More

    ರಕ್ತದಾನ ಮಾಡಲು ಯುವಕರು ಮುಂದಾಗಲಿ: ಮೈಸೂರು ಮಠದ ವಿಜಯ ಮಹಾಂತ ಸ್ವಾಮೀಜಿ ಸಲಹೆ


    ಯಲಬುರ್ಗಾ: ರಕ್ತದಾನ ಶ್ರೇಷ್ಠವಾಗಿದ್ದು ,ಒಬ್ಬ ವ್ಯಕ್ತಿಯ ಜೀವ ಉಳಿಸಲು ಸಾಧ್ಯವಿದೆ ಎಂದು ಕುದರಿಮೋತಿಯ ಮೈಸೂರು ಮಠದ ಶ್ರೀ ವಿಜಯ ಮಹಾಂತ ಸ್ವಾಮೀಜಿ ಹೇಳಿದರು.


    ಶ್ರೀ ಗುರುಮಹಾಂತ ಶಿವಯೋಗಿಗಳ 55ನೇ ಪುಣ್ಯಾರಾಧನೆ ನಿಮಿತ್ತ ಹಿರೇಮ್ಯಾಗೇರಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರಿಸಿದ್ಧೇಶ್ವರ ಸೇವಾ ಸಮಿತಿ, ರೆಡ್‌ಕ್ರಾಸ್ ಸಂಸ್ಥೆ, ಎಂ.ಎಂ.ಜೋಶಿ ಆಸ್ಪತ್ರೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಗುರುವಾರ ಏರ್ಪಡಿಸಿದ್ದ ರಕ್ತದಾನ, ಕಣ್ಣಿನ ಉಚಿತ ತಪಾಸಣೆ ಶಿಬಿರದಲ್ಲಿ ಮಾತನಾಡಿದರು. ಪ್ರಸ್ತುತ ಅನ್ನದಾನಕ್ಕಿಂತ ರಕ್ತದಾನ ಹೆಚ್ಚು ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದೆ. ಪ್ರಾಣಾಪಾಯದಿಂದ ಪಾರು ಮಾಡಲು ರಕ್ತ ಅವಶ್ಯವಾಗಿದ್ದು, ಆರೋಗ್ಯವಂತ ಯುವಕರು ರಕ್ತದಾನ ಮಾಡಲು ಮುಂದಾಗಬೇಕು. ಇದರಿಂದ ದೇಹದಲ್ಲಿ ರಕ್ತದ ಶುದ್ಧೀಕರಣ ಜತೆಗೆ ಚೈತನ್ಯ ಉಂಟು ಮಾಡುತ್ತದೆ. ಎಲ್ಲರೂ ಆರೋಗ್ಯದ ಕಡೆಗೆ ಗಮನಹರಿಸಬೇಕು ಎಂದರು.

    ಗ್ರಾಪಂ ಅಧ್ಯಕ್ಷೆ ಮಂಜುಳಾ ತಳವಾರ್, ಪ್ರಮುಖರಾದ ಶರಣಪ್ಪ ಗಾಣಿಗೇರ, ಮಹಾಂತೇಶ ಗಾಣಿಗೇರ, ಕಲ್ಲಪ್ಪ ಹೊಟ್ಟಿನ, ಜಲಾರ್‌ಸಾಬ್ ಆದಾಪುರ, ಲಿಂಗರಾಜ ಗಾಣಿಗೇರ, ಮಹಾಂತೇಶ ಬೆಲ್ಲದ, ಕಲ್ಲಪ್ಪ ಹೊಸಮನಿ, ಎಚ್.ಎ.ನದಾಫ್, ಮರಿತಿಮ್ಮಪ್ಪ ಗುರಿಕಾರ, ಶಶಿ ಛಲವಾದಿ, ಮಹೇಶ ಗುರಿಕಾರ, ಶರಣಪ್ಪ ಲಿಗಾಡಿ, ಕಳಕಪ್ಪ ಕಲ್ಗುಡಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts