More

    ಬೆಳೆಗಳಿಗೆ ವೈಜ್ಞಾನಿಕ ದರ ನಿಗದಿಯಾಗಲಿ: ಐಎಫ್‌ಎಚ್‌ಡಿ ಕಂಪನಿ ಮುಖ್ಯಸ್ಥ ವೀರೇಶ ನಾಯಕ ಅನಿಸಿಕೆ

    ಯಲಬುರ್ಗಾ: ಮಾರುಕಟ್ಟೆ ಸಮಸ್ಯೆಗಳನ್ನು ನಿವಾರಿಸಲು ರೈತ ಉತ್ಪಾದಕ ಕಂಪನಿಗಳನ್ನು ಬೃಹತ್ ಮಟ್ಟದಲ್ಲಿ ಹುಟ್ಟುಹಾಕುವುದು ಅವಶ್ಯಕ ಎಂದು ಐಎಫ್‌ಎಚ್‌ಡಿ ಕಂಪನಿ ಮುಖ್ಯಸ್ಥ ವೀರೇಶ ನಾಯಕ ಹೇಳಿದರು.

    ತಾಲೂಕಿನ ಹಿರೇವಂಕಲಕುಂಟಾದಲ್ಲಿ ಕೃಷಿ ಇಲಾಖೆ ಮತ್ತು ಜೆಎಸ್‌ಡಬ್ಲ್ಯು ಸಂಸ್ಥೆ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕೃಷಿ ಮಿತ್ರ ಶೇಂಗಾ ರೈತ ಉತ್ಪಾದಕರ ಕಂಪನಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

    ರೈತ ಉತ್ಪಾದಕ ಸಂಸ್ಥೆಗಳ ರಚನೆ ಮತ್ತು ಉತ್ತೇಜನ ಕಾರ್ಯಕ್ರಮದಡಿ ಮಾರುಕಟ್ಟೆ ಸಮಸ್ಯೆ ಹೋಗಲಾಡಿಸುವುದಾಗಿದೆ. ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ದೊರೆಯಬೇಕು. ದಲ್ಲಾಳಿಗಳ ಹಾವಳಿ ತಪ್ಪಿಸಬೇಕು. ರೈತರಿಂದ ರೈತರಿಗೋಸ್ಕರ ರೈತರೇ ಬೆಳೆದ ಬೆಳೆಗಳಿಗೆ ವೈಜ್ಞಾನಿಕ ದರ ನಿಗದಿ ಪಡಿಸುವ ಕಾರ್ಯವಾಗಬೇಕಿರುವುದು ಸಂಸ್ಥೆಯ ಉದ್ದೇಶವಾಗಿದೆ ಎಂದರು.

    ಕೃಷಿ ಅಧಿಕಾರಿ ಬಸವರಾಜ ಗದಗಿನ ಮಾತನಾಡಿದರು. ನಿಲೋಗಲ್‌ನ ಶ್ರೀ ಶಿವನಾಗಯ್ಯ ಹಿರೇಮಠ, ಯಡ್ಡೋಣಿಯ ಸಿದ್ಧಾರೂಢ ಬಸವಾಶ್ರಮದ ಶ್ರೀ ಕೇಶವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕೃಷಿಮಿತ್ರ ಶೇಂಗಾ ಉತ್ಪಾದಕ ಕಂಪನಿ ಅಧ್ಯಕ್ಷ ಮಂಜುನಾಥ ರೊಟ್ಟಿ ಅಧ್ಯಕ್ಷತೆ ವಹಿಸಿದ್ದರು.

    ಸಂಸ್ಥೆಯ ಉಪಾಧ್ಯಕ್ಷ ಹನುಮಂತಪ್ಪ ಹಟ್ಟಿ, ನಿರ್ದೇಶಕರಾದ ಚಿದಾನಂದಗೌಡ ಮಾಲಿಪಾಟೀಲ್, ನಾಗರಾಜ ನವಲಹಳ್ಳಿ, ವಿರೂಪಾಕ್ಷಪ್ಪ ಹುನಗುಂದ, ನಿರುಪಾದೇಪ್ಪ ಮುಳ್ಳೂರು, ಮಾಳಮ್ಮ ಪೊಲೀಸ್ ಪಾಟೀಲ್, ಶರಣಪ್ಪಗೌಡ ಪೊಲೀಸ್ ಪಾಟೀಲ್, ಮಂಜುನಾಥ ಬೇವೂರು, ಶರಣಪ್ಪ ಕೊಂಗಿ, ಗ್ರಾಪಂ ಅಧ್ಯಕ್ಷೆ ಹುಸೇನ್‌ಬೀ ಅತ್ತಾರ, ಸಿಇಒ ಶ್ರೀಕಾಂತರೆಡ್ಡಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts