More

    ಡೈರಿ ಆಧರಿಸಿ ವೇತನ ಭತ್ಯೆ-ಬಡ್ತಿ; ಆರೋಗ್ಯ ಇಲಾಖೆಯ ಎಲ್ಲರಿಗೂ ಇನ್ನು ದಿನಚರಿ ಬರೆಯುವುದು ಕಡ್ಡಾಯ; ಸಚಿವ ಡಾ.ಕೆ.ಸುಧಾಕರ್ ಫರ್ಮಾನು

    ಉಡುಪಿ: ಆರೋಗ್ಯ ಇಲಾಖೆಯ ಎಲ್ಲರೂ ಇನ್ನು ಮುಂದೆ ದಿನಚರಿ ಬರೆಯುವುದು ಕಡ್ಡಾಯವಾಗಿದ್ದು, ಅವರು ಬರೆದ ಡೈರಿ ಆಧಾರದ ಮೇಲೆ ವೇತನಭತ್ಯೆ, ಬಡ್ತಿ ಇತ್ಯಾದಿಗಳನ್ನು ನಿರ್ಧರಿಸಲಾಗುವುದು ಎಂದು ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.

    ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಆಯುಕ್ತರು, ಜಿಲ್ಲಾ ಆರೋಗ್ಯಾಧಿಕಾರಿ ಸೇರಿ‌ ಎಲ್ಲರೂ ಡೈರಿ ಬರೆಯಬೇಕು ಎಂದು ಉಡುಪಿಯಲ್ಲಿ ಡಾ. ಸುಧಾಕರ್ ತಿಳಿಸಿದ್ದಾರೆ. ಯಾರು ಏನೇನು ಕೆಲಸ ಮಾಡಿದ್ದಾರೆ ಎಂಬುದನ್ನ ಬರೆದಿಡಬೇಕು. ಆ ಡೈರಿ ಆಧರಿಸಿ ವೇತನ ಭತ್ಯೆ, ಬಡ್ತಿ ಹಾಗೂ ಅಂಕಗಳನ್ನು ನೀಡಲಾಗುತ್ತದೆ. ಇನ್ನು ಮುಂದೆ ಪ್ರತಿ ಬುಧವಾರ ಇನ್​ಸ್ಪೆಕ್ಷನ್​ ಡೇ ಎಂದು ಘೋಷಿರುವ ಸಚಿವರು, ವಾರಕ್ಕೊಮ್ಮೆ ಎಲ್ಲವನ್ನೂ ಪರಿಶೀಲಿಸುವುದಾಗಿ ತಿಳಿಸಿದ್ದಾರೆ.

    ಮಂತ್ರಿಗಳಿಂದ ವೈದ್ಯರವರೆಗೂ ಅವರವರ ಕಾರ್ಯವ್ಯಾಪ್ತಿ ಕ್ಷೇತ್ರಕ್ಕೆ ಭೇಟಿ ನೀಡಿ ಗುಣಮಟ್ಟ ಹೆಚ್ಚಿಸಬೇಕು. ಕಾರ್ಯಕ್ಷಮತೆ ಉನ್ನತಮಟ್ಟಕ್ಕೆ ತೆಗೆದುಕೊಂಡು ಹೋಗಬೇಕು. ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆ ತರುವ ಯತ್ನ ಆಗಬೇಕು. ಖಾಸಗಿ ವ್ಯವಸ್ಥೆಗಿಂತಲೂ ಉತ್ತಮವಾಗಿ ಕೆಲಸ ಮಾಡಬೇಕು ಎಂದಿರುವ ಅವರು, ಮುಂದಿನ 60-90 ದಿನಗಳು ಸವಾಲಿನ ದಿನಗಳು ಎಂದಿದ್ದಾರೆ.

    ಇದನ್ನೂ ಓದಿ: ರಾಜ್ಯ ರಾಜಕಾರಣದಲ್ಲಿ ಆಗಲಿದೆ ಅಲ್ಲೋಲ-ಕಲ್ಲೋಲ!; ಕುತೂಹಲ ಮೂಡಿಸಿದೆ ಕಾಲಜ್ಞಾನ ಹೇಳಿಕೆ

    ಇನ್ನು ಕರೊನಾಗೆ ಸಂಬಂಧಿಸಿದಂತೆ ಮಾತನಾಡಿರುವ ಅವರು, ಪಾಸಿಟಿವ್ ರೇಟ್ ಕಡಿಮೆ ಇಟ್ಟುಕೊಳ್ಳಲೇಬೇಕು. ಒಬ್ಬ ಪಾಸಿಟಿವ್ ವ್ಯಕ್ತಿಯ 20-30 ಮಂದಿ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನ ಹುಡುಕಬೇಕು ಎಂದು ಸೂಚನೆ ನೀಡಿದ್ದೇನೆ ಎಂದರು. ಏ. 1ರಿಂದ 45ವರ್ಷ ಮೇಲ್ಪಟ್ಟ ಎಲ್ಲರಿಗೂ ಕಡ್ಡಾಯವಾಗಿ ಲಸಿಕೆ ನೀಡಲಾಗುವುದು. ಮನೆಯಲ್ಲಿರುವ ಪೋಷಕರು-ಹಿರಿಯರಿಗೆ ಲಸಿಕೆ ಕೊಡಿಸಿ, ಆ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚುವ ಕಾರ್ಯಕ್ರಮ ಜಾರಿಗೆ ತರಲಾಗುತ್ತದೆ ಎಂದರು. ಎರಡು ಸಾವಿರಕ್ಕೂ ಹೆಚ್ಚು ವೈದ್ಯರ ನೇರ ನೇಮಕಾತಿ ನಡೆಯುತ್ತಿದೆ. ರಾಜ್ಯದ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಇನ್ನು‌ ಮುಂದೆ ವೈದ್ಯರ ಕೊರತೆ ಇರುವುದಿಲ್ಲ ಎಂದು ಡಾ. ಸುಧಾಕರ್ ತಿಳಿಸಿದ್ದಾರೆ.

    ಇದನ್ನೂ ಓದಿ: ರೊಚ್ಚಿಗೆದ್ದು ಪೊಲೀಸರನ್ನೇ ಥಳಿಸಿದ ಸಾರ್ವಜನಿಕರು; ಅಡ್ಡಗಟ್ಟಿದ ಸಂಚಾರ ಪೊಲೀಸರಿಂದ ತಪ್ಪಿಸಿಕೊಳ್ಳುವಾಗ ಬಿದ್ದ ಬೈಕ್ ಸವಾರ ಸಾವು

    ಮತ್ತೆ ಕರೊನಾ ಅಟ್ಟಹಾಸ: ರಾಜ್ಯಾದ್ಯಂತ ಇಂದು ಒಂದೇ ದಿನ 21 ಮಂದಿ ಬಲಿ

    ಬಾರ್ ಡಾನ್ಸರ್​​ನ ಕೊಲೆ ಮಾಡಿದವನು ಯಾರು? ಪೊಲೀಸರ ತನಿಖೆಯಿಂದ ಹೊರಬಿತ್ತು ಸತ್ಯ!

    ಬೆಣ್ಣೆ ಕಾಫಿ ಕುಡಿದಿದ್ದೀರಾ?; ನೋಡಿ.. ಇಲ್ಲಿ ಇಪ್ಪತ್ತು ವರ್ಷಗಳಿಂದ ಸಿಗುತ್ತಿದೆ ‘ಬಟರ್ ಕಾಫಿ’..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts