More

    ಯಲ್ಲಮ್ಮದೇವಿ ದೇವಸ್ಥಾನ ಜಲಾವೃತ

    ಕೊಕಟನೂರ: ಅಥಣಿ ತಾಲೂಕಿನಾದ್ಯಂತ ಬಿಟ್ಟು ಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಗೆ ಜನ-ಜೀವನ ಅಸ್ತವ್ಯಸ್ತವಾಗಿದ್ದು, ಇಲ್ಲಿಯ ಕೊಕಟನೂರ ಯಲ್ಲಮ್ಮದೇವಿ ದೇವಸ್ಥಾನ ಸಂಪೂರ್ಣ ಮುಳುಗಿದೆ. ದೇವಸ್ಥಾನದ ಎದುರಿನಲ್ಲಿರುವ ಹಿರೇ ಹಳ್ಳ, ಹೊಳೆಯಂತೆ ಉಕ್ಕಿ ಹರಿಯುತ್ತಿದೆ. ಇದರಿಂದ ದೇವಸ್ಥಾನ ಜಲಾವೃತಗೊಂಡಿದ್ದು, ಭಕ್ತರು ದೂರದಿಂದಲೇ ದೇವಿ ದರ್ಶನ ಪಡೆದು ತೆರಳುತ್ತಿದ್ದಾರೆ. ತಾಲೂಕಿನ ವಿವಿಧ ಗ್ರಾಮಗಳಲ್ಲಿನ ಮಣ್ಣಿನ ಮನೆಗಳು ಸೋರುತ್ತಿವೆ. ಇಂತಹದ್ದರಲ್ಲಿಯೇ ಕಟುಂಬಸ್ಥರು ಅನಿವಾರ್ಯವಾಗಿ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ಮಳೆಗೆ ಹಲವಾರು ಮನೆಗಳ ಗೋಡೆಗಳು ಬಿದ್ದಿವೆ. ರಸ್ತೆಗಳು ಬಂದ್ ಆಗಿವೆ. ಅಡಹಳ್ಳಿ ಗ್ರಾಮದಲ್ಲಿ ಬುಧವಾರದ ಸಂತೆಗೆ ಜನರು ಬರಲೇ ಇಲ್ಲ.

    ಕೊಳೆಯುತ್ತಿರುವ ಬೆಳೆಗಳು: ಮೆಕ್ಕೆಜೋಳ, ಹೈಬ್ರಿಡ್ ಜೋಳ, ಶೇಂಗಾ ಸೇರಿ ವಿವಿಧ ಬೆಳೆಗಳು ಕಟಾವಿಗೆ ಬಂದಿದ್ದು, ಜೋರಾದ ಮಳೆಗೆ ನೆಲಕ್ಕುರುಳಿವೆ. ಮುಂಗಾರು ಬೆಳೆ ಕಟಾವು ಮಾಡಿ, ಹಿಂಗಾರು ಬೆಳೆಗಳ ಬಿತ್ತನೆಗೆ ಸಿದ್ಧತೆಗಾಗಿ ಒಂದು ತಿಂಗಳಾದರೂ ಸಮಯ ಬೇಕು. ಆದರೆ, ಬಹುತೇಕ ಜಮೀನುಗಳಲ್ಲಿ ನೀರು ನಿಂತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts