More

    ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಿ: ಅಧಿಕಾರಿಗಳಿಗೆ ಸಚಿವ ಹಲಪ್ಪ ಆಚಾರ್ ಸೂಚನೆ

    ಯಲಬುರ್ಗಾ: ಜನರ ನಿರೀಕ್ಷೆಗೆ ತಕ್ಕಂತೆ ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂದು ಸಚಿವ ಹಾಲಪ್ಪ ಆಚಾರ್ ತಿಳಿಸಿದರು.

    ಸಂಗನಾಳ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ ಹಾಗೂ ವಸತಿ ಗೃಹ ನಿರ್ಮಾಣ ಕಾಮಗಾರಿಗೆ ಗುರುವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಗ್ರಾಮೀಣ ಪ್ರದೇಶದ ಜನರ ಆರೋಗ್ಯದ ದೃಷ್ಟಿಯಿಂದ ಸರ್ಕಾರ ಅನೇಕ ಯೋಜನೆ ಜಾರಿಗೊಳಿಸಿದ್ದು, ಸದ್ಬಳಕೆಯಾಗಬೇಕು. ಯರಿ ಭಾಗದ ಕೆರೆಗಳ ಪುನಶ್ಚೇತನಕ್ಕೆ ಅನುದಾನ ನೀಡುವ ಮೂಲಕ ಕುಡಿವ ನೀರಿನ ದಾಹ ನೀಗಿಸಲಾಗಿದೆ. ಸಿಎಂ ಬೊಮ್ಮಾಯಿ ಉತ್ತರ ಕರ್ನಾಟಕದ ಎಲ್ಲ ನೀರಾವರಿಗೆ ಯೋಜನೆಗಳಿಗೆ ಅನುದಾನ ನೀಡಿ ಕಾಮಗಾರಿ ಆರಂಭಿಸಿದ್ದಾರೆ. ನೀರಾವರಿ ಬಗ್ಗೆ ಮಾತನಾಡುವ ನೈತಿಕ ಹಕ್ಕು ಕಾಂಗ್ರೆಸ್‌ಗೆ ಇಲ್ಲ. ಈಗಾಗಲೇ ದೇಶದಲ್ಲಿ ಆ ಪಕ್ಷ ಸವಕಳಿಯಾದ ನಾಣ್ಯದಂತಾಗಿದೆ ಎಂದು ದೂರಿದರು.

    ಸಂಗನಾಳದಲ್ಲಿ ನಿರಂತರ ವಿದ್ಯುತ್ ಸಂಪರ್ಕ ಕಡಿತದ ಕುರಿತು ಗ್ರಾಮಸ್ಥರು ದೂರಿದರು. ಜೆಸ್ಕಾಂ ಅಧಿಕಾರಿಗೆ ಕರೆ ಮಾಡಿದ ಸಚಿವರು, ಸಮಸ್ಯೆ ಸರಿಪಡಿಸಲು ತಿಳಿಸಿದರು. ಗ್ರಾಪಂ ಅಧ್ಯಕ್ಷೆ ಫರಿದಾ ಬೇಗಂ ಬೆಟಗೇರಿ, ಉಪಾಧ್ಯಕ್ಷೆ ಬಸಮ್ಮ ವಾಲ್ಮೀಕಿ, ಸದಸ್ಯೆ ಗಿರಿಜಾ ಸಿದ್ದರಡ್ಡಿ, ತಹಸೀಲ್ದಾರ್ ಶ್ರೀಶೈಲ ತಳವಾರ್, ಟಿಎಚ್‌ಒ ಸುಮಾ ಪಾಟೀಲ್, ಆಡಳಿತ ವೈದ್ಯಾಧಿಕಾರಿ ಅಮರೇಶ, ವೈದ್ಯಾಧಿಕಾರಿ ಸೌಭಾಗ್ಯವತಿ, ಪ್ರಮುಖರಾದ ಶೇಖರಪ್ಪ ಗುರಾಣಿ, ವೀರಣ್ಣ ಹುಬ್ಬಳ್ಳಿ, ಶರಣಪ್ಪ ಈಳಿಗೇರ್, ಈಶಪ್ಪ ಆರೇರ, ಈಶಪ್ಪ ಕೋಳೂರು, ಮಲ್ಲಪ್ಪ ಕಿನ್ನಾಳ, ಪಿಡಿಒ ಪ್ರಕಾಶ, ಗ್ರಾಮ ಆಡಳಿತಾಧಿಕಾರಿ ಬಸನಗೌಡ ರಾಮಶೆಟ್ಟರ್, ಕರವಸೂಲಿಗಾರ ಶರಣಪ್ಪ ಬಂಡಿಹಾಳ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts