More

    ಶರಣರ ತತ್ವಾದರ್ಶ ಅನುಸರಿಸಿ; ಬಸವ ಜಯಮೃತ್ಯಂಜಯ ಸ್ವಾಮೀಜಿ ಸಲಹೆ


    ಚಿಕ್ಕೊಪ್ಪದಲ್ಲಿ ಇಷ್ಟಲಿಂಗ ಪೂಜೆ

    ಯಲಬುರ್ಗಾ: ಪ್ರತಿಯೊಬ್ಬರೂ ಆಧ್ಯಾತ್ಮಿಕ ಮನೋಭಾವ ರೂಢಿಸಿಕೊಳ್ಳಬೇಕು. ಪಾಲಕರು ಮಕ್ಕಳಿಗೆ ಸಂಸ್ಕೃತಿ ಹಾಗೂ ಸಂಸ್ಕಾರ ಕಲಿಸಬೇಕು ಎಂದು ಕೂಡಲಸಂಗಮದ ಬಸವ ಜಯಮೃತ್ಯಂಜಯ ಸ್ವಾಮೀಜಿ ಹೇಳಿದರು.

    ತಾಲೂಕಿನ ಚಿಕ್ಕೊಪ್ಪದ ಶರಣಬಸವೇಶ್ವರ ದೇವಸ್ಥಾನದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಇಷ್ಟ ಲಿಂಗ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೋವಿಡ್ ಹಾವಳಿಯಿಂದ ಕಳೆದ ವರ್ಷದಿಂದ ಪುರಾಣ, ಪ್ರವಚನ ಕಾರ್ಯಕ್ರಮಗಳು ಸರಿಯಾಗಿ ನಡೆಯುತ್ತಿಲ್ಲ. ಎಲ್ಲರೂ ಶರಣರ ತತ್ವಾದರ್ಶಗಳನ್ನು ಅನುಸರಿಸಿಕೊಂಡು ಧರ್ಮದ ಹಾದಿಯಲ್ಲಿ ಮುನ್ನಡೆಯಬೇಕು. ಇಷ್ಟಲಿಂಗ ಪೂಜೆ ಮಾಡುವುದರಿಂದ ಏಕಾಗ್ರತೆ, ಶಾಂತಿ ಹಾಗೂ ನೆಮ್ಮದಿ ಸಿಗಲಿದೆ ಎಂದರು. ಕಿತ್ತೂರು ರಾಣಿ ಚನ್ನಮ್ಮ ನಾಮಫಲಕಕ್ಕೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಲಾಯಿತು.

    ಲಿಂಗಾಯತ ಪಂಚಮಸಾಲಿ ಸಮುದಾಯದ ಜಿಲ್ಲಾ ಅಧ್ಯಕ್ಷ ಬಸವಲಿಂಗಪ್ಪ ಭೂತೆ, ಪಪಂ ಅಧ್ಯಕ್ಷ ಅಮರೇಶ ಹುಬ್ಬಳ್ಳಿ, ಪ್ರಮುಖರಾದ ಆನಂದ ಉಳ್ಳಾಗಡ್ಡಿ, ಕೊಟ್ರಪ್ಪ ತೋಟದ್, ಶಿವನಗೌಡ, ಸುರೇಶಗೌಡ, ವೀರಣ್ಣ ಅಣ್ಣಿಗೇರಿ, ಶೇಖರಗೌಡ ಪಾಟೀಲ್, ಕೆ.ಜಿ.ಪಲ್ಲೇದ, ಮಹೇಶ ಭೂತೆ, ನಾಗಪ್ಪ ವಡ್ಡರ್, ಫಕ್ಕೀರಪ್ಪ ಕಜ್ಜಿ, ಶಂಕರಗೌಡ ಕಳಕಳಣ್ಣವರ್, ಶರಣಪ್ಪಗೌಡ ಪಾಟೀಲ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts