More

    ದಾನ, ಧರ್ಮದಿಂದ ನೆಮ್ಮದಿ ಪ್ರಾಪ್ತಿ, ವೀರೇಶ್ವರ ಪುಣ್ಯಾಶ್ರಮದ ಶ್ರೀ ಕಲ್ಲಯ್ಯಜ್ಜ ಅನಿಸಿಕೆ

    ಯಲಬುರ್ಗಾ: ಪ್ರತಿಯೊಬ್ಬರೂ ಅಂಧ, ಅನಾಥರಿಗೆ ಆರ್ಥಿಕ ಸಹಾಯ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಗದುಗಿನ ವೀರೇಶ್ವರ ಪುಣ್ಯಾಶ್ರಮದ ಶ್ರೀ ಕಲ್ಲಯ್ಯಜ್ಜ ಹೇಳಿದರು.

    ಶಿರಗುಂಪಿ ಗ್ರಾಮದಲ್ಲಿ ಶ್ರೀ ಕರಿಬಸವೇಶ್ವರ ಜಾತ್ರೋತ್ಸವ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ತುಲಾಭಾರ ಸ್ವೀಕರಿಸಿ ಮಾತನಾಡಿದರು. ಸಮಾಜದಲ್ಲಿ ನಡೆಯುವ ಸತ್ಕಾರ್ಯಗಳಿಗೆ ದಾನ ಮಾಡಿದರೆ ಮನಸ್ಸಿಗೆ ನೆಮ್ಮದಿ ಪ್ರಾಪ್ತಿಯಾಗಿ ಪುಣ್ಯ ಲಭಿಸುತ್ತದೆ. ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವಜೋಡಿಗಳು ಮಾದರಿ ಜೀವನ ನಡೆಸಬೇಕು. ಅಂಧ, ಅನಾಥರ ಬದುಕಿಗೆ ಶ್ರೀ ವೀರೇಶ್ವರ ಪುಣ್ಯಾಶ್ರಮ ಆಶಾಕಿರಣವಾಗಿದ್ದು, ಆಶ್ರಮದ ಶ್ರೇಯೋಭಿವೃದ್ಧಿಗೆ ಸಹಕಾರ ಅಗತ್ಯವಿದೆ. ಮಠ-ಮಂದಿರಗಳ ಅಭಿವೃದ್ಧಿಗೆ ಎಲ್ಲರೂ ಶ್ರಮಿಸಬೇಕು. ಪ್ರಸ್ತುತ ದಿನಗಳಲ್ಲಿ ಯುವ ಜನಾಂಗ ದುಶ್ಚಟಗಳಿಗೆ ಬಲಿಯಾಗುತ್ತಿದ್ದು, ಖೇದಕರ ಸಂಗತಿ. ಪ್ರತಿಯೊಬ್ಬರೂ ಒಳ್ಳೆಯ ಶಿಕ್ಷಣ ಪಡೆದು ಉತ್ತಮ ನಾಗರಿಕರಾಗಿ ಜೀವನ ಮಾಡಬೇಕು ಎಂದರು.

    ಕರಿಬಸವೇಶ್ವರ ದೇವಸ್ಥಾನದ ಮಾತೋಶ್ರೀ ನೀಲಮ್ಮ ತಾಯಿ ಮಾತನಾಡಿದರು. ಪ್ರಮುಖರಾದ ಹುಚ್ಚೀರಪ್ಪ ಹಿರೇಮಠ, ಮುತ್ತಯ್ಯ ಹಿರೇಮಠ, ಶಶಿಧರ ಹೂಗಾರ, ಶಂಕ್ರಗೌಡ ಪೊ.ಪಾಟೀಲ್, ಶಿವನಗೌಡ ಅಮರಗೋಳ, ಯಮನೂರ್‌ಸಾಬ್ ನದಾಫ್, ಶರಣಪ್ಪ ಜಟ್ಟಿ, ಬಸವರಾಜ ಜಟ್ಟಿ, ಮಲ್ಲಪ್ಪ ಹೂಗಾರ, ಸಿದ್ದಪ್ಪ ಶಿರಗುಂಪಿ, ದೇವೇಂದ್ರಪ್ಪ ಕರಡಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts