More

    ಗದ್ದುಗೆ ಒಳಗೆ ಮಗು ಅಳುವ ಶಬ್ದ ಕೇಳಿಸುತ್ತಿತ್ತು… ಕುತೂಹಲದಿಂದ ಹೋದವರಿಗೆ ಶಾಕ್​ ಕಾದಿತ್ತು!

    ಯಾದಗಿರಿ: ಅಬ್ಬೆತುಮಕೂರ ಗ್ರಾಮದ ವಿಶ್ವರಾಧ್ಯ ಆಂಗ್ಲಾ ಶಾಲಾ ಮುಂಭಾಗದ ವಿಶ್ವಾರಾಧ್ಯರ ಗದ್ದುಗೆ ಬಳಿ ಮಗು ಅಳುತ್ತಿದ್ದ ಶಬ್ದ ಕೇಳಿಸುತಿತ್ತು. ಕುತೂಹಲದಿಂದ ಸ್ಥಳಕ್ಕೆ ಹೋದ ಸ್ಥಳೀಯರು ಅಲ್ಲಿದ್ದ ಮಗು ಕಂಡು ಅರೆಕ್ಷಣ ಶಾಕ್​ ಆದರು!

    ಹೌದು, ತಾಲೂಕಿನ ಮುಂಡರಗಿ ಸಮೀಪದ ಮಳ್ಳುಕಂಟಿಯಲ್ಲಿ ಇತ್ತೀಚಿಗೆ ನವಜಾತ ಶಿಶು ಪತ್ತೆಯಾದ ಬೆನ್ನಲ್ಲೇ ಮತ್ತೊಂದು ಅನಾಥ ನವಜಾತ ಗಂಡುಶಿಶು ಅಬ್ಬೆತುಮಕೂರ ಗ್ರಾಮದಲ್ಲಿ ಸಿಕ್ಕಿದೆ. ಯಾರೋ ಕಿಡಿಗೇಡಿಗಳು ನವಜಾತ ಶಿಶುವನ್ನು ಬಟ್ಟೆಯಲ್ಲಿ ಸುತ್ತಿ ಗದ್ದುಗೆಯೊಳಗೆ ಇಟ್ಟು ಹೋಗಿರುವ ಘಟನೆ ಸೋಮವಾರ ಬೆಳಗ್ಗೆ 9.30ರ ಸುಮಾರಿನಲ್ಲಿ ನಡೆದಿದೆ.

    ಗದ್ದುಗೆ ಒಳಗೆ ಮಗು ಅಳುವ ಶಬ್ದ ಕೇಳಿಸುತ್ತಿತ್ತು... ಕುತೂಹಲದಿಂದ ಹೋದವರಿಗೆ ಶಾಕ್​ ಕಾದಿತ್ತು!ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪ್ರಭಾಕರ ಕವಿತಾಳ, ಶಿಶು ಯೋಜನಾಧಿಕಾರಿ ರಾಧಾ ಮಣ್ಣೂರ ಮತ್ತು ಪೊಲೀಸರು ಹಾಗೂ ಮಕ್ಕಳ ಸಹಾಯವಾಣಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಹಸುಗೂಸನ್ನು ರಕ್ಷಿಸಿದರು. ಈ ಮಗುವಿನ ತೂಕ 2.5 ಕೆಜಿ ಇದ್ದು, ಆರೋಗ್ಯವಾಗಿದೆ.

    ಸದ್ಯ ಜಿಲ್ಲಾಸ್ಪತ್ರೆಯ ಐಸಿಯುನಲ್ಲಿ ಇಡಲಾಗಿದೆ. ವಿಶ್ವಾರಾಧ್ಯ ಗದ್ದುಗೆ ಬಳಿ ಸಿಸಿ ಕ್ಯಾಮರಾ ಇದೆ. ಇಲ್ಲಿಗೆ ಮಗು ತಂದಿಟ್ಟವರು ಯಾರು ಎಂದು ಪರಿಶೀಲಿಸುವುದಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪ್ರಭಾಕರ ಕವಿತಾಳ ತಿಳಿಸಿದ್ದಾರೆ.

    ದಿಢೀರ್​ ಖಾತೆ ಬದಲಾವಣೆಗೆ ಇದೇ ಕಾರಣ: ಡಿ.ಕೆ. ಶಿವಕುಮಾರ್

    ಖಾತೆ ಕಿತ್ತುಕೊಂಡ ಬೆನ್ನಲ್ಲೇ ಖಾಸಗಿ ಕಾರನ್ನೇರಿ ಶ್ರೀರಾಮುಲು ಹೊರಟದ್ದೆಲ್ಲಿಗೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts