More

    ಯಕ್ಷಗಾನ ಕಲಾವಿದರಿಗೆ ಸಂಬಳ, ಧಾರ್ಮಿಕ ದತ್ತಿ ಇಲಾಖೆ ಅಧೀನ ಕಾರ್ಯದರ್ಶಿ ಆದೇಶ

    ಕುಂದಾಪುರ: ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ ದೇವಸ್ಥಾನಗಳು ನಡೆಸುತ್ತಿರುವ ಯಕ್ಷಗಾನ ಮೇಳಗಳ ಕಲಾವಿದರಿಗೆ ಕರಾರಿನಂತೆ ಸಂಪೂರ್ಣ ಸಂಬಳ ನೀಡುವಂತೆ ಕಂದಾಯ (ಧಾರ್ಮಿಕ ದತ್ತಿ) ಇಲಾಖೆ ಆದೇಶಿಸಿದೆ.

    ಕರೊನಾ ಹಿನ್ನೆಲೆಯಲ್ಲಿ ಈ ಬಾರಿ ಎರಡು ತಿಂಗಳು ಮೊದಲೇ ಯಕ್ಷಗಾನ ಪ್ರದರ್ಶನ ಸ್ಥಗಿತಗೊಂಡಿದ್ದರಿಂದ ಕಲಾವಿದರು ಸಂಕಷ್ಟಕ್ಕೀಡಾಗಿದ್ದರು. ಈ ಕುರಿತು ಮೇ 17ರಂದು ‘ಯಕ್ಷಗಾನ ಸ್ಥಗಿತ, ಕಲಾವಿದರ ಸಂಬಳಕ್ಕೆ ಕುತ್ತು’ ಶೀರ್ಷಿಕೆಯಲ್ಲಿ ವಿಜಯವಾಣಿ ವಿಶೇಷ ವರದಿ ಪ್ರಕಟಿಸಿತ್ತು.
    ದೇವಸ್ಥಾನದ ವತಿಯಿಂದ ನಡೆಯುತ್ತಿರುವ ಯಕ್ಷಗಾನ ಮೇಳಗಳ ಕಲಾವಿದರು, ಕಾರ್ಮಿಕರಿಗೆ ಕರಾರಿನಂತೆ ವೇತನ ಪಾವತಿಸಬೇಕಿತ್ತು. ವೇತನ ಸಿಗದಿದ್ದಾಗ ಕಲಾವಿದರು ಇಲಾಖೆಗೆ ಮನವಿಯನ್ನೂ ಮಾಡಿದ್ದರು. ವೇತನ ನೀಡುವಂತೆ ಸಚಿವರೂ ಸೂಚಿಸಿದ್ದರು. ಆದರೆ ವರಮಾನ ಇಲ್ಲದೆ ಪೂರ್ಣ ಸಂಬಳ ಕೊಡಲು ತೊಂದರೆ ಇದೆ ಎಂದು ದೇವಸ್ಥಾನಗಳು ಇಲಾಖೆಗೆ ಪತ್ರ ಬರೆದಿದ್ದವು.

    ಈ ಬಗ್ಗೆ ಪ್ರತಿಕ್ರಿಯಿಸಿದ್ದ ಸಚಿವ ಕೋಟ ಶ್ರೀನಿವಾಸ ಪೂಜಾರಿ, ದೇವಸ್ಥಾನಕ್ಕೆ ವರಮಾನವಿಲ್ಲದಿದ್ದರೆ ಎಫ್‌ಡಿ ಹಣ ಬಳಸಿ ಕಲಾವಿದರಿಗೆ ಹಾಗೂ ಚೌಕಿಯಲ್ಲಿ ದುಡಿಯುವ ಕಾರ್ಮಿಕರಿಗೆ ಕರಾರಿನಂತೆ ಸಂಬಳ ನೀಡುವಂತೆ ನಿರ್ದೇಶಿಸಿದ್ದರು. ಬುಧವಾರ ಕಂದಾಯ (ಧಾರ್ಮಿಕ ದತ್ತಿ) ಇಲಾಖೆ ಅಧೀನ ಕಾರ್ಯದರ್ಶಿ ಎಂ.ಎಲ್.ವರಲಕ್ಷ್ಮೀ ಅವರು ಈ ಸಂಬಂಧ ಆದೇಶ ಹೊರಡಿಸುವ ಮೂಲಕ ಕಲಾವಿದರ ಸಮಸ್ಯೆಗೆ ತೆರೆ ಎಳೆದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts