More

    ಗೋಮಾಳ ಕಾಮಗಾರಿ ಆರಂಭಿಸಿ; ಜಿಪಂ ಸಿಇಒ ಸೂಚನೆ

    ವಿವಿಧ ಇಲಾಖೆ ಪ್ರಗತಿ ಪರಿಶೀಲನಾ ಸಭೆ

    ಯಲಬುರ್ಗಾ: ತಾಲೂಕಿನ ವಿವಿಧ ಗ್ರಾಮಗಳ ಗೋಮಾಳ ಕಾಮಗಾರಿ ತುರ್ತಾಗಿ ಆರಂಭಿಸಿ ಕಂದಕ ನಿರ್ಮಿಸಬೇಕು ಎಂದು ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ ಹೇಳಿದರು.

    ತಾಲೂಕಿನ ಬೇವೂರು ಗ್ರಾಪಂನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿವಿಧ ಇಲಾಖೆ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅರಣ್ಯ ಇಲಾಖೆ ಅಧಿಕಾರಿಗಳು ಮಳೆಗಾಲ ಆರಂಭದಲ್ಲಿ ಸಸಿ ನಾಟಿ ಮಾಡಬೇಕು. ಶಾಲಾಭಿವೃದ್ಧಿ ಕಾಮಗಾರಿಗಳನ್ನು ಸಕಾಲಕ್ಕೆ ಪೂರ್ಣಗೊಳಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

    ಬೇವೂರು ಹಾಗೂ ಹಿರೇಅರಳಿಹಳ್ಳಿಯ ಬೂದು ನೀರು ನಿರ್ವಹಣೆ ಕಾಮಗಾರಿಗಳ ಕ್ರಿಯಾಯೋಜನೆ ಸಿದ್ಧಪಡಿಸಿ ತುರ್ತಾಗಿ ಕಾಮಗಾರಿ ಆರಂಭಿಸಲು ಪಿಆರ್‌ಇಡಿ ಹಾಗೂ ಆರ್‌ಡಬ್ಲುೃಎಸ್ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು. ಪ್ರತಿವಾರ ಕುಡಿವ ನೀರಿನ ಟಾಸ್ಕ್‌ಫೊರ್ಸ್ ಸಭೆ ನಡೆಸಿ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದರು. ಸಭೆಯ ಬಳಿಕ ನರೇಗಾದಡಿ ಕೈಗೊಂಡ ಶಾಲಾಭಿವೃದ್ಧಿ ಕಾಮಗಾರಿ ಹಾಗೂ ಅಂಗನವಾಡಿ ಕಾಮಗಾರಿಗಳನ್ನು ಸಿಇಒ ಪರಿಶೀಲಿಸಿದರು.

    ಬೇವೂರ ಗ್ರಾಮದ ಒಟ್ಟು ಜನಸಂಖ್ಯೆ, ಮತದಾರರು, ಜೆಜೆಎಂ ಕಾಮಗಾರಿ, ನರೇಗಾ ಯೋಜನೆ, ಗೃಹಲಕ್ಷಿ ಯೋಜನೆ ಫಲಾನುಭವಿಗಳ ಮಾಹಿತಿ, ಪಡಿತರ ಚೀಟಿ ಮಾಹಿತಿ, ಅಂಗನವಾಡಿ ಕೇಂದ್ರಗಳ ಕುಡಿವ ನೀರು, ಶೌಚಗೃಹ, ಆಹಾರ ವಿತರಣೆ, ಶಾಲೆಗಳಲ್ಲಿ ಶೌಚಗೃಹ, ಅಡುಗೆ ಕೋಣೆ, ತಡೆಗೋಡೆ ಮುಂತಾದ ಮೂಲ ಸೌಕರ್ಯಗಳ ಮಾಹಿತಿ, ಅರಣ್ಯ ಇಲಾಖೆ ಕಾಮಗಾರಿಗಳ ಮಾಹಿತಿಯನ್ನು ಸಿಇಒ ಪಡೆದರು.

    ತಾಪಂ ಇಒ ಸಂತೋಷ್ ಪಾಟೀಲ್, ಸಹಾಯಕ ನಿರ್ದೇಶಕ ಹನುಮಂತಗೌಡ ಪೊಲೀಸ್ ಪಾಟೀಲ್, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ನಿಂಗನಗೌಡ ಪಾಟೀಲ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಾಣೇಶ ಹಾದಿಮನಿ, ಆರ್‌ಎಫ್‌ಒ ಬಸವರಾಜ ಗೊಗೇರಿ, ಸಿಡಿಪಿಒ ಬೆಟದಪ್ಪ ಮಾಳೆಕೊಪ್ಪ, ಆರ್‌ಡಬ್ಲುೃಎಸ್ ಎಇಇ ರಿಜ್ವಾನಾ ಬೇಗಂ, ಬಿಇಒ ಕೆ.ಟಿ.ನಿಂಗಪ್ಪ, ಬಿಸಿಎಂ ಸಹಾಯಕ ನಿರ್ದೇಶಕ ಶಿವಶಂಕರ ಕರಡಕಲ್, ಪಿಡಿಒ ಅಬ್ದುಲ್ ಗಫಾರ್, ಕರವಸೂಲಿಗಾರ ಬಸವರಾಜ, ತಾಪಂ ತಾಂತ್ರಿಕ ಸಂಯೋಜಕ ಸಂತೋಷ್ ನಂದಾಪುರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts