More

    ತರಗತಿ ನಡೆಸಲು ಅವಕಾಶ ನೀಡಿ: ಸರ್ಕಾರಿ ಪದವಿ ಕಾಲೇಜು ಅತಿಥಿ ಉಪನ್ಯಾಸಕರ ಒತ್ತಾಯ

    ಯಲಬುರ್ಗಾ: ಮುಷ್ಕರ ಹಿಂಪಡೆದಿದ್ದು, ತರಗತಿ ನಡೆಸಲು ಅನುಮತಿ ನೀಡುವಂತೆ ಒತ್ತಾಯಿಸಿ ಅತಿಥಿ ಉಪನ್ಯಾಸಕರು ಮಂಗಳವಾರ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಎಸ್.ಜಿ.ಗುರಿಕಾರ್‌ಗೆ ಮನವಿ ಸಲ್ಲಿಸಿದರು.

    ಕಾಲೇಜಿನಲ್ಲಿ 2021-22ನೇ ಸಾಲಿನಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಲಾಗುತ್ತಿದ್ದು, 1,3,5ನೇ ಸೆಮಿಸ್ಟರ್‌ಗೆ ಬೋಧನೆ ಮಾಡಿದ್ದೇವೆ. ಡಿ.10 ರಿಂದ ವಿವಿಧ ಬೇಡಿಕೆ ಈಡೇರಿಕೆಗಾಗಿ ಮುಷ್ಕರದಲ್ಲಿ ಭಾಗವಹಿಸಿದ್ದೆವು. ಈಗ ಹೋರಾಟ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ತರಗತಿ ನಡೆಸಲು ಅವಕಾಶ ನೀಡುವಂತೆ ಮನವಿ ಮಾಡಿದರು. ಅತಿಥಿ ಉಪನ್ಯಾಸಕರಾದ ಶಿವಕುಮಾರ.ವಿ.ಎಂ., ಪ್ರದೀಪಕುಮಾರ್ ರಾಜೂರು, ಶರಣಪ್ಪ ಹಾಳಕೇರಿ, ಉದಯಕುಮಾರ, ನಾಗರಾಜ ಎಸ್., ಚಂದಾಲಿಂಗಪ್ಪ, ಎಸ್.ಪಿ.ಗುಡ್ಲಾನೂರ, ಹುಚ್ಚಪ್ಪ ಬೊಮ್ಮನಾಳ, ರಾಮಕೃಷ್ಣ ಬೇವೂರು, ಶೇಖರಪ್ಪ ಕಂದಕೂರ, ಶರಣಪ್ಪ ಛಲವಾದಿ, ಪ್ರಭು, ಬಿ.ಎಸ್.ಈರಗಾರ, ಸುಷ್ಮಾ ಕಲ್ಮಠ, ಪುಷ್ಪಾ, ನೇತ್ರಾವತಿ ಇತರರಿದ್ದರು.

    ಅಳವಂಡಿ: ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಿಂದಿನ ಅತಿಥಿ ಉಪನ್ಯಾಸಕರನ್ನು ಮುಂದುವರಿಸಬೇಕೆಂದು ಅಗ್ರಹಿಸಿ ಮಂಗಳವಾರ ಪ್ರಾಚಾರ್ಯ ಡಾ.ಗವಿಸಿದ್ದಪ್ಪ ಮುತ್ತಾಳಗೆ ವಿದ್ಯಾರ್ಥಿಗಳು ಮನವಿ ಸಲ್ಲಿಸಿದರು. ಈಗಾಗಲೇ ಅರ್ಧ ವರ್ಷ ಮುಗಿದಿದೆ. ಈ ಮೊದಲು ಪಾಠ ಮಾಡುತ್ತಿದ್ದ ಉಪನ್ಯಾಸಕರು, ಮನದಟ್ಟು ಆಗುವಂತೆ ಬೋಧನೆ ಮಾಡುತ್ತಿದ್ದರು. ಹೀಗಾಗಿ ಅವರನ್ನೇ ಸೇವೆಯಲ್ಲಿ ಮುಂದುವರಿಸಬೇಕು ಎಂದು ಆಗ್ರಹಿಸಿದರು.ವಿದ್ಯಾರ್ಥಿಗಳಾದ ಶರಣಪ್ಪ ಬಂಗಿ, ಪ್ರಶಾಂತ ಕಟಾಂಬಲಿ, ರವಿ ಬೆಣಕಲ್, ಭೀಮೇಶ್ವರ ಪುರದ, ಸುಮಾ ಕರಡಿ, ದೀಪಾ, ಇಂದ್ರ, ಪೂರ್ಣಿಮಾ, ಶೋಭಾ, ನಾಗರಾಜ, ಸಾಗರ್, ನಾಗರಾಜ್ ಮೋರನಾಳ, ಪ್ರತಿಭಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts