More

    ತಂತ್ರಜ್ಞಾನ, ಇ-ಗೌವರ್ನೆನ್ಸ್ ಬಳಕೆಯಿಂದ ದೇಶದ ಭವಿಷ್ಯ ಉಜ್ವಲ

    ಶಿವಮೊಗ್ಗ: ಇಪ್ಪತ್ತೊಂದನೇ ಶತಮಾನದಲ್ಲಿ ತಂತ್ರಜ್ಞಾನ ಬಳಕೆ, ಇ-ಗೌವರ್ನೆನ್ಸ್, ಕ್ಷಿಪ್ರತೆ ಮತ್ತು ಪಾರದರ್ಶಕತೆಗೆ ಯುವಜನತೆ ಹೆಚ್ಚಿನ ಮಹತ್ವ ನೀಡಬೇಕಿದೆ. ಇದು ಸಾಧ್ಯವಾದರೆ ದೇಶದ ಭವಿಷ್ಯ ಉಜ್ವಲವಾಗುವುದರಲ್ಲಿ ಸಂದೇಹವಿಲ್ಲ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.
    ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನೆಹರು ಯುವ ಕೇಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕುವೆಂಪು ವಿಶ್ವವಿದ್ಯಾಲಯದ ಎನ್‌ಎಸ್‌ಎಸ್(ರಾಷ್ಟ್ರೀಯ ಸೇವಾ ಯೋಜನೆ) ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಗುರುವಾರ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದ್ದ ನೆರೆಹೊರೆ ಯುವ ಸಂಸತ್ತು ಮತ್ತು ಯುವ ಸೌರಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದೇಶದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ನಮ್ಮ ಯುವಜನತೆ ಪಾತ್ರ ಮಹತ್ತರವಾಗಿದೆ ಎಂದರು.
    ಭಾರತ ಯುವ ಶಕ್ತಿಯಿಂದ ಸಂಪತ್ಭರಿತವಾಗಿದೆ. ಜನಸಂಖ್ಯೆಯಲ್ಲೂ ವಿಶ್ವದಲ್ಲೇ ಮೊದಲ ಸ್ಥಾನಕ್ಕೇರಿದ್ದೇವೆ. ಹೆಚ್ಚು ಯುವಜನತೆ ಹೊಂದಿರುವ ದೇಶ ಇಡೀ ವಿಶ್ವಕ್ಕೆ ಉತ್ತಮ ಮಾನವ ಸಂಪನ್ಮೂಲ ನೀಡುವ ಜವಾಬ್ದಾರಿ ಹೆಚ್ಚಿದೆ. ಸುಸ್ಥಿರ ಮತ್ತು ಉತ್ತಮ ಆರ್ಥಿಕತೆ ಕಡೆ ನಮ್ಮ ದೇಶ ಹೆಜ್ಜೆ ಹಾಕುತ್ತಿದ್ದು ಈ ಬಾರಿಯ ಜಿ-20 ರಾಷ್ಟ್ರಗಳ ಶೃಂಗ ಸಭೆ ನಮ್ಮ ದೇಶದಲ್ಲಿ ನಡೆಯುತ್ತಿರುವುದು ಹೆಮ್ಮೆ ತರುವ ವಿಚಾರ ಎಂದು ಹೇಳಿದರು.
    ಯುವಶಕ್ತಿ ಹಬ್ಬದ ರೀತಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದೆ. ಯುವಜನತೆ ನೀಡುವ ಸಲಹೆಗಳಿಗೆ ಸರ್ಕಾರ ಗಮನ ನೀಡಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ನೀಡುವ ಸಲಹೆಗಳನ್ನು ಇಂದು ಜಗತ್ತು ಒಪ್ಪುತ್ತಿದೆ. ಟಾಪ್ 5 ದೇಶಗಳಲ್ಲಿ ಭಾರತವಿದ್ದು ನಮ್ಮ ಯುವಜನತೆ ಇನ್ನೂ ಹೆಚ್ಚಿನ ರೀತಿಯಲ್ಲಿ ದೇಶದ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿದರು.
    ಕುವೆಂಪು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ. ಎಸ್.ಕೆ.ನವೀನ್‌ಕುಮಾರ್, ಪರಿಸರ ತಜ್ಞ ಪ್ರೊ. ಬಿ.ಎಂ.ಕುಮಾರಸ್ವಾಮಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಉಮೇಶ್, ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಕೆಟಿಕೆ ಉಲ್ಲಾಸ್, ರಂಗಾಯಣ ಆಡಳಿತಾಧಿಕಾರಿ ಎ.ಸಿ.ಶೈಲಜಾ, ಕುವೆಂಪು ವಿವಿ ಎನ್‌ಎಸ್‌ಎಸ್ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ. ನಾಗರಾಜ್ ಪರಿಸರ,ಸಹಾಯಕ ಪ್ರಾಧ್ಯಾಪಕಿ (ಆಯುರ್ವೇದ )ಡಾ. ಕೆ.ಜೆ.ಹರ್ಷಿತ್, ಹೊಯ್ಸಳ ಕಾಲೇಜ್ ಆಫ್ ಮ್ಯಾನೇಜ್‌ಮೆಂಟ್ ಪ್ರಾಚಾರ್ಯ ವಿಲಿಯಂ ಡಿಸೋಜಾ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts