More

    ಬಿಜೆಪಿ ಜನಪರ ಕಾರ್ಯಕ್ಕೆ ಗ್ರಾಪಂ ಸದಸ್ಯರ ಅವಿರೋಧ ಆಯ್ಕೆಗಳೇ ಸಾಕ್ಷಿ ಎಂದ ಶಾಸಕ ಹಾಲಪ್ಪ ಆಚಾರ್

    ಯಲಬುರ್ಗಾ: ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಜನಪರ ಆಡಳಿತ ವೈಖರಿಯನ್ನು ಮೆಚ್ಚಿ ಗ್ರಾಪಂಗೆ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿರುವುದು ಸಾಕ್ಷೀಕರಿಸಿದೆ ಎಂದು ಶಾಸಕ ಹಾಲಪ್ಪ ಆಚಾರ್ ಹೇಳಿದರು.

    ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಗ್ರಾಪಂಗೆ ಅವಿರೋಧವಾಗಿ ಆಯ್ಕೆಯಾದ ವಿವಿಧ ಗ್ರಾಮಗಳ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಸನ್ಮಾನಿಸಿ ಮಾತನಾಡಿದರು. ಗ್ರಾಪಂ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಲು ಕಾರ್ಯಕರ್ತರು ಶ್ರಮಿಸಬೇಕು. ತುಮ್ಮರಗುದ್ದಿ ಗ್ರಾಪಂ ವ್ಯಾಪ್ತಿಯ ಅತೀ ಹೆಚ್ಚು ಅಭ್ಯರ್ಥಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಿರುವುದು ಸಂತಸ ತಂದಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಎಸ್‌ವೈ ನೇತೃತ್ವದ ಬಿಜೆಪಿ ಸರ್ಕಾರ ರೈತಪರ ಯೋಜನೆಗಳನ್ನು ಜಾರಿಗೊಳಿಸಿ ಅಭಿವೃದ್ಧಿಗೆ ಶ್ರಮಿಸುತ್ತಿವೆ. ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಇನ್ನಷ್ಟು ಶಕ್ತಿ ತುಂಬಲು ಸಹಕಾರಿಯಾಗಲಿದೆ. ಶಾಂತಿ ಹಾಗೂ ಕ್ರಮಬದ್ಧವಾಗಿ ಚುನಾವಣೆಗಳು ನಡೆಯಬೇಕು. ತಾಲೂಕಿನ 144 ಹಳ್ಳಿಗಳಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. ಇನ್ನೂ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿ ಮಾಡಲಾಗುವುದು ಎಂದರು.

    ಬಿಜೆಪಿ ಮುಖಂಡರಾದ ಸಿ.ಎಚ್.ಪಾಟೀಲ್, ಬಸಲಿಂಗಪ್ಪ ಭೂತೆ, ರಸೂಲ್‌ಸಾಬ್ ದಮ್ಮೂರು, ಶರಣಪ್ಪ ಈಳಿಗೇರ್ ಮಾತಣಾಡಿದರು. ಈ ಪ್ರಮುಖರಾದ ವೀರಣ್ಣ ಹುಬ್ಬಳ್ಳಿ, ಶಿವಪ್ಪ ವಾದಿ, ಕಳಕಪ್ಪ ಕಂಬಳಿ, ರತನ್ ದೇಸಾಯಿ, ಶಿವುಕುಮಾರ ನಾಗಲಾಪುರಮಠ, ಡಿ.ಮೌನೇಶ ಕಮ್ಮಾರ, ಮಾರುತಿ ಗಾವರಾಳ, ರವಿ ಕಲಬುರ್ಗಿ, ಅಮರೇಶ ಹುಬ್ಬಳ್ಳಿ, ಜಗನ್ನಾಥಗೌಡ ಪಾಟೀಲ್, ರುದ್ರೇಶ ಈಳಿಗೇರ್, ಶರಣಪ್ಪ ಹಾಳಕೇರಿ ಹಾಗೂ ತುಮ್ಮರಗುದ್ದಿ, ದಮ್ಮೂರು, ಮಲಕಸಮುದ್ರ, ಜೂಲಕಟ್ಟಿ ಗ್ರಾಮದ ಪ್ರಮುಖರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts