More

    ಸ್ವಚ್ಛತೆ ಕಾಣದ ಯಲಬುರ್ಗಾ ಕೋವಿಡ್ ಆಸ್ಪತ್ರೆ ಶೌಚಗೃಹ

    ಸೋಂಕಿತರಿಗೆ ಸಮಸ್ಯೆ | 20 ಕರೊನಾ ಸೋಂಕಿತರಿಗೆ ನಡೆದಿದೆ ಚಿಕಿತ್ಸೆ

    ಯಲಬುರ್ಗಾ: ಪಟ್ಟಣದ ಸರ್ಕಾರಿ ಆಸ್ಪತ್ರೆ ಹಿಂದುಗಡೆ ಇರುವ ಕೋವಿಡ್19 ಆಸ್ಪತ್ರೆಯಲ್ಲಿ ಕರೊನಾ ಸೋಂಕಿತರಿಗಾಗಿ ನಿರ್ಮಿಸಿದ ಶೌಚ ಮತ್ತು ಸ್ನಾನಗೃಹಗಳು ನಿರ್ವಹಣೆ ಕೊರತೆಯಿಂದ ಸೋಂಕಿತರು ಸಮಸ್ಯೆ ಎದುರಿಸುವಂತಾಗಿದೆ.

    ಕೋವಿಡ್19 ಡಿಸಿಎಚ್‌ಸಿ ಆಸ್ಪತ್ರೆಯ 30 ಬೆಡ್‌ಗಳ ಪೈಕಿ 6 ಐಸಿಯು, 24 ಜನರಲ್ ವಾರ್ಡ್‌ಗಳಿವೆ. ಆಸ್ಪತ್ರೆ ಆರಂಭದಿಂದ ಇಲ್ಲಿಯವರೆಗೆ 116 ಸೋಂಕಿತರು ದಾಖಲಾಗಿದ್ದು, 87 ಜನ ಚೇತರಿಕೆಯಾಗಿದ್ದಾರೆ. ಸದ್ಯ 10 ಬೆಡ್ ಖಾಲಿ ಇದ್ದು, 20 ಕರೊನಾ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಸೊಂಕಿತರ ನಿರ್ವಹಣೆಗೆ ಮೂವರು ವೈದ್ಯರು, ಮೂವರು ಡಿ ಗ್ರುಪ್ ಸಿಬ್ಬಂದಿ, ಇಬ್ಬರು ನರ್ಸ್‌ಗಳನ್ನು ನಿಯೋಜಿಸಲಾಗಿದೆ.

    ಕೋವಿಡ್ ಆಸ್ಪತ್ರೆಯಲ್ಲಿ ಸೋಂಕಿತರಿಗೆ ಊಟ, ನೀರಿನ ವ್ಯವಸ್ಥೆ ಸರಿಯಾಗಿ ಇದೆ. ಆದರೆ, ಶೌಚಗೃಹ, ಕೈತೊಳೆಯುವ ಸಿಂಕ್ ಸ್ವಚ್ಛತೆ ಕಾಣದೇ ಅವ್ಯವಸ್ಥೆ ಆಗರವಾಗಿದೆ. ಇದರಿಂದ ಸೋಂಕಿತರು ಮೂಗು ಮುಚ್ಚಿಕೊಂಡು ಶೌಚಗೃಹಗಳನ್ನು ಬಳಸಬೇಕಿದೆ. ನಿತ್ಯವೂ ದಾಖಲಾಗುವ ಸೋಂಕಿತರಿಗೆ ತೊಂದರೆಯಾಗಿದೆ.

    ಕೋವಿಡ್ ಆಸ್ಪತ್ರೆಯಲ್ಲಿ ಸೋಂಕಿತರಿಗೆ ನಿತ್ಯ ಅಗತ್ಯ ಮೂಲ ಸೌಕರ್ಯ ಒದಗಿಸಲಾಗುತ್ತಿದೆ. ಪ್ರತಿ ವಾರ್ಡ್‌ಗೆ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಯಾವುದೇ ಸಮಸ್ಯೆ ಬಾರದಂತೆ ವೈದ್ಯರು ನೋಡಿಕೊಳ್ಳುತ್ತಿದ್ದಾರೆ. ಸ್ವಚ್ಛತೆ ಕಾಪಾಡುವಂತೆ ಸಿಬ್ಬಂದಿಗೆ ತಿಳಿಸಲಾಗುತ್ತದೆ.
    | ಸುನಿಲ್ ಚಿತ್ರಗಾರ್, ಪ್ರಭಾರ ಆಡಳಿತಾಧಿಕಾರಿ, ಸರ್ಕಾರಿ ಆಸ್ಪತ್ರೆ, ಯಲಬುರ್ಗಾ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts