More

    ಗವಿರಾಯಸ್ವಾಮಿ ಬೆಟ್ಟದ ರಾಮ ಪಾದುಕೆಗೆ ಪೂಜೆ

    ಕೊಳ್ಳೇಗಾಲ : ಶ್ರೀರಾಮಚಂದ್ರ ಪ್ರಭು ಹಾಗೂ ಲಕ್ಷ್ಮಣ ವನವಾಸದ ವೇಳೆ ನಡೆದಾಡಿದ ತಾಲೂಕಿನ ಗವಿರಾಯಸ್ವಾಮಿ ಬೆಟ್ಟದ ತಪ್ಪಲಲ್ಲಿರುವ ರಾಮ ಪಾದುಕೆ ಹಾಗೂ ಉತ್ಸವ ಮೂರ್ತಿ ಪೂಜಿಸುವ ಮಂಟಪಕ್ಕೆ ಶನಿವಾರ ಬಿಜೆಪಿ ಮುಖಂಡ, ಕರಸೇವಕ, ರಾಮ ಭಕ್ತ ಸತ್ತೇಗಾಲ ಹ್ಯಾಂಡ್‌ಪೋಸ್ಟ್ ರವಿಶಂಕರ್ ರಾಮ ವೇಷಧಾರಿಯಾಗಿ, ಹಲವು ಭಕ್ತರ ಜತೆಗೂಡಿ ಶನಿವಾರ ಪೂಜೆ ಸಲ್ಲಿಸಿದರು.

    ಉದ್ಯಮಿ ನಿರಂಜನ್ ರವಿ, ಸತ್ತೇಗಾಲ ಮಹೇಶ್, ನಾಗೇಂದ್ರ, ಮಾದಪ್ಪ ಸೇರಿದಂತೆ ಹಲವು ಭಕ್ತರು ಈ ವಿಶೇಷ ಪೂಜೆಯಲ್ಲಿ ಪಾಲ್ಗೊಂಡರು. ಜ.22ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

    ತಾಲೂಕಿನ ಹ್ಯಾಂಡ್‌ಪೋಸ್ಟ್ ಸಮೀಪ ಗವಿರಾಯ ಬೆಟ್ಟವಿದೆ. ಬೆಟ್ಟದ ಮೇಲೆ ಗವಿರಾಯಸ್ವಾಮಿ ದೇವಾಲಯವಿದೆ. ವನವಾಸದ ವೇಳೆ ಸೀತೆ ಅಪಹರಣವಾದ ಸಂದರ್ಭದಲ್ಲಿ ರಾಮ-ಲಕ್ಷ್ಮಣ, ಸೀತಾ ಮಾತೆಯನ್ನು ಹುಡುಕುತ್ತ ಈ ಬೆಟ್ಟಕ್ಕೆ ಬಂದಿದ್ದರು ಎಂಬ ಇತಿಹಾಸವಿದೆ. ಬೆಟ್ಟದ ಮೇಲಿರುವ ಶ್ರೀರಾಮ ನೀರಿನ ಕೊಳದಲ್ಲಿ ದಶರಥರಿಗೆ ಪಿಂಡ ಪ್ರದಾನ ಮಾಡಲು ಈ ಸ್ಥಳವನ್ನು ಆಯ್ಕೆ ಮಾಡಿಕೊಂಡಿದ್ದರು ಎಂದು ಹೇಳಲಾಗುತ್ತದೆ. ಬೆಟ್ಟದ ಗವಿಯಲ್ಲಿ ವಾಸವಿದ್ದ ರಾಕ್ಷಸನನ್ನು ರಾಮ ಸಂಹಾರ ಮಾಡಿದ್ದನು. ನಂತರ ರಾಕ್ಷಸನಿಗೆ ಮೋಕ್ಷ ಪ್ರಾಪ್ತಿಯಾಯಿತು ಎಂಬ ಪುರಾಣವಿದೆ. ಇಲ್ಲಿ ರಾಮನ ಪಾದುಕೆಗಳಿದ್ದು ಪಕ್ಕದಲ್ಲಿಯೇ ಒಂದು ಚಿಕ್ಕ ಮಂಟಪ ಕೂಡ ಇದೆ. ಇಂದು ರಾಮನನ್ನೇ ಗವಿರಾಯಸ್ವಾಮಿ ಎಂದು ಪೂಜಿಸಲಾಗುತ್ತಿದೆ ಎಂಬುದು ಐತಿಹ್ಯ ಎಂದು ಅರ್ಚಕ ಶ್ರೀಧರ್ ಭಟ್ ತಿಳಿಸಿದರು.

    ರಾಮ ವೇಷಧಾರಿ ರವಿಶಂಕರ್ ಮಾತನಾಡಿ, 22 ರಂದು ಅಯೋಧ್ಯೆಯಲ್ಲಿ ಶ್ರೀರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಇರುವುದರಿಂದ ಇಂದು ರಾಮ ವೇಷಧಾರಿಯಾಗಿ ರಾಮನ ಪಾದುಕೆಗೆ ಪೂಜೆ ಸಲ್ಲಿಸಲಾಗಿದೆ. ಅಯೋಧ್ಯೆ ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಮಗೆ ವಿಶ್ವ ಹಿಂದು ಪರಿಷತ್‌ನಿಂದ ಅಧಿಕೃತ ಆಹ್ವಾನ ಬಂದಿದೆ. ಆದ್ದರಿಂದ ನಾವೂ ಹೋಗುತ್ತೇವೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts