More

    ವಚನ ಪಠಣದಿಂದ ಮನಸ್ಸಿಗೆ ನೆಮ್ಮದಿ; ರಾಷ್ಟ್ರೀಯ ಬಸವ ದಳದ ಬಸವರಾಜ ಹೂಗಾರ ಅಭಿಮತ

    ಯಲಬುರ್ಗಾ: ನಿತ್ಯವೂ ಇಷ್ಟಲಿಂಗ ಪೂಜೆ, ವಚನ ಪಠಣ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ, ಚೈತನ್ಯ ಲಭಿಸುತ್ತದೆ ಎಂದು ರಾಷ್ಟ್ರೀಯ ಬಸವ ದಳದ ಗ್ರಾಮ ಘಟಕ ಕಾರ್ಯದರ್ಶಿ ಬಸವರಾಜ ಹೂಗಾರ ಹೇಳಿದರು.

    ಗುಳೆ ಗ್ರಾಮದಲ್ಲಿ ರಾಷ್ಟ್ರೀಯ ಬಸವ ದಳ ಹಾಗೂ ಅಕ್ಕ ನಾಗಲಾಂಬಿಕೆ ಬಳಗದಿಂದ ಶ್ರಾವಣ ಮಾಸದ ನಿಮಿತ್ತ ಗುರುವಾರ ಹಮ್ಮಿಕೊಂಡಿದ್ದ ಮನೆ ಮನೆಗೂ ವಚನ ಜ್ಯೋತಿ ವಚನ ಪಠಣ ಸಂಪನ್ನ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಸವಣ್ಣನವರು ಕೊಟ್ಟ ಧರ್ಮವು ಒಂದು ಜಾತಿಗೆ ಸೀಮಿತವಾಗದೆ ವ್ಯಾಪಕವಾಗಿ ಬೆಳೆಯಬೇಕು. ಹಬ್ಬ ಹರಿದಿನಗಳಲ್ಲಿ ಮಾತ್ರ ಪ್ರಾರ್ಥನೆ, ಪೂಜೆ ಸಲ್ಲಿಸದೆ, ಪ್ರತಿದಿನ ಬಸವಾದಿ ಶರಣರನ್ನು ಸ್ಮರಿಸಬೇಕು. ಅದರಿಂದ ಅವರ ತತ್ವ, ಆದರ್ಶ ಅರಿವಾಗಿ ಸರಿದಾರಿಯಲ್ಲಿ ನಡೆಯಲು ಸಾಧ್ಯ ಎಂದರು. ಬಸವ ದಳದ ಗ್ರಾಮ ಘಟಕದ ಅಧ್ಯಕ್ಷ ರೇಣುಕಪ್ಪ ಮಂತ್ರಿ, ಎಸ್ಡಿಎಂಸಿ ಅಧ್ಯಕ್ಷ ಶರಣಪ್ಪ ಹೊಸಳ್ಳಿ, ಮುಖಂಡ ದೇವೇಂದ್ರಪ್ಪ ಆವಾರಿ ಮಾತನಾಡಿದರು. ಪ್ರಮುಖರಾದ ನಾಗನಗೌಡ ಜಾಲಿಹಾಳ, ಲಿಂಗನಗೌಡ, ಮಲ್ಲೇಶಪ್ಪ ಟೈಲರ್, ಮಂಜುನಾಥ ಉಚ್ಚಲಕುಂಟಿ, ಗಿರಿಮಲ್ಲಪ್ಪ ವನಜಭಾವಿ, ಬಸಣ್ಣ ಹೊಸಳ್ಳಿ, ಲಿಂಗನಗೌಡ ದಳಪತಿ, ಪಂಪಣ್ಣ ಹೊಸಳ್ಳಿ, ಜಗದೀಶ ಮೇಟಿ, ನಾಗಲಾಂಬಿಕೆ ಬಳಗದ ಗುರುಲಿಂಗಮ್ಮ ಹೊಸಳ್ಳಿ, ಶರಣಮ್ಮ ಹೊಸಳ್ಳಿ, ನಾಗಮ್ಮ ಜಾಲಿಹಾಳ, ನಿಂಗಮ್ಮ ಕೋಳೂರು, ಚನ್ನಮ್ಮ ಮಂತ್ರಿ, ಯಮನಮ್ಮ ಗೌಡ್ರ, ಪಾರ್ವತಮ್ಮ ಮಂತ್ರಿ, ಸಾವಿತ್ರಮ್ಮ ಆವಾರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts