More

    ಬಿಳಿಗಿರಿರಂಗನಬೆಟ್ಟದಲ್ಲಿ ರೊಟ್ಟಿ ಹಬ್ಬ ಆಚರಣೆ

    ಯಳಂದೂರು : ಸೋಲಿಗ ಸಮುದಾಯದ ವಿಶಿಷ್ಟ ಆಚರಣೆಯಾದ ರೊಟ್ಟಿ ಹಬ್ಬವನ್ನು ಸೋಮವಾರ ತಾಲೂಕಿನ ಬಿಳಿಗಿರಿರಂಗನಬೆಟ್ಟ ಮುತ್ತುಗದಗದ್ದೆ ಪೋಡಿನ ಗಿರಿಜನರು ಸಂಭ್ರಮದಿಂದ ಆಚರಿಸಿದರು.

    ಮುತ್ತುಗದಗದ್ದೆ ಪೋಡಿನ ಸೋಲಿಗ ಜನಾಂಗದವರು ಹತ್ತಿರದಲ್ಲಿರುವ ತೊಂಡೆಹಣ್ಣು ಪೋಡಿಗೆ ತೆರಳಿ ಕುಂಬೇಶ್ವರ ದೇವಸ್ಥಾನವನ್ನು ತಳಿರು ತೋರಣಗಳಿಂದ ಸಿಂಗರಿಸಿದರು. ನಂತರ ಪ್ರತಿ ಕುಟುಂಬವರೂ ಮೊದಲ ಫಸಲಿನಿಂದ ಬಂದ ರಾಗಿಯಿಂದ ಹಿಟ್ಟು ತಯಾರಿಸಿ, ಮುತ್ತುಗದ ಎಲೆಯಲ್ಲಿ ರೊಟ್ಟಿ ಮಾಡಿ ದೇವರಿಗೆ ಅರ್ಪಿಸಿ ಪೂಜೆ ಸಲ್ಲಿಸಿದರು. ನಂತರ ಸಂಜೆ ಒಟ್ಟಾಗಿ ನೃತ್ಯ ಮಾಡಿ ಭೋಜನ ಸವಿದು ಸಂಭ್ರಮಿಸಿದರು. ಬೆಳೆದ ರಾಗಿಯಿಂದ ತಯಾರಿಸಿದ ರೊಟ್ಟಿ ನೈವೇದ್ಯಕ್ಕೆ ಇಟ್ಟು ಪೂಜೆ ಸಲ್ಲಿಸಿದರು.

    ಹಬ್ಬದ ವಿಶೇಷ: ಬೆಳೆದ ರಾಗಿ ಫಸಲಿನಿಂದ ರೊಟ್ಟಿ ತಯಾರಿಸಿ ಸಾಮೂಹಿಕವಾಗಿ ದೇವರಿಗೆ ನೈವೇದ್ಯ ಇಟ್ಟು ಸಹಪಂಕ್ತಿ ಭೋಜನ ಮಾಡುವುದೇ ರೊಟ್ಟಿ ಹಬ್ಬದ ವಿಶೇಷ. ಇದು ಸೋಲಿಗರ ಪ್ರಮುಖ ಹಬ್ಬಗಳಲ್ಲಿ ಒಂದು. ಮೊದಲ ರಾಗಿ ಫಸಲನ್ನು ದೇವರಿಗೆ ಅರ್ಪಿಸಿ ದೇವರಿಗೆ ಹರಕೆ ಸಲ್ಲಿಸುವ ತನಕ ಮೊದಲ ಫಸಲಿನ ರಾಗಿಯನ್ನು ಸೋಲಿಗರು ಉಪಯೋಗಿಸುವುದಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts