More

    ಹೋಳಿ ಹಬ್ಬ, ನಾನಾ ವೇಷ ಧರಿಸಿ ಹೆಜ್ಜೆ ಕುಣಿತ

    ಯಲಬುರ್ಗಾ: ಪಟ್ಟಣದ ಸೇರಿದಂತೆ ತಾಲೂಕಿನ ನಾನಾ ಗ್ರಾಮಗಳಲ್ಲಿ ಹೋಳಿ ಹಬ್ಬದ ನಿಮಿತ್ತ ಸಾರ್ವಜನಿಕರು ಪರಸ್ಪರ ಬಣ್ಣ ಎರಚಿ ರಂಗಿನಾಟ ಆಡಿದರು. ಹೋಳಿ ಪ್ರಯುಕ್ತ ಪಟ್ಟಣದ ನಾಲ್ಕು ಕಡೆ ಕಾಮ ಮತ್ತು ರತಿ ದೇವರ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಅಲಂಕಾರಗೊಳಿಸಲಾಗಿತ್ತು. ಮಂಗಳವಾರ ರಾತ್ರಿ ಕಡಬಡ ಸೋ ಕುಣಿತ ನೋಡುಗರ ಗಮನ ಸೆಳೆಯಿತು. ಇಡೀ ರಾತ್ರಿ ಮತ್ತು ಮುಂಜಾನೆವರೆಗೂ ಯುವಕರು ನಾನಾ ವೇಷ ಧರಿಸಿ ಹೆಜ್ಜೆ ಹಾಕಿರುವುದು ಅರ್ಥಪೂರ್ಣ ಆಚರಣೆಗೆ ಸಾಕ್ಷಿಯಾಯಿತು. ಅಣಕು ಶವ ಯಾತ್ರೆ ನೋಡುಗರ ಕಣ್ಮನ ಸೆಳೆಯಿತು. ಬುಧವಾರ ಬೆಳಗ್ಗೆ ನಾಲ್ಕು ಕಾಮನಗಳನ್ನು ಎತ್ತಿನ ಬಂಡಿಯಲ್ಲಿ ಮೆರವಣಿಗೆ ಮೂಲಕ ಉಸುಗಿನ ಕಟ್ಟೆ ಹತ್ತಿರ ತಂದು ಕಾಮದಹನ ಮಾಡಲಾಯಿತು. ಬಳಿಕ ಯುವಕರು, ಹಿರಿಯರು, ಮಹಿಳೆಯರು ಮತ್ತು ಮಕ್ಕಳು ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts