More

    ಧೂಮಪಾನ ನಿಷೇಧ ನಾಮಫಲಕ ಅಳವಡಿಸುವಂತೆ ಪಿಎಸ್‌ಐ ಸೂಚನೆ

    ಯಲಬುರ್ಗಾ: ಅಂಗಡಿಗಳಿಗೆ ಕಡ್ಡಾಯವಾಗಿ ಧೂಮಪಾನ ನಿಷೇಧ ನಾಮಫಲಕ ಅಳವಡಿಸಬೇಕು ಎಂದು ಪಿಎಸ್‌ಐ ಶಂಕರ ನಾಯಕ್ ಹೇಳಿದರು.

    ತಾಲೂಕಿನ ಬೇವೂರಲ್ಲಿ ಪೊಲೀಸ್ ಠಾಣೆಯಿಂದ ಭಾನುವಾರ ಹಮ್ಮಿಕೊಂಡಿದ್ದ ಧೂಮಪಾನ ನಿಷೇಧ ನಾಮಫಲಕ ಅಳವಡಿಕೆ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು. ಧೂಮಪಾನ ಆರೋಗ್ಯಕ್ಕೆ ಹಾನಿಕಾರಕವಾಗಿದ್ದು, ಪಾನ್‌ಶಾಪ್, ಕಿರಾಣಿ ಸೇರಿ ಇನ್ನಿತರ ಅಂಗಡಿಗಳಲ್ಲಿ ಫಲಕ ಅಳವಡಿಸಿ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು. 18 ವರ್ಷದೊಳಗಿನ ಯುವಕರಿಗೆ ತಂಬಾಕು ಉತ್ಪನ್ನ ಮಾರಾಟ ಮಾಡಬಾರದು. ಮಾದಕ ವಸ್ತುಗಳ ಸೇವನೆ ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಫಲಕ ಅಳವಡಿಸದಿದ್ದರೆ, 200 ರೂ. ದಂಡ ವಿಧಿಸಲಾಗುತ್ತದೆ ಎಂದರು.

    ಅಧಿಕಾರಿಗಳಾದ ಹೆಡ್ ಕಾನ್ಸ್‌ಟೆಬಲ್ ಚೆನ್ನಪ್ಪ, ಪೊಲೀಸ್ ಕಾನ್ಸ್‌ಟೆಬಲ್ ಮರಿಸ್ವಾಮಿ, ವಕೀಲ ಮಲ್ಲನಗೌಡ ಪಾಟೀಲ್, ಕರವೇ ಯುವಸೇನೆ ಜಿಲ್ಲಾಧ್ಯಕ್ಷ ಬಸವರಾಜ ಹಳ್ಳಿ ಸೇರಿ ಇನ್ನಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts