More

    ಖಾಸಗೀಕರಣ ಸಂವಿಧಾನ ಆಶಯಕ್ಕೆ ವಿರುದ್ಧ

    ಬೀದರ್: ದೇಶದ ವಿವಿಧ ಸಾರ್ವಜನಿಕ ಸಂಸ್ಥೆಗಳನ್ನು ಖಾಸಗೀಕರಣ ಮಾಡುತ್ತಿರುವುದು ಸರಿಯಾದ ಬೆಳವಣಿಗೆಯಲ್ಲ. ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದ್ದರಿಂದ ಖಾಸಗೀಕರಣ ತಡೆಯುವ ಅಗತ್ಯವಿದೆ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಡಾ.ಡಿ.ಜಿ. ಸಾಗರ್ ಹೇಳಿದರು.
    ಡಾ.ಬಿ.ಆರ್. ಅಂಬೇಡ್ಕರ್ 133ನೇ ಜನ್ಮ ದಿನೋತ್ಸವ ನಿಮಿತ್ತ ನಗರದಲ್ಲಿ ಅಂಬೇಡ್ಕರ್ ಜನ್ಮ ದಿನೋತ್ಸವ ಆಚರಣೆ ಸಮಿತಿ ಆಯೋಜಿಸಿದ್ದ ಬಹಿರಂಗ ಸಭೆ ಉದ್ಘಾಟಿಸಿದ ಅವರು, ಆಡಳಿತ ನಡೆಸುವ ಹೆಸರಲ್ಲಿ ದೇಶದ ವಿವಿಧ ವಲಯಗಳ ಖಾಸಗೀಕರಣ ಮಾಡಲಾಗುತ್ತಿದೆ. ದೇಶದ ಸಂಪತ್ತು ಬಂಡವಾಳಶಾಹಿಗಳ ಹಿಡಿತಕ್ಕೆ ಒಳಗಾಗುತ್ತಿರುವುದನ್ನು ಪ್ರಜೆಗಳು ತಡೆಯಬೇಕು ಎಂದು ಕರೆ ನೀಡಿದರು.
    ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರೊ.ಅಪ್ಪಗೇರೆ ಸೋಮಶೇಖರ ಮಾತನಾಡಿ, ಬಡವರಿಂದ ಕೂಡಿರುವ ಶ್ರೀಮಂತ ಭಾರತ ಬೇಕಿಲ್ಲ. ಸಮಾನತೆ, ಸಮೃದ್ಧ ಭಾರತ ನಮಗೆ ಬೇಕಾಗಿದೆ. ದೇಶದ ಭೂಮಿಯನ್ನು ರಾಷ್ಟ್ರೀಕರಣಗೊಳಿಸಿ ಸಹಕಾರ ಬೇಸಾಯಿ ಪದ್ಧತಿ ಮೂಲಕ ಕೃಷಿ ಅಭಿವೃದ್ಧಿಪಡಿಸಬೇಕು. ದೇಶದ ಎಲ್ಲ ಧರ್ಮಗಳಿಗೆ ರಕ್ಷಣೆ ಕವಚವಾಗಿರುವ ಸಂವಿಧಾನ ರಚಿಸಿರುವ ಅಂಬೇಡ್ಕರ್ ಜಯಂತಿಯನ್ನು ಮಠ-ಮಸೀದಿ, ಚರ್ಚ್, ವಿಹಾರ, ಬಸದಿಗಳಲ್ಲಿ ಆಚರಿಸಬೇಕು ಎಂದು ಹೇಳಿದರು.
    ವಿಚಾರವಾದಿ ಡಾ.ವಿಠ್ಠಲ್ ವಗ್ಗನ್ ಮಾತನಾಡಿ, ಜಾತಿ ವ್ಯವಸ್ಥೆ ಬೇರುಬಿಟ್ಟಿರುವ, ಬಿಡುತ್ತಿರುವ ಸಾಹಿತ್ಯ ಕೃತಿಗಳನ್ನು ಕೈಬಿಡಬೇಕು. ಜಾತಿ ವ್ಯವಸ್ಥೆ ರೂಪಿಸುವ ಕೃತಿಗಳನ್ನು ರಚನೆ ಮಾಡಬಾರದು ಎಂದು ಸಲಹೆ ನೀಡಿದರು.
    ಹುಮನಾಬಾದ್ ತಾಪಂ ಮಾಜಿ ಅಧ್ಯಕ್ಷ ರಮೇಶ ಡಾಕುಳಗಿ ಮಾತನಾಡಿ, ಸಂವಿಧಾನದ ಮೂಲಕ ಪ್ರಜಾಪ್ರಭುತ್ವ ಹಾಗೂ ಸರ್ವರಿಗೆ ಸಮಾನತೆ ನೀಡಿದ ಶ್ರೇಯಸ್ಸು ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ. ಭಾರತ ಗೌರವವನ್ನು ಜಗತ್ತಿನಲ್ಲಿ ಹೆಚ್ಚಿಸಿದ್ದು ಬಾಬಾಸಾಹೇಬರು ಎಂದರು.
    ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು, ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಮಾತನಾಡಿದರು.
    ಮಹಾಪುರುಷರನ್ನು ಒಂದು ಜಾತಿಗೆ ಸೀಮಿತಗೊಳಿಸುವುದು ಬೇಡ. ಅವರ ತತ್ವ, ಚಿಂತನೆಗಳು ಸಮಾಜದ ಎಲ್ಲರಿಗೂ ಒಳಿತನ್ನೇ ಮಾಡುತ್ತವೆ. ಡಾ.ಅಂಬೇಡ್ಕರ್ ಜೀವನ ಮತ್ತು ಸಾಧನೆ ಎಲ್ಲರಿಗೂ ಆದರ್ಶ ಮತ್ತು ಸೂತ್ರ್ಫಿದಾಯಕವಾಗಿದೆ ಎಂದರು.
    ಅಧ್ಯಕ್ಷತೆ ವಹಿಸಿದ್ದ ಅಂಬೇಡ್ಕರ್ ಜನ್ಮ ದಿನೋತ್ಸವ ಆಚರಣೆ ಸಮಿತಿ ಅಧ್ಯಕ್ಷ ಮಾರುತಿ ಬೌದ್ಧೆ ಮಾತನಾಡಿ, ಯಾವುದೇ ಭೇದಭಾವ ಇಲ್ಲದೆ ಜಗತ್ತಿನ ಎಲ್ಲರಿಗೂ ಸೂರ್ಯ ಸಮನಾಗಿ ಬೆಳಕು ನೀಡಿದಂತೆ ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಭಾರತದ ಪ್ರತಿಯೊಬ್ಬರಿಗೂ ಸಮಾನ ಗೌರವದಿಂದ ಬದುಕುವ ಹಕ್ಕು ಕಲ್ಪಿಸಿದ್ದಾರೆ. ಸಂವಿಧಾನ ಮತ್ತು ಪ್ರಜಾಪ್ರಭುತ್ವದ ರಕ್ಷಣೆ ಪ್ರತಿಯೊಬ್ಬರ ಹಕ್ಕಾಗಿದ್ದು, ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ತಿಳಿಸಿದರು.
    ಆಣದೂರಿನ ಭಂತೆ ಸಂಘ ರಜ್ಜೀತ್ ಸಾನ್ನಿಧ್ಯ ವಹಿಸಿದ್ದರು. ಪ್ರಮುಖರಾದ ಪ್ರಕಾಶ ಮಾಳಗೆ, ವಿಷ್ಣುವರ್ಧನ್ ವಾಲ್ದೊಡ್ಡಿ, ಅವಿನಾಶ ದೀನೆ, ಪವನ್ ಮಿಠಾರೆ, ವಿನೋದ ಬಂದಗೆ, ಅನೀಲಕುಮಾರ ಬೆಲ್ದಾರ್, ಬಾಬುರಾವ ಪಾಸ್ವಾನ್, ಫರ್ನಾಂಡಿಸ್ ಹಿಪ್ಪಳಗಾಂವ, ರಾಜಕುಮಾರ ಬನ್ನೇರ್, ಕಲ್ಯಾಣರಾವ ಭೋಸ್ಲೆ, ಶಿವಕುಮಾರ ನೀಲಿಕಟ್ಟಿ, ಶ್ರೀಪತರಾವ ದೀನೆ, ಅಂಬಾದಾಸ ಗಾಯಕವಾಡ, ಸುಬ್ಬಣ್ಣ ಕರಕನಳ್ಳಿ, ವಿಜಯಕುಮಾರ ಸೋನಾರೆ, ಶಾಲಿವಾನ ಬಡಿಗೇರ, ಬಾಬುರಾವ ಮಿಠಾರೆ, ರಾಹುಲ್ ಡಾಂಗೆ, ರವಿ ಭೂಸಂಡೆ, ರಾಜಕುಮಾರ ಡೊಂಗರೆ, ವಿನಯ ಮಾಳಗೆ, ರಂಜೀತ ಜೈನೂರು, ಸುಧಾರಾಣಿ ಗುಪ್ತಾ, ರಾಜಕುಮಾರ ವಾಘಮಾರೆ, ಬುದ್ಧಪ್ರಕಾಶ ಭಾವಿಕಟ್ಟಿ, ರಾಹುಲ್ ಹಾಲಹಿಪ್ಪರ್ಗೆ, ರಾಜಕುಮಾರ ಗುನ್ನಳ್ಳಿ ಇತರರಿದ್ದರು.
    ಮಹೇಶ ಗೋರನಾಳಕರ್ ನಿರೂಪಣೆ ಮಾಡಿದರು. ಅರುಣ ಪಟೇಲ್ ವಂದಿಸಿದರು. ದ್ವಿತೀಯ ಪಿಯುಸಿಯಲ್ಲಿ ಅಗ್ರಶ್ರೇಣಿಯಲ್ಲಿ ಪಾಸಾದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts