More

    ಕಾರ್ತಿಕ ದೀಪೋತ್ಸವದಿಂದ ಹೊಸ ಚೈತನ್ಯ

    ಯಲಬುರ್ಗಾ: ಭಕ್ತಿ, ಶಾಂತಿ ಹಾಗೂ ನೆಮ್ಮದಿಗಾಗಿ ದೀಪ ಬೆಳಗಿಸುವುದೇ ನಿಜವಾದ ಕಾರ್ತಿಕೋತ್ಸವ ಎಂದು ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ನೀಲನಗೌಡ ತಳುಗೇರಿ ಹೇಳಿದರು.

    ಪಟ್ಟಣದ ಒಂದನೇ ವಾರ್ಡ್‌ನ ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ತಿಕೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.

    ಮನುಷ್ಯನ ಮನಸ್ಸಿನಲ್ಲಿ ಅಡಗಿದ ಅಂಧಕಾರ ಹೋಗಲಾಡಿಸಿ ಪ್ರಜ್ವಲಿಸುವ ಬೆಳಕು ಬೆಳಗಿಸುವುದು ನಿಜ ಭಕ್ತಿಯಾಗಿದೆ. ಪ್ರತಿಯೊಬ್ಬರ ಜೀನವನದಲ್ಲಿನ ಕತ್ತಲೆ ಕಳೆದು ಬೆಳಕು ಚೆಲ್ಲುವ ಮೂಲಕ ಹೊಸ ಚೈತನ್ಯ ನೀಡುವುದಕ್ಕೆ ಕಾರ್ತಿಕ ಮಾಸದ ದೀಪೋತ್ಸವ ಸಾಕ್ಷಿಯಾಗಿದೆ ಎಂದರು.

    ದೇವಸ್ಥಾನ ಸಮಿತಿ ಉಪಾಧ್ಯಕ್ಷ ಸುರೇಶ ಜಮಾದಾರ ಮಾತನಾಡಿದರು. ಇದೇ ವೇಳೆ ಗೊರವಯ್ಯರಿಂದ ಹೆಜ್ಜೆ ಕುಣಿತ, ದೀಪ ಹಚ್ಚುವಿಕೆ, ಅನ್ನಸಂರ್ತಪಣೆ, ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದವು.

    ಪ್ರಮುಖರಾದ ಸುರೇಶಗೌಡ ಶಿವನಗೌಡ್ರ, ಹನುಮಗೌಡ ಸಾಲಭಾವಿ, ದೇವಪ್ಪ ಹಲಗೇರಿ, ನಾಗರಾಜ ಕುಕನೂರು, ಉಮೇಶ ಭೋಮೋಜಿ, ಮಹಾಂತೇಶ ಉಂಗ್ರಾಣಿ, ಕಳಕೇಶ ಅರಕೇರಿ, ಮಲ್ಲಪ್ಪ ಭೂಮೋಜಿ, ಜಗದೀಶ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts