More

    ಅರ್ಹ ಪಲಾನುಭವಿಗಳಿಗೆ ಮನೆಗಳ ವಿತರಿಸಿ: ಯಲಬುರ್ಗಾದಲ್ಲಿ ಸಚಿವ ಹಾಲಪ್ಪ ಆಚಾರ್ ಸೂಚನೆ

    ಯಲಬುರ್ಗಾ: ಗ್ರಾಪಂ ಸದಸ್ಯರು ಪ್ರಾಮಾಣಿಕವಾಗಿ ಸಾರ್ವಜನಿಕರ ಸೇವೆ ಮಾಡಿದಾಗ ಸದಸ್ಯತ್ವಕ್ಕೆ ಗೌರವ ಬರುತ್ತದೆ ಎಂದು ಸಚಿವ ಹಾಲಪ್ಪ ಆಚಾರ್ ಹೇಳಿದರು.

    ಪಟ್ಟಣದ ಬಾಬು ಜಗಜೀವನರಾಮ್ ಭವನದಲ್ಲಿ ಗ್ರಾಪಂ ದೂರದೃಷ್ಟಿ ಯೋಜನೆ ಕುರಿತು ಸದಸ್ಯರು ಹಾಗೂ ಅಧಿಕಾರಿಗಳಿಗೆ ಸೋಮವಾರ ಹಮ್ಮಿಕೊಂಡಿದ್ದ ಉಪಗ್ರಹ ಆಧಾರಿತ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಗ್ರಾಮಗಳ ಅಭಿವೃದ್ಧಿ ಮತ್ತು ಜನಸೇವೆ ಮಾಡುವ ಭರವಸೆ ನೀಡಿ ಚುನಾಯಿತರಾದ ಮೇಲೆ ಮತದಾರರಿಗೆ ಮೋಸ ಮಾಡಬಾರದು. ಸರ್ಕಾರದಿಂದ ಬರುವ ಮನೆಗಳನ್ನು ಅರ್ಹರ ಬದಲಿಗೆ ಉಳ್ಳವರಿಗೆ ನೀಡಿದರೆ ದೇವರು ಮೆಚ್ಚುವುದಿಲ್ಲ. ಗ್ರಾಪಂನಿಂದ ಪ್ರಮುಖವಾಗಿ ಕುಡಿವ ನೀರು, ನೈರ್ಮಲ್ಯ, ವಿದ್ಯುತ್, ಚರಂಡಿ ಸ್ವಚ್ಛತೆ ನಿರ್ವಹಿಸಬೇಕು. ಕ್ಷೇತ್ರಕ್ಕೆ ಮೂರು ಸಾವಿರ ಮನೆಗಳನ್ನು ತರಲಾಗಿದೆ. ಪ್ರಾಮಾಣಿಕ ಮತ್ತು ಪಾರದರ್ಶಕವಾಗಿ ಹಂಚಿಕೆಯಾಗಬೇಕು ಎಂದರು. ತಾಪಂ ಇಒ ಸಂತೋಷ ಪಾಟೀಲ್ ಮಾತನಾಡಿದರು.

    ತಹಸೀಲ್ದಾರ್ ಶ್ರೀಶೈಲ ತಳವಾರ, ಕುಕನೂರು ತಾಪಂ ಇಒ ರಾಮಣ್ಣ ದೊಡ್ಡಮನಿ, ಸಿಡಿಪಿಒ ಸಿಂಧು ಎಲಿಗಾರ, ಗ್ರಾಪಂ ಅಧ್ಯಕ್ಷರಾದ ಗೀತಾ ತುಪ್ಪದ, ಚನ್ನಮ್ಮ ಈಳಿಗೇರ, ಸ್ಥಾಯಿ ಸಮಿತಿ ಅಧ್ಯಕ್ಷ ಓಬಳೆಪ್ಪ ಕುಲಕರ್ಣಿ, ಸಂಪನ್ಮೂಲ ವ್ಯಕ್ತಿಗಳಾದ ಭೀಮಣ್ಣ ಹವಳಿ, ಶಂಕ್ರಪ್ಪ ಹಡಪದ, ನರೇಗಾ ಸಂಯೋಜಕ ಶರಣಪ್ಪ ಹಾಳಕೇರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts