ಯಾದಗಿರಿ | ಇಬ್ಬರ ನಡುವೆ ವಾಗ್ವಾದ; ಜಗಳ ಬಿಡಿಸಲು ಹೋದವ ಪ್ರಾಣ ಕಳೆದುಕೊಂಡ!

Crime
Published on

ಯಾದಗಿರಿ: ಜಗಳ ಬಿಡಿಸಲು ಬಂದಿದ್ದ ವ್ಯಕ್ತಿಯೊಬ್ಬ ಕೊಲೆಯಾಗಿ ಹೋಗಿರುವ ಘಟನೆ ಯಾದಗಿರಿ ನಗರದ ಹೈದ್ರಾಬಾದ್ ರಸ್ತೆಯಲ್ಲಿ ನಿನ್ನೆ ರಾತ್ರಿ ನಡೆದಿದೆ. ಯಾದಗಿರಿ ನಗರದ ನಿವಾಸಿ ಶ್ರೀನಿವಾಸ (44) ಹತ್ಯೆಗೀಡಾದ ವ್ಯಕ್ತಿ.

ಕೊಲೆಯಾಗಿ ಹೋಗಿರುವ ಶ್ರೀನಿವಾಸ್ ರಾತ್ರಿ ಊಟಕ್ಕಾಗಿ ನಗರದ ಹೋಟೆಲ್​ಗೆ ಬಂದಿದ್ದ. ಈ ವೇಳೆ ಹೋಟೆಲ್ ಮಾಲೀಕ ಹಾಗೂ ವೇಟರ್ ಶೇಖರ್ ಎಂಬಾತನ ನಡುವೆ ಜಗಳ ಆರಂಭವಾಗಿದೆ. ಪಾರ್ಕಿಂಗ್​ನಲ್ಲಿ ಕಾರು ಹೊರತೆಗೆಯುವ ವಿಚಾರಕ್ಕೆ ಇಬ್ಬರ ನಡುವೆ ನಡೆದ ಜಗಳ ತಾರಕಕ್ಕೇರಿದೆ.

ಊಟ ಮಾಡಲು ಬಂದಿದ್ದ ಶ್ರೀನಿವಾಸ್ ಇಬ್ಬರ ಜಗಳದ ವೇಳೆ ಮಧ್ಯ ಪ್ರವೇಶಿಸಿದ್ದಾನೆ. ವಾಗ್ವಾದವನ್ನು ತಣ್ಣಗಾಗಿಸಲು ಪ್ರಯತ್ನಿಸಿದ್ದಾನೆ. ಆದರೆ ದುರಾದೃಷ್ಟವಶಾತ್ ಶ್ರೀನಿವಾಸ್ ತನ್ನ ಪ್ರಾಣವನ್ನೇ ಕಳೆದುಕೊಳ್ಳಬೇಕಾಗಿ ಬಂದಿದೆ.

ಜಗಳ ಬಿಡಿಸಲು ಮಧ್ಯಪ್ರವೇಶಿಸಿದ ಶ್ರೀನಿವಾಸ್​ನ ಹೊಟ್ಟೆಗೆ ಹೋಟೆಲ್ ವೇಟರ್ ಶೇಖರ್​ನ ಹೊಟ್ಟೆಗೆ ಚಾಕು ಇರಿದಿದ್ದಾನೆ. ಗಂಭೀರವಾಗಿ ಚಾಕು ಇರಿತಕ್ಕೆ ಒಳಗಾದ ಶ್ರೀನಿವಾಸ್ ಸ್ಥಳದಲ್ಲೇ ಕುಸಿದು ಬಿದ್ದು ಪ್ರಾಣ ಬಿಟ್ಟಿದ್ದಾನೆ. ಅಬ್ದುಲ್ ಸತ್ತಾರ, ಮಹ್ಮದ್ ಅನಾಸ್ ಸೇರಿ‌ ನಾಲ್ಕೈದು ಜನರು ಕೊಲೆ ಆರೋಪ ಮಾಡಿದ್ದು, ಯಾದಗಿರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net