತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಾಹಿತಿ ಪಡೆದರು. ಕಾಮಗಾರಿ ತ್ವರಿತ ಗತಿಯಲ್ಲಿ ಪ್ರಾರಂಭಿಸಲು ದೂರವಾಣಿ ಮೂಲಕ ಸೂಚಿಸಿದರು.

    ಗ್ರಾಪಂ ವ್ಯಾಪ್ತಿಯಲ್ಲಿ ನಿರ್ಮಿಸಲಾದ ಬೋರ್‌ವೆಲ್ ರೀಚಾರ್ಜ್ ಪಿಟ್‌ನ್ನು ಸಿಇಒ ವೀಕ್ಷಿಸುವ ಸಂದರ್ಭ ಗ್ರಾಪಂ ಅಧ್ಯಕ್ಷ ಭೀಮಜ್ಜ ಗುರಿಕಾರ್, ಗ್ರಾಪಂ ವ್ಯಾಪ್ತಿಯ ಒಂಬತ್ತು ಕಡೆ ಬೋರ್‌ವೆಲ್ ರೀಚಾಜ್‌ಪಿಟ್ ನಿರ್ಮಿಸಲಾಗಿದೆ ಎಂದು ಗಮನಕ್ಕೆ ತಂದರು.

    ಪಿಡಿಒ ಹನುಮಂತರಾಯ ಯಂಕಂಚಿ, ಸದಸ್ಯ ಶರಣಪ್ಪ ಕುರನಾಳ, ಕಾರ್ಯದರ್ಶಿ ಪ್ರಕಾಶ ಕಾರಟಗಿ ಹಾಗೂ ಗ್ರಾಮಸ್ಥರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts