More

    ಚಿಕಿತ್ಸೆಗೆ ಸ್ಪಂದಿಸದೆ ಬೈಕ್ ಸವಾರ ಸಾವು

    ಯಳಂದೂರು(ಚಾಮರಾಜನಗರ): ತಾಲೂಕಿನ ಕೃಷ್ಣಪುರ ಗ್ರಾಮದ ಕರುಣಾ ಟ್ರಸ್ಟ್ ಸಮೀಪದ ಸೇತುವೆ ಬಳಿ ಇತ್ತೀಚೆಗೆ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬೈಕ್ ಸವಾರ ಶುಕ್ರವಾರ ರಾತ್ರಿ ಸಾವಿಗೀಡಾಗಿದ್ದಾರೆ. ಕೆ.ದೇವರಹಳ್ಳಿ ಗ್ರಾಮದ ನಿವಾಸಿ ನಂಜೇಗೌಡ (45) ಮೃತಪಟ್ಟವರು.


    ನ.28ರಂದು ಮಧ್ಯಾಹ್ನ ಕೆ.ದೇವರಹಳ್ಳಿ ಗ್ರಾಮದ ಜಡೇಗೌಡ (23), ನಂಜೇಗೌಡ (45) ಇಬ್ಬರು ಕೆಲಸ ನಿಮಿತ್ತ ಯಳಂದೂರು ಪಟ್ಟಣಕ್ಕೆ ಆಗಮಿಸಿ ನಂತರ ಗ್ರಾಮಕ್ಕೆ ಹೋಗುವ ಮಾರ್ಗದಲ್ಲಿ ಸವಾರನ ಅತಿವೇಗದಿಂದ ನಿಯಂತ್ರಣ ಕಳೆದುಕೊಂಡ ಬೈಕ್ ಅಪಘಾತವಾಗಿತ್ತು. ಗಾಯಗೊಂಡಿದ್ದ ಸವಾರ ಜಡೇಗೌಡರನ್ನು ಚಾಮರಾಜನಗರದ ಸರ್ಕಾರಿ ಆಸ್ಪತ್ರೆ ಹಾಗೂ ಹಿಂಬದಿ ಕುಳಿತ್ತಿದ್ದ ನಂಜೇಗೌಡರ ತಲೆಗೆ ತೀವ್ರವಾಗಿ ಗಾಯವಾಗಿದ್ದರಿಂದ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ನಂಜೇಗೌಡ ಶುಕ್ರವಾರ ರಾತ್ರಿ ಮೃತಪಟ್ಟಿದ್ದಾರೆ. ಯಳಂದೂರು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts