More

    ಅನಿಲ್​ ಕುಂಬ್ಳೆಗಾಗಿ ಪ್ರಾಣವನ್ನು ಬೇಕಾದರೂ ಕೊಡುತ್ತಿದ್ದೆ: ಗೌತಮ್​ ಗಂಭೀರ್​

    ನವದೆಹಲಿ: ಭಾರತ ಕ್ರಿಕೆಟ್​ ತಂಡದ ನಾಯಕರಾಗಿದ್ದಾಗ ದಿಗ್ಗಜ ಲೆಗ್​ಸ್ಪಿನ್ನರ್​ ಅನಿಲ್​ ಕುಂಬ್ಳೆ ರೀತಿಯಲ್ಲಿ ತಂಡದಲ್ಲಿ ಸ್ಥಾನವನ್ನು ಖಚಿತಪಡಿಸಿದ ನಾಯಕ ಬೇರಾರೂ ಇಲ್ಲ ಎಂದು ಭಾರತ ಕ್ರಿಕೆಟ್​ ತಂಡದ ಮಾಜಿ ಆರಂಭಿಕ ಆಟಗಾರ ಗೌತಮ್​ ಗಂಭೀರ್​ ಹೇಳಿದ್ದಾರೆ.

    ಸ್ಪೋರ್ಟ್ಸ್​ ತಕ್​ ಎಂಬ ಸಂದರ್ಶನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಚುಟುಕಾಗಿ ಗೌತಿ ಎಂದು ಕರೆಯಲ್ಪಡುತ್ತಿದ್ದ ಗೌತಮ್​ ಗಂಭೀರ್​, ಅನಿಲ್​ ಕುಂಬ್ಳೆ ಅವರ ಈ ಔದಾರ್ಯಕ್ಕಾಗಿ ಅವರಿಗಾಗಿ ಪ್ರಾಣವನ್ನು ಬೇಕಾದರೂ ಕೊಡಲು ಸಿದ್ಧನಿದ್ದೆ ಎಂದು ತಿಳಿಸಿದ್ದಾರೆ.

    ಇದನ್ನೂ ಓದಿ: 2032ರ ಒಲಿಂಪಿಕ್ಸ್​ಗೆ ಭಾರತ ಬಿಡ್; ಐಒಎ ಅಧ್ಯಕ್ಷ ನರೀಂದರ್ ಬಾತ್ರಾ ಹೇಳಿಕೆ

    ಅನಿಲ್​ ಕುಂಬ್ಳೆ ಕೇವಲ 14 ಟೆಸ್ಟ್​ ಪಂದ್ಯಗಳಲ್ಲಿ ಭಾರತ ಕ್ರಿಕೆಟ್​ ತಂಡದ ನಾಯಕರಾಗಿದ್ದರು. ಇವರು ನಾಯಕರಾಗಿದ್ದ ಸಂದರ್ಭದಲ್ಲೇ ಆಸ್ಟ್ರೇಲಿಯಾದಲ್ಲಿ ಹರ್ಭಜನ್​ ಸಿಂಗ್​ ಮತ್ತು ಆಂಡ್ರ್ಯೂ ಸಿಮಂಡ್ಸ್​ ನಡುವಿನ ಮಂಕಿಗೇಟ್​ ವಿವಾದ ಸೃಷ್ಟಿಯಾಗಿತ್ತು. ಈ ಸಂದರ್ಭವನ್ನು ನಿರ್ವಹಿಸುವಲ್ಲಿ ಅನಿಲ್​ ಕುಂಬ್ಳೆ ರಾಜತಾಂತ್ರಿಕ ನೈಪುಣ್ಯತೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.

    ಅವರ ಈ ಗುಣಗಳನ್ನು ಭಾರತ ಕ್ರಿಕೆಟ್​ ತಂಡದ ಮಾಜಿ ವೇಗಿ ಆರ್​.ಪಿ. ಸಿಂಗ್​ ಕೊಂಡಾಡಿದ್ದರು. ಇದರ ಬೆನ್ನಲ್ಲೇ ಗೌತಮ್​ ಗಂಭೀರ್​ ಕೂಡ ಅನಿಲ್​ ಕುಂಬ್ಳೆ ಅವರ ನಾಯಕತ್ವದ ಗುಣವನ್ನು ಮೆಚ್ಚಿಕೊಂಡು ಹೊಗಳಿದ್ದಾರೆ.

    ಇದನ್ನೂ ಓದಿ: ದೇಣಿಗೆಗಾಗಿ ಹರ್ಷಲ್​ ಗಿಬ್ಸ್ ಬ್ಯಾಟ್ ಹರಾಜು; ಕೋವಿಡ್​ 19 ವಿರುದ್ಧ ಹೋರಾಟಕ್ಕೆ ದೇಣಿಗೆ
    2008ರ ಆಸ್ಟ್ರೇಲಿಯಾ ಪ್ರವಾಸದ ಸಂದರ್ಭದಲ್ಲಿ ನಾನು ಮತ್ತು ವೀರೇಂದ್ರ ಸೆಹ್ವಾಗ್​ ರಾತ್ರಿ ಭೋಜನ ಮಾಡುತ್ತಿದ್ದೆವು. 4 ಟೆಸ್ಟ್​ ಪಂದ್ಯಗಳ ಸರಣಿಯಲ್ಲಿ ನಾಲ್ಕೂ ಪಂದ್ಯಗಳಲ್ಲಿ ನೀವಿಬ್ಬರೂ ಆರಂಭಿಕರಾಗಿ ಕಣಕ್ಕಿಳಿಯುತ್ತೀರಿ. ನೀವು 8 ಇನಿಂಗ್ಸ್​ಗಳಲ್ಲೂ ಶೂನ್ಯ ಸಾಧನೆ ಮಾಡಿದರೂ ತೊಂದರೆ ಇಲ್ಲ ಎಂದು ಹೇಳಿದರು. ಇದನ್ನು ಕೇಳಿಸಿಕೊಂಡ ನಂತರದಲ್ಲಿ ನಾನು ಯಾರಿಗೂ ಪ್ರಾಣವನ್ನು ಬೇಕಾದರೂ ಕೊಡಬೇಕೆಂದರೆ ಅದು ಅನಿಲ್​ ಕುಂಬ್ಳೆ ಮಾತ್ರ ಎಂದು ತೀರ್ಮಾನಿಸಿದೆ ಎಂದು ಗೌತಿ ವಿವರಿಸಿದ್ದಾರೆ.

    ಆ ಸರಣಿಯಲ್ಲಿ ಗೌತಮ್​ ಗಂಭೀರ್​ ದ್ವಿಶತಕ ಸಾಧನೆಯ ಜತೆಗೆ ಉತ್ತಮ ಪ್ರದರ್ಶನ ತೋರಿದರು. ತಮ್ಮ ಈ ಎಲ್ಲ ಸಾಧನೆಯ ಶ್ರೇಯ ಅನಿಲ್​ ಕುಂಬ್ಳೆ ಅವರಿಗೆ ಸಲ್ಲತಕ್ಕದ್ದು ಎಂದು ಹೇಳಿದ್ದಾರೆ.

    ಸೌರವ್​ ಗಂಗೂಲಿ ಮತ್ತು ಎಂ.ಎಸ್​. ಧೋನಿ ರೀತಿಯಲ್ಲಿ ದೀರ್ಘಾವಧಿವರೆಗೆ ಭಾರತ ಕ್ರಿಕೆಟ್​ ತಂಡದ ನಾಯಕರಾಗಿ ಕಾರ್ಯನಿರ್ವಹಿಸುವ ಅವಕಾಶ ಕುಂಬ್ಳೆಗೆ ದೊರೆತಿದ್ದರೆ, ಇನ್ನೂ ಹಲವು ದಾಖಲೆಗಳು ನಿರ್ಮಾಣವಾಗಿರುತ್ತಿದ್ದವು ಎಂದು ಅಭಿಪ್ರಾಯಪಟ್ಟಿದ್ದಾರೆ.

    ಉಗ್ರರಿಂದ ಜನರನ್ನು ರಕ್ಷಿಸಿ ಹುತಾತ್ಮರಾದ ಐವರು ಭಾರತೀಯ ಯೋಧರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts