More

    ವಯೋಮಿತಿ ನೆಪ, ಸೇವೆಯಿಂದ ಬಿಡುಗಡೆಗೊಳಿಸುವ ಕ್ರಮಕ್ಕೆ ಖಂಡನೆ

    ಯಲಬುರ್ಗಾ: ವಯೋಮಿತಿ ನೆಪವೊಡ್ಡಿ 19 ವರ್ಷ ಸೇವೆ ಸಲ್ಲಿಸಿದ ಬಡ ಮಹಿಳೆಯರನ್ನು ನಿವೃತ್ತಿ ಹೆಸರಲ್ಲಿ ಬಿಡುಗಡೆಗೊಳಿಸಿರುವ ಕ್ರಮ ಖಂಡಿಸಿ ಅಕ್ಷರ ದಾಸೋಹ ನೌಕರರ ತಾಲೂಕು (ಸಿಐಟಿಯು ಸಂಯೋಜಿತ) ಸಮಿತಿಯಿಂದ ತಾಪಂ ಇಒ ಸಂತೋಷ ಬಿರಾದಾರ್‌ಗೆ ಸೋಮವಾರ ಮನವಿ ಸಲ್ಲಿಸಲಾಯಿತು.

    ಬಿಸಿಯೂಟ ನೌಕರರ ಸಮಿತಿ ತಾಲೂಕು ಅಧ್ಯಕ್ಷೆ ಕೆ.ಪದ್ಮಾವತಿ, ಸಿಐಟಿಯು ಮುಖಂಡ ಅಬ್ದುಲ್ ರಜಾಕ್ ಇಲಕಲ್ ಮಾತನಾಡಿ, ಮಧ್ಯಾಹ್ನದ ಬಿಸಿಯೂಟ ಯೋಜನೆ ಪ್ರಾರಂಭವಾದ ವರ್ಷದಿಂದ ಮಕ್ಕಳ ಶೈಕ್ಷಣಿಕ ಉನ್ನತಿ, ಗೈರುಹಾಜರಿ ತಪ್ಪಿಸಲು ಶ್ರಮಿಸಿಕೊಂಡು ಬರುತ್ತಿರುವ ಅಡುಗೆಯವರನ್ನು ವಯೋಮಾನ ನೆಪವೊಡ್ಡಿ ಬಿಡುಗಡೆ ಮಾಡಿರುವುದು ಖಂಡನೀಯ. ರಾಜ್ಯದಲ್ಲಿ 50 ಲಕ್ಷ ಬಡ, ಕೃಷಿಕ ಹಾಗೂ ದೀನದಲಿತರ ಮಕ್ಕಳಿಗೆ ನಿತ್ಯ ಬಿಸಿಯೂಟ ಬೇಯಿಸಿ ಬಡಿಸುವುದರೊಟ್ಟಿಗೆ ಮಕ್ಕಳಲಿ ಶೈಕ್ಷಣಿಕ ಆಸಕ್ತಿ ಮೂಡಿಸುವಲ್ಲಿ ಅಡುಗೆ ತಯಾರಕರ ಪರಿಶ್ರಮವಿದೆ. 2001-02ರಲ್ಲಿ ಅಡುಗೆ ಕೆಲಸಕ್ಕೆ ಸೇರಿಸಿಕೊಳ್ಳುವಾಗ ವಿದ್ಯಾಭ್ಯಾಸ, ಅರ್ಹತೆ ಹಾಗೂ ವಯಸ್ಸು ನಿಗದಿಯಾಗಿತ್ತಾದರೂ ಸರ್ಕಾರ ನಿವೃತ್ತಿ ವಯಸ್ಸು ನಿಗಪಡಿಸಿರಲಿಲ್ಲ. ಸಮಿತಿಯಿಂದ (ಸಿಐಟಿಯು) 2016 ರಿಂದಲೂ ವಯಸ್ಸಿನ ಆಧಾರದಲ್ಲಿ ನಿವೃತ್ತಿ ಸೌಲಭ್ಯ ಕೊಡುವಂತೆ ಹಲವು ಬಾರಿ ಸರ್ಕಾರಕ್ಕೆ ಮನವಿ ಮಾಡಿದರೂ ಮನ್ನಿಸಿರಲಿಲ್ಲ. ನೌಕರರ ನಿವೃತ್ತಿ ವಿಷಯಕ್ಕೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆ ಸಚಿವರು, ಆಯುಕ್ತರು ಹಾಗೂ ಸಂಘಟನೆಯ ಮುಖಡರೊಂದಿಗೆ ಜಂಟಿ ಸಭೆಗಳಾಗಿವೆ.

    ಚರ್ಚಿಸಿದ ವಿಷಯಗಳು ಜಾರಿಯಾಗುವ ಮೊದಲೇ ಸರ್ಕಾರ ನಿವೃತ್ತಿ ಸೌಲಭ್ಯವಿಲ್ಲದೆ ರಾಜ್ಯದ 6 ರಿಂದ 7 ಸಾವಿರ ಬಿಸಿಯೂಟ ನೌಕರರನ್ನು ಏಕಾಏಕಿ ಕೆಲಸದಿಂದ ತೆಗೆದು ಹಾಕಿದೆ. ಇದರಿಂದ ನೌಕರರು ಆರ್ಥಿಕ, ಮಾನಸಿಕ ತೊಂದರೆಗೆ ಒಳಗಾಗಿದ್ದಾರೆ. ಸರ್ಕಾರ ಕೂಡಲೇ ನಿವೃತ್ತಿ ವೇತನ ನಿಗದಿ ಮಾಡಬೇಕು. 1 ಲಕ್ಷ ರೂ. ಇಡಿಗಂಟು ನೀಡುವ ಜತೆಗೆ ವಿವಿಧ ಬೇಡಿಕೆ ಈಡೇರಿಸಬೇಕು. ಇಲ್ಲದಿದ್ದರೆ ಆ.14 ರಿಂದ ಬೆಂಗಳೂರಿನಲ್ಲಿ ಬೃಹತ್ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

    ಪದಾಧಿಕಾರಿಗಳಾದ ಮಂತಮ್ಮ, ದೇವಮ್ಮ, ಶಾಂತಮ್ಮ, ಕಮಲಮ್ಮ, ಪೀರಮ್ಮ ತಳಕಲ್, ಚಾಂದಬೀ, ದಾಕ್ಷಾಯಿಣಿ, ಪಾರ್ವತಮ್ಮ ತಿಪ್ಪನಾಳ, ಪಾರಮ್ಮ, ಶಿವಮ್ಮ, ಗಂಗಮ್ಮ, ಸಿದ್ದಮ್ಮ, ಬಸಮ್ಮ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts