More

    ಮೌಲ್ಯಗಳ ಆರಾಧನೆಯೇ ದಶಲಕ್ಷಣ ಪರ್ವದ ಆಚರಣೆ

    ಉಪ್ಪಿನಬೆಟಗೇರಿ: ಮನುಕುಲದ ಜೀವನ ವಿಧಾನಕ್ಕೆ ಅತಿ ಅಗತ್ಯವಾಗಿರುವ ಅಹಿಂಸೆ, ಸತ್ಯ, ಅಸ್ತೇಯ, ಬ್ರಹ್ಮಚರ್ಯ, ದಯೆ, ಕ್ಷಮೆ, ದಾನ, ಪೂಜೆ, ಜಪ, ಧ್ಯಾನ ಮುಂತಾದ ಮೌಲ್ಯಗಳ ಆರಾಧನೆಯೇ ದಶಲಕ್ಷಣ ಪರ್ವದ ಆಚರಣೆಯಾಗಿದೆ ಎಂದು ಅಮ್ಮಿನಬಾವಿ ಪಂಚಗೃಹ ಹಿರೇಮಠದ ಶ್ರೀ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

    ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮದ ಶ್ರೀ ನೇಮಿನಾಥ ಜಿನಾಲಯದಲ್ಲಿ ಹಮ್ಮಿಕೊಂಡಿದ್ದ 10 ದಿನಗಳ ದಶಲಕ್ಷಣ ಪರ್ವದ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

    ಅಂತರಂಗದಲ್ಲಿ ಭಗವಂತನ ದರ್ಶನ ಹೊಂದಲು ಮೌಲ್ಯಗಳ ಆರಾಧನೆ ಪೂರಕವಾದದ್ದು. ಸಮಸ್ತ ಜೀವರಾಶಿಗಳಿಗೆ ಒಳಿತನ್ನೇ ಬಯಸುವುದರೊಂದಿಗೆ ಸ್ವ ಧರ್ಮ ನಿಷ್ಠೆ ಮತ್ತು ಪರಧರ್ಮ ಸಹಿಷ್ಣುತೆಯಿಂದ ಬದುಕಲು ರೂಢಿಸಿಕೊಂಡರೆ ವೈಯಕ್ತಿಕ ಹಾಗೂ ಸಾಮಾಜಿಕ ಶಾಂತಿ-ಸಾಮರಸ್ಯ ವರ್ಧಿಸುತ್ತವೆ ಎಂದರು.

    ವೈಶುದೀಪ ಪ್ರತಿಷ್ಠಾನದ ಅಧ್ಯಕ್ಷೆ ಶಿವಲೀಲಾ ಕುಲಕರ್ಣಿ ಮಾತನಾಡಿ, ಜೈನ ಧರ್ಮದ ಪ್ರಮುಖ ಆಚರಣೆಯಾದ ದಶಲಕ್ಷಣ ಪರ್ವವು ಎಲ್ಲರ ಬಾಳಿನಲ್ಲಿ ನೆಮ್ಮದಿಯನ್ನು ತುಂಬಲಿ ಎಂದರು.

    ಅಮ್ಮಿನಬಾವಿ ಗ್ರಾಪಂ ಮಾಜಿ ಅಧ್ಯಕ್ಷ ಪಿ.ಎಸ್. ಪತ್ರಾವಳಿ ಅಧ್ಯಕ್ಷತೆ ವಹಿಸಿದ್ದರು. ಜೈನ ಸಮಾಜದ ಶಶಿಕಲಾ ದೇಸಾಯಿ, ಶಂಕರ ರಾಘೂನವರ, ಪಮ್ಮಣ್ಣ ಧಾರವಾಡ, ಚಂದ್ರಕಾಂತ ನವಲೂರ, ಅಜಿತಕುಮಾರ ದೇಸಾಯಿ, ದೀಪಕ ದೇಸಾಯಿ, ಶಾಂತಿನಾಥ ಲೋಕೂರ, ಶಿಲ್ಪಾ ದೇಸಾಯಿ, ಮಂಜುನಾಥ ಗುಡ್ಡದಮನಿ, ಅರುಣ ನವಲೂರ, ಮಹಾವೀರ ಅಣ್ಣಿಗೇರಿ, ಈಶ್ವರ ಗುಡ್ಡದಮನಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts