More

    ವರ್ಗಾವಣೆ ಕರಡು ನಿಯಮಕ್ಕೆ ಶಿಕ್ಷಕರ ಸಂಘದಿಂದ ಆಕ್ಷೇಪ

    ಯಲಬುರ್ಗಾ: ವರ್ಗಾವಣೆ ಕರಡು ನಿಯಮಗಳಿಗೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಯಲಬುರ್ಗಾ ಹಾಗೂ ಕುಕನೂರು ಘಟಕದಿಂದ ಬಿಇಒ ಬಿ.ಮೌನೇಶ ಮೂಲಕ ಶಿಕ್ಷಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಬುಧವಾರ ಆಕ್ಷೇಪಣೆ ಸಲ್ಲಿಸಲಾಯಿತು.

    ಸಂಘದ ಯಲಬುರ್ಗಾ ತಾಲೂಕು ಅಧ್ಯಕ್ಷ ಎಸ್.ವಿ.ಧರಣಾ ಹಾಗೂ ಪ್ರಧಾನ ಕಾರ್ಯದರ್ಶಿ ಸಿದ್ದಲಿಂಗಪ್ಪ ಶ್ಯಾಗೋಟಿ ಮಾತನಾಡಿ, ಹೆಚ್ಚುವರಿ ಶಿಕ್ಷಕರನ್ನು ಒಳಗೊಂಡಂತೆ ತಾಲೂಕಿನೊಳಗೇ ವರ್ಗಾವಣೆಗೆ ಅವಕಾಶ ಕಲ್ಪಿಸಬೇಕು. ಶೇ.25 ಕ್ಕಿಂತ ಹೆಚ್ಚು ಹುದ್ದೆ ಖಾಲಿ ಇರುವ ತಾಲೂಕಿನಿಂದ ವರ್ಗಾವಣೆ ಇಲ್ಲ. ಪರಸ್ಪರ ವರ್ಗಾವಣೆಗೆ 7 ವರ್ಷ ಸೇವೆ ಸಲ್ಲಿಸಿರಬೇಕು ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ 10 ವರ್ಷ ಸೇವೆ ಸಲ್ಲಿಸಿರಬೇಕು. ವಿಧವಾ ಪ್ರಕರಣದಲ್ಲಿ 12 ವರ್ಷದೊಳಗಿನ ಮಕ್ಕಳನ್ನು ಹೊಂದಿರಬೇಕು ಎಂಬ ನಿಯಮಗಳನ್ನು ಕೈಬಿಡಬೇಕೆಂದು ಒತ್ತಾಯಿಸಲಾಯಿತು.

    ಸಂಘದ ತಾಲೂಕು ಘಟಕದ ಗೌರವ ಅಧ್ಯಕ್ಷ ಶರಣಯ್ಯ ಸರಗಣಾಚಾರ, ಕುಕನೂರು ತಾಲೂಕು ಅಧ್ಯಕ್ಷ ಮಾರುತೇಶ ತಳವಾರ್, ಖಜಾಂಚಿ ಅಬ್ದುಲ್ ಖದೀರ್, ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶಶಿಧರ ಮಾಲಿ ಪಾಟೀಲ್, ಜಿಲ್ಲಾ ಉಪಾಧ್ಯಕ್ಷ ಶ್ರೀಕಾಂತ ಮಾಸಗಟ್ಟಿ, ಮುರ್ತುಜಾ ಸಾಬ್ ಮುಜಾವರ, ಅರುಣ್ ಕುಮಾರ್ ಸಾಲಿಮಠ, ನಿಂಗಪ್ಪ ಯರಾಶಿ ಮತ್ತು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts