More

    ಕೃಷಿ ಪತ್ತಿನ ಸಂಘದ ನಾಗರಾಜು ಉಪಾಧ್ಯಕ್ಷ

    ಯಳಂದೂರು: ತಾಲೂಕಿನ ಅಗರ-ಮಾಂಬಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಉಪಾಧ್ಯಕ್ಷರಾಗಿ ನಾಗರಾಜು ಅವಿರೋಧವಾಗಿ ಆಯ್ಕೆಯಾದರು.

    ನಾಗಮ್ಮ ಪುಟ್ಟಮಾದಯ್ಯ ರಾಜೀನಾಮೆ ನೀಡಿ ತೆರವಾಗಿದ್ದ ಸ್ಥಾನಕ್ಕೆ ಮಂಗಳವಾರ ಅಗರ ಗ್ರಾಮದಲ್ಲಿರುವ ಸಂಘದ ಕಚೇರಿಯಲ್ಲಿ ಚುನಾವಣೆ ನಿಗದಿಯಾಗಿತ್ತು. ನಾಗರಾಜು ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಯಾಗಿದ್ದ ಸಹಕಾರ ಇಲಾಖೆಯ ಸಿಡಿಪಿಒ ಸುಭಾಷಿಣಿ ಅವಿರೋಧ ಆಯ್ಕೆ ಘೋಷಿಸಿದರು.

    ನೂತನ ಉಪಾಧ್ಯಕ್ಷ ನಾಗರಾಜು ಮಾತನಾಡಿ, ಈ ಸಹಕಾರ ಸಂಘಕ್ಕೆ ದಶಕಗಳ ಇತಿಹಾಸ ಇದೆ. ಹಲವು ಏಳುಬೀಳುಗಳ ನಡುವೆ ಈ ಸಂಘ ಮತ್ತೆ ಚೇತರಿಕೆಯ ಹಾದಿಯಲ್ಲಿದೆ. ಸಾವಿರಾರು ಸದಸ್ಯರು ಹೊಂದಿರುವ ಸಂಘದಲ್ಲಿ 221 ಮಂದಿಗೆ ಸಾಲ ವಿತರಣೆ ಮಾಡಲಾಗಿದ್ದು, ಪ್ರಸಕ್ತ ಸಾಲಿನಲ್ಲಿ 2 ಕೋಟಿ ರೂ. ಸಾಲ ಮರುಪಾವತಿ ಮಾಡಲಾಗಿದೆ. ಹೊಸದಾಗಿ 50 ಲಕ್ಷ ರೂ. ಸಾಲ ಪಡೆದುಕೊಳ್ಳಲು ಮೈಸೂರು-ಚಾಮರಾಜನಗರ ಜಿಲ್ಲಾ ಸಹಕಾರ ಬ್ಯಾಂಕ್‌ಗೆ ಮನವಿ ಮಾಡಲಾಗಿದೆ. ಇದನ್ನು ಕೂಡ ವಿತರಿಸಲು ಕ್ರಮ ವಹಿಸಲಾಗುವುದು. ತಮ್ಮ ಅಧಿಕಾರಾವಧಿಯಲ್ಲಿ ಈ ಸಹಕಾರ ಸಂಘವು ಲಾಭ ಗಳಿಸಲು ಬೇಕಾದ ಎಲ್ಲ ಕ್ರಮ ವಹಿಸಲಾಗುವುದು ಎಂದರು.

    ಸಂಘದ ಅಧ್ಯಕ್ಷ ಎ.ಬಿ.ಜಯಶಂಕರ್, ನಿರ್ದೇಶಕರಾದ ಮಾಂಬಳ್ಳಿ ನಂಜುಂಡಸ್ವಾಮಿ, ಅಗರ ವೆಂಕಟೇಶ್, ಪುಟ್ಟಸುಬ್ಬಪ್ಪ, ವಿ.ಸೋಮಣ್ಣ, ನಾಗಮ್ಮ ಪುಟ್ಟಮಾದಯ್ಯ, ಚಂದ್ರಶೇಖರ್, ಮಹದೇವಯ್ಯ, ಕೃಷ್ಣಮೂರ್ತಿ, ಎಂ.ಮಹೇಶ್, ಶಿಲ್ಪಾ ಕಾರ್ಯದರ್ಶಿ ಶಶಿಧರ್, ಜಿಲ್ಲಾ ಮೇಲ್ವಿಚಾರಕ ಅನಿಲ್‌ಕುಮಾರ್, ಸಲಹೆಗಾರ ಲಿಂಗಯ್ಯ ಜಿಪಂ ಮಾಜಿ ಉಪಾಧ್ಯಕ್ಷ ಕಿನಕಹಳ್ಳಿ ಸಿದ್ದರಾಜು, ರಾಚಪ್ಪ ಸೇರಿದಂತೆ ಅನೇಕರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts