More

    ಬಾಡುತ್ತಿರುವ ಗಿಡಗಳಿಗೆ ಜೀವಕಳೆ

    ಯಲಬುರ್ಗಾ: ಬಿಸಿಲಿನ ತಾಪಮಾನ ಫೆಬ್ರವರಿ ತಿಂಗಳಿಂದಲೇ ಹೆಚ್ಚಾಗಿದೆ. ಹೀಗಾಗಿ ರಸ್ತೆಬದಿ ನೆಡಲಾದ ನೆಡುತೋಪುಗಳು ಬಾಡಲಾರಂಭಿಸಿವೆ. ಅರಣ್ಯ ಇಲಾಖೆ ಟ್ಯಾಂಕರ್ ಮೂಲಕ ನೀರು ಹಾಯಿಸಿದ್ದರಿಂದ ಗಿಡಗಳಿಗೆ ಜೀವಕಳೆ ಮರುಕಳಿಸಿದೆ.

    ಗಿಡಗಳನ್ನು ಉಳಿಸಿಕೊಳ್ಳಲು ಅರಣ್ಯ ಇಲಾಖೆಯಿಂದ ನೀರುಣಿಸುವ ಕಾರ್ಯ

    ತಾಲೂಕಿನ ಚಿಕ್ಕಮ್ಯಾಗೇರಿ ಗ್ರಾಮದಿಂದ ವಣಗೇರಿ ರಸ್ತೆಬದಿ 2022-23ನೇ ಸಾಲಿನಲ್ಲಿ 900 ಸಸಿ, ಕುಡಗುಂಟಿ-ಬಳಗೇರಿ ರಸ್ತೆಬದಿ 2023-24ನೇ ಸಾಲಿನಲ್ಲಿ 900 ಸಸಿಗಳನ್ನು ನೆಡಲಾಗಿದೆ. ಹಸಿರೀರಣದಿಂದ ಪರಿಸರ ರಕ್ಷಣೆ, ಜನ ಜಾನುವಾರುಗಳಿಗೆ ನೆರಳಿನ ಆಸರೆ ನೀಡಲು ಸಸಿಗಳನ್ನು ಬೆಳೆಸಲಾಗಿದ್ದು, ಮಳೆ ಕೊರತೆಯಿಂದ ಒಣಗಲು ಆರಂಭಿಸಿವೆ. ಗಿಡಗಳನ್ನು ಉಳಿಸಿಕೊಳ್ಳಲು ಅರಣ್ಯ ಇಲಾಖೆಯು ಖಾಸಗಿ ಬೋರ್‌ವೆಲ್‌ಗಳಿಂದ ಟ್ಯಾಂಕರ್‌ವೊಂದಕ್ಕೆ 300 ರಿಂದ 350 ರೂ. ಖರ್ಚು ಮಾಡಿ ನೀರುಣಿಸುತ್ತಿದೆ. ಗಿಡಗಳ ಸುತ್ತಲೂ ಬೆಳೆದ ಕಸ ಸ್ವಚ್ಛಗೊಳಿಸಿ, ಜನ ಜಾನುವಾರುಗಳಿಂದ ರಕ್ಷಿಸಲು ಮುಳ್ಳಿನಿಂದ ರಕ್ಷಣೆ ಬೇಲಿ ರಚಿಸಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts