More

    ಅಂಧಕಾರ, ಮೌಢ್ಯ ನಿರ್ಮೂಲನೆಗೆ ಶ್ರಮಿಸಿದ ಕನಕದಾಸರು: ಸಚಿವ ಹಾಲಪ್ಪ ಆಚಾರ್ ಅಭಿಮತ


    ಯಲಬುರ್ಗಾ: ಸಮಾಜದ ಒಳಿತಿಗಾಗಿ ಶ್ರಮಿಸಿದ ಕನಕದಾಸರ ಆದರ್ಶವನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು ಎಂದು ಸಚಿವ ಹಾಲಪ್ಪ ಆಚಾರ್ ಹೇಳಿದರು.

    ಪಟ್ಟಣದ ಕನಕದಾಸರ ವೃತ್ತದಲ್ಲಿ ತಾಲೂಕಾಡಳಿತ ಶುಕ್ರವಾರ ಹಮ್ಮಿಕೊಂಡಿದ್ದ ಜಯಂತಿ ನಿಮಿತ್ತ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದರು. ದಾಸ ಸಾಹಿತ್ಯದ ಮೂಲಕ ಸಮಾಜದಲ್ಲಿ ಅಂಧಕಾರ, ಮೌಢ್ಯ ನಿರ್ಮೂಲನೆಗಾಗಿ ಕನಕದಾಸರು ಶ್ರಮಿಸಿದ್ದಾರೆ. ಅವರ ಕೀರ್ತನೆಗಳು ಯುವ ಜನಾಂಗಕ್ಕೆ ದಾರಿದೀಪವಾಗಿವೆ. ಸಾಮಾಜಿಕ ಸಂದೇಶ ಸಾರುವ ಕನಕದಾಸರ ವಿಚಾರಗಳು ಸರ್ವಕಾಲಕ್ಕೂ ಶ್ರೇಷ್ಠವಾಗಿವೆ ಎಂದರು.

    ಹಾಲುಮತ ಸಮುದಾಯದ ತಾಲೂಕು ಅಧ್ಯಕ್ಷ ವೀರನಗೌಡ ಪಾಟೀಲ್ ಬಳೂಟಗಿ ಮಾತನಾಡಿ, ಜನವರಿಯಲ್ಲಿ ಸಂಗೊಳ್ಳಿ ರಾಯಣ್ಣನ ನೂತನ ಮೂರ್ತಿ ಸ್ಥಾಪನೆಯಾಗಲಿದೆ. ಇದಕ್ಕೆ ಸಮುದಾಯದ ಸಹಕಾರ ಅಗತ್ಯ ಎಂದರು.

    ಪಪಂ ಅಧ್ಯಕ್ಷ ಅಮರೇಶ ಹುಬ್ಬಳ್ಳಿ, ತಹಸೀಲ್ದಾರ್ ಶ್ರೀಶೈಲ ತಳವಾರ್, ಪ್ರಾಚಾರ್ಯ ಡಾ.ಎಸ್.ಜಿ.ಗುರಿಕಾರ್, ಪ್ರಮುಖರಾದ ಬಸಲಿಂಗಪ್ಪ ಭೂತೆ, ಬಸವರಾಜ ಉಳ್ಳಾಗಡ್ಡಿ, ಸಿ.ಎಚ್.ಪಾಟೀಲ್, ಕೆರಿಬಸಪ್ಪ ನಿಡಗುಂದಿ, ವೀರಣ್ಣ ಹುಬ್ಬಳ್ಳಿ, ಗದ್ದೆಪ್ಪ ಕುಡಗುಂಟಿ, ರಾಮಣ್ಣ ಸಾಲಬಾವಿ, ಹನುಮಂತಪ್ಪ ಹನುಮಾಪುರ, ಈಶ್ವರ ಅಟಮಾಳಗಿ, ರೇವಣಪ್ಪ ಹಿರೇಕುರುಬರ್, ವಸಂತ ಬಾವಿಮನಿ, ದೊಡ್ಡಯ್ಯ ಗುರುವಿನ್, ಬಸನಗೌಡ ತೊಂಡಿಹಾಳ, ಸಿದ್ರಾಮೇಶ ಬೇಲೇರಿ, ಶರಣಪ್ಪ ಗೊಲ್ಲರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts