More

    ಸಮಸ್ಯೆ ಇತ್ಯರ್ಥಕ್ಕೆ ಗ್ರಾಮವಾಸ್ತವ್ಯ ಉತ್ತಮ ವೇದಿಕೆ: ಯಲಬುರ್ಗಾ ತಹಸೀಲ್ದಾರ್ ಶ್ರೀಶೈಲ ತಳವಾರ್ ಹೇಳಿಕೆ

    ಯಲಬುರ್ಗಾ: ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ ಗ್ರಾಮೀಣ ಭಾಗದ ಜನರ ಅಹವಾಲುಗಳನ್ನು ಸ್ಥಳದಲ್ಲಿಯೇ ಪರಿಹರಿಸಲು ಉತ್ತಮ ವೇದಿಕೆಯಾಗಿದೆ ಎಂದು ತಹಸೀಲ್ದಾರ್ ಶ್ರೀಶೈಲ ತಳವಾರ್ ಹೇಳಿದರು.

    ಹುಲೇಗುಡ್ಡ ಗ್ರಾಮದಲ್ಲಿ ತಾಲೂಕಾಡಳಿತ ಶನಿವಾರ ಹಮ್ಮಿಕೊಂಡಿದ್ದ ಗ್ರಾಮವಾಸ್ತವ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸರ್ಕಾರಿ ಕಚೇರಿಗೆ ಅಲೆದಾಟ ತಪ್ಪಿಸಲು, ವಿವಿಧ ಯೋಜನೆಗಳನ್ನು ಮನೆ ಬಾಗಿಲಿಗೆ ತಲುಪಿಸುವುದು ಸರ್ಕಾರದ ಉದ್ದೇಶವಾಗಿದೆ. ವೃದ್ಧಾಪ್ಯ, ವಿಧವಾ ವೇತನ, ಪಹಣಿ ತಿದ್ದುಪಡಿ ಸಮಸ್ಯೆಗಳ ಪರಿಹರಿಸಿಕೊಳ್ಳಲು ಅಹವಾಲು ಸಲ್ಲಿಸಿ ಇತ್ಯರ್ಥ ಪಡಿಸಿಕೊಳ್ಳಬೇಕು ಎಂದರು. ಇದೇ ವೇಳೆ ಅರ್ಹ ಫಲಾನುಭವಿಗಳಿಗೆ ಹಲವು ಯೋಜನೆಗಳ ಮಂಜೂರಾತಿ ಪತ್ರ ವಿತರಿಸಲಾಯಿತು. ವಿವಿಧ ಇಲಾಖೆಗಳಿಂದ ಯೋಜನೆಗಳ ಮಾಹಿತಿ ಕೇಂದ್ರ ತೆರೆಯಲಾಗಿತ್ತು.

    ಗ್ರಾಪಂ ಅಧ್ಯಕ್ಷೆ ಶೇಖವ್ವ ತಿರುಪತಿ ಬಸರಿಗಿಡದ, ಉಪಾಧ್ಯಕ್ಷ ಬಾಳನಗೌಡ ಸಣ್ಣಗೌಡ್ರ, ಸದಸ್ಯರಾದ ಶರಣಪ್ಪ ಕೊಪ್ಪದ, ಸುಭಾಷ್ ಕೊಂಗಿ, ಯಮನಗೌಡ ಪೊಲೀಸ್ ಪಾಟೀಲ್, ಯಂಕಪ್ಪ ಜುಟ್ಲರ್, ನಾಗರಾಜ ನಾಯ್ಕ, ಎಸ್ಡಿಎಂಸಿ ಅಧ್ಯಕ್ಷ ಲಕ್ಷ್ಮಣ ಚಿಂಚಲರ್, ತಾಪಂ ಇಒ ಸಂತೋಷ ಪಾಟೀಲ್, ಬಿಇಒ ಪದ್ಮನಾಭ ಕರ್ಣಂ, ಪ್ರಮುಖರಾದ ಶರಣಗೌಡ ಮಾಲಿಪಾಟೀಲ್, ಬಾಳಪ್ಪ ಬಂಡ್ಲಿ, ಹನುಮಗೌಡ ಮಾಲಿಗೌಡ್ರ, ಭೀಮಣ್ಣ ಮುರಡಿ, ಗ್ರಾಪಂ ಕಾರ್ಯದರ್ಶಿ ಚನ್ನಪ್ಪ, ಕರವಸೂಲಿಗಾರ ಕಳಕಯ್ಯ ಹಿರೇಮಠ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts