More

    ಅಂಜಲಿ ಹತ್ಯೆ ಪ್ರಕರಣ ಸಿಬಿಐಗೆ ವಹಿಸಿ

    ಬೀದರ್: ಹುಬ್ಬಳ್ಳಿಯ ವೀರಾಪುರ ಬಡಾವಣೆ ನಿವಾಸಿ ಅಂಜಲಿ ಅಂಬಿಗೇರ ಹತ್ಯೆ ಪ್ರಕರಣ ಸಿಬಿಐ ತನಿಖೆ ಮಾಡಬೇಕು ಎಂದು ಜಿಲ್ಲಾ ಟೋಕರಿ ಕೋಲಿ ಸಮಾಜ ಸಂಘದ ಅಧ್ಯಕ್ಷ ಜಗನ್ನಾಥ ಜಮಾದಾರ ಆಗ್ರಹಿಸಿದರು.
    ನೇಹಾ ಹಿರೇಮಠ ಕೊಲೆ ಕೇಸ್ ಮಾಸುವ ಮುನ್ನವೇ ಅಂಜಲಿ ಹತ್ಯೆಯಾಗಿದ್ದು ಇಡೀ ಸಮಾಜವನ್ನು ಬೆಚ್ಚಿ ಬೀಳಿಸಿದೆ. ಅಂಜಲಿ ಕೊಲೆಗೈದವನಿಗೆ ಎನ್ಕೌಂಟರ್ ಅಥವಾ ಗಲ್ಲು ಶಿಕ್ಷೆ ನೀಡಬೇಕು ಎಂದು ಅವರು ಅವರು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
    ಅಂಜಲಿ ಕುಟುಂಬಕ್ಕೆ ಒಂದು ಕೋಟಿ ರೂ. ಪರಿಹಾರ ಜತೆಗೆ ಪರಿವಾರದ ಒಬ್ಬರಿಗೆ ಸರ್ಕಾರಿ ನೌಕರಿ ಕೊಡಬೇಕು. ವೀರಾಪುರ ಬಡಾವಣೆಯಲ್ಲಿ ಸಿಸಿ ಕ್ಯಾಮರಾ ಅಳವಡಿಸಿ ನಿರಂತರ ಪೊಲೀಸ್ ಬಂದೋಬಸ್ತ್ ಮಾಡಬೇಕು ಎಂದು ಆಗ್ರಹಿಸಿದರು.
    ಅಂಜಲಿ ಹತ್ಯೆ ಟೋಕರಿ ಕೋಲಿ ಸೇರಿ 37 ಪರ್ಯಾಯ ಪದಗಳಿಂದ ಕರೆಯಲ್ಪಡುವ ಈ ಸಮಾಜದ 60 ಲಕ್ಷ ಜನರಲ್ಲಿ ಆತಂಕ ಮೂಡಿಸಿದೆ. ಪದೇಪದೆ ನಮ್ಮ ಸಮುದಾಯದ ಮೇಲೆ ಅನ್ಯಾಯ, ಅತ್ಯಾಚಾರ, ಕೊಲೆ, ಸುಲಿಗೆ, ಶೋಷಣೆಗಳಂಥ ಹೀನಕೃತ್ಯಗಳು ನಡೆಯುತ್ತಿದ್ದು, ಸಮಾಜಕ್ಕೆ ಒಟ್ಟಾರೆ ರಕ್ಷಣೆ ಇಲ್ಲದಂತಾಗಿದೆ ಕಿಡಿಕಾರಿದ ಅವರು, ಅಂಜಲಿ ಕುಟುಂಬಕ್ಕೆ ವೈಯಕ್ತಿಕವಾಗಿ 51 ಸಾವಿರ ರೂ. ಕೊಡುವುದರ ಜತೆಗೆ ಶೀಘ್ರವೇ ಹುಬ್ಬಳ್ಳಿಯಲ್ಲಿರುವ ಅವರ ನಿವಾಸಕ್ಕೆ ತೆರಳಿ ಪರಿಹಾರ ನೀಡುವುದಾಗಿ ಭರವಸೆ ನೀಡಿದರು.
    ಸಂಘದ ಜಿಲ್ಲಾ ಸಂಚಾಲಕ ಸುನೀಲ ಭಾವಿಕಟ್ಟಿ, ಪ್ರಮುಖರಾದ ಚಂದ್ರಕಾಂತ ಹಳ್ಳಿಖೇಡಕರ್, ಷನ್ಮುಖಪ್ಪ ಶೇಕಾಪುರ, ಗೋವಿಂದ ಜಾಲಿ, ಶಿವರಾಜ ಜಮಾದಾರ ಇದ್ದರು.

    ಪ್ರತಿಭಟನೆ ಶುಕ್ರವಾರ
    ಪದೇಪದೆ ಟೋಕರಿ ಕೋಲಿ ಸಮಾಜದ ಮೇಲಾಗುತ್ತಿರುವ ಅನ್ಯಾಯ, ಸರ್ಕಾರದ ನಿರ್ಲಕ್ಷ ಖಂಡಿಸಿ ಶುಕ್ರವಾರ ಬೆಳಗ್ಗೆ 11ಕ್ಕೆ ನಗರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಜಗನ್ನಾಥ ಜಮಾದಾರ ತಿಳಿಸಿದರು. ಅಂಬೇಡ್ಕರ್ ವೃತ್ತದ ಹತ್ತಿರದ ಪ್ರವಾಸಿ ಮಂದಿರದಿಂದ ಭಗತಸಿಂಗ್ ವೃತ್ತ, ಮಹಾವೀರ ಸರ್ಕಲ್, ತಹಸಿಲ್ ಕಚೇರಿ ರಸ್ತೆ ಮೂಲಕ ಜಿಲ್ಲಾಕಾರಿ ಕಚೇರಿಗೆ ತೆರಳಿ ಮನವಿಪತ್ರ ಸಲ್ಲಿಸಲಾಗುವುದು. ಹೋರಾಟದಲ್ಲಿ ಜಿಲ್ಲೆಯ 8 ತಾಲೂಕುಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದವರು ಭಾಗವಹಿಸಬೇಕು ಎಂದು ಕೋರಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts