More

    ಸಂತಸದ ಜೀವನಕ್ಕೆ ನಿತ್ಯ ಯೋಗ ಅಗತ್ಯ

    ಭಾಲ್ಕಿ: ವಿದ್ಯಾರ್ಥಿಗಳು ಖಿನ್ನತೆ ಸೇರಿ ನಕಾರಾತ್ಮಕ ಭಾವನೆಗಳನ್ನು ಓಡಿಸಿ ಸಂತಸದ ಜೀವನ ನಡೆಸಲು ನಿತ್ಯ ಯೋಗ ಒಳಗೊಂಡಂತೆ ದೈಹಿಕ ಚಟವಟಿಕೆಗಳಲ್ಲಿ ಪಾಲ್ಗೊಳ್ಳಬೇಕು ಎಂದು ಮೈಸೂರಿನ ಮನೋರೋಗ ಚಿಕಿತ್ಸಕಿ ಡಾ.ವೇದಪ್ರಧಾ ಹೇಳಿದರು.
    ಕರಡ್ಯಾಳದ ಶ್ರೀ ಚನ್ನಬಸವೇಶ್ವರ ಗುರುಕುಲದಲ್ಲಿ ಏರ್ಪಡಿಸಿದ್ದ ವ್ಯಕ್ತಿತ್ವ ವಿಕಸನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದಿನ ವಿದ್ಯಾರ್ಥಿಗಳು ಜ್ಞಾನಾರ್ಜನೆಯನ್ನು ಆನಂದದಿಂದ ಅನುಭವಿಸದೆ ಅಂಕ ಗಳಿಕೆ ಒತ್ತಡಕ್ಕೆ ಸಿಲುಕಿ ಅಂತರ್ಮುಖಿಗಳು ಆಗುತ್ತಿದ್ದಾರೆ. ಹೀಗಾಗಿ ಮಾನಸಿಕ ರೋಗಗಳಿಗೆ ಒಳಗಾಗಿ ಉಜ್ವಲ ಭವಿಷ್ಯಕ್ಕೆ ಕುತ್ತು ತಂದುಕೊಳ್ಳುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
    ವಿದ್ಯಾರ್ಥಿ ಜೀವನವನ್ನು ಆನಂದದಿಂದ ಕಳೆಯಲು ಎಲ್ಲರೊಂದಿಗೆ ಮುಕ್ತವಾಗಿ ಬೆರೆಯಬೇಕು. ಭಾವನೆಗಳನ್ನು ಪರಸ್ಪರರೊಂದಿಗೆ ಹಂಚಿಕೊಂಡಾಗ ಮನಸ್ಸು ಹಗುರವಾಗಿ ಸದಾ ಪ್ರಸನ್ನತೆಯಿಂದ ಕೂಡಿರುತ್ತದೆ ಎಂದರು.
    ಗುರುಕುಲ ಆಡಳಿತಾಧಿಕಾರಿ ಮೋಹನರೆಡ್ಡಿ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣವನ್ನು ಶಿಕ್ಷೆ ಎಂದು ಭಾವಿಸದೆ ಜ್ಞಾನ ಸಂಪಾದನೆಯ ಮೂಲ ಎಂದು ಅರಿಯಬೇಕು. ಯಶಸ್ವಿ ಬದುಕಿನ ಕೀಲಿ ಕೈ ನಮ್ಮ ಬಳಿಯೇ ಇದೆ ಎಂದು ತಿಳಿಹೇಳಿದರು.
    ಉಪ ಪ್ರಾಚಾರ್ಯ ಸಿದ್ರಾಮ ಗೊಗ್ಗಾ, ಹನ್ಸ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts