More

    ಪ್ರಮುಖರು ಮತ ಚಲಾವಣೆ

    ಬಳ್ಳಾರಿ : ಗಣಿನಾಡು ಬಳ್ಳಾರಿಯ ಸುಡುಬಿಸಿಲಿನಲ್ಲಿಯೂ ಮತದಾರರು ಬೆಳ್ಳಿಗೆಯಿಂದಲೇ ಬಿರುಸಿನಿಂದ ಮತ ಚಲಾಯಿಸಿದರು. ಮಧ್ಯಾಹ್ನದ ಮೂರು ಗಂಟೆ ವೇಳೆಗೆ ಶೇ 56.76% ಮತದಾನ ಪ್ರಮಾಣ ನಡೆದಿತ್ತು.
    ಮತದಾರರಿಗೆ ಬಿಸಲಿನ ತಾಪದಿಂದ ರಕ್ಷಿಸಿಕೊಳ್ಳಲು ಕುಡಿಯುವ ನೀರು, ಏರಕೂಲರ್, ನೆರಳಿಗೆ ಶಾಮಿಯಾನ್, ಒಆರ್‌ಎಸ್ ದ್ರಾವಣದ ಪಾನಕ ವ್ಯವಸ್ಥೆ ಮಾಡಲಾಗಿತ್ತು.
    ಸಂಡೂರಿನ ಪಂಚಾಯತಿ ರಾಜ್ ಕಚೇರಿಯಲ್ಲಿ ಬಳ್ಳಾರಿ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಈ. ತುಕಾರಾಮ್, ವುಂಕಿ ಮರಿ ಸಿದ್ದಮ್ಮ ಅಂಗ್ಲ ಮಾಧ್ಯಮ ಶಾಲೆಯಲ್ಲಿ ಸಚಿವ ಬಿ.ನಾಗೇಂದ್ರ, ಶಾಸಕ ನಾರಾ ಭರತರೆಡ್ಡಿ , ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಕಚೇರಿಯಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು, ಹವಂಬಾವಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಾಜಿ ಶಾಸಕ ಜಿ. ಸೋಮಶೇಖರರೆಡ್ಡಿ, ಗಂಗಾವತಿ ಶಾಸಕ ಜಿ. ಜನಾರ್ಧನರೆಡ್ಡಿ ಪತ್ನಿ ಅರುಣಾ ಲಕ್ಷ್ಮಿ, ಸೇಂಟ್ ಜೋಸೆಫ್ ಬಾಲಕರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಸದ ನಾಸೀರ್ ಹುಸೇನ್, ಕುರುಗೋಡಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಸಕ ಜೆ. ಎನ್. ಗಣೇಶ ಕುಟುಂಬದ ಸಮೇತರಾಗಿ ಮತಗಟ್ಟೆಗಳಿಗೆ ಆಗಮಿಸಿ ಮತ ಚಲಾಯಿಸಿದರು. ಕೊಳಗಲ್, ಕುಡಿತಿನಿ, ಶಾನವಾಸಪುರದ ಚುನಾವಣೆ ಸಿಬ್ಬಂದಿ ಲಕ್ಷ್ಮಿದೇವಿ, ರವಿಚಂದ್ರ, ಗಂಗಮ್ಮ ರವರು ಬಿಸಿಲಿನ ಪ್ರಖರತೆಯಿಂದ ರಕ್ತದೊತ್ತಡ ಪ್ರಮಾಣ ಕಡಿಮೆಯಾಗಿ ಆಸ್ವಸ್ತರಾಗಿದ್ದರು. ಕೂಡಲೇ ಆರೋಗ್ಯ ಸಿಬ್ಬಂದಿ ಚಿಕಿತ್ಸೆ ಒದಗಿಸಿ ಪರಿಣಾಮ ಗುಣಾಮುಖರಾಗಿದ್ದಾರೆ. ಸಿರುಗುಪ್ಪ ತಾಲೂಕಿನ ಬೆಳಗಲ್, ತೊಂಡಿಹಾಳ್ ಗ್ರಾಮಗಳಲ್ಲಿ ಮತಯಂತ್ರ ಕೈಕೊಟ್ಟ ಪರಿಣಾಮ ಒಂದು ಗಂಟೆ ತಡವಾಗಿ ಆರಂಭವಾಯಿತು. ತಾಳೂರು, ಶಾಲಿಗನೂರು ಮತಯಂತ್ರಗಳಲ್ಲಿ ದೋಷ ಕಂಡು ಬಂದಿತ್ತು. ಕೆಂಚನಗುಡ್ಡದ ಗ್ರಾಮದಲ್ಲಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಮತ ಚಲಾಯಿಸುವಂತೆ ಮತಗಟ್ಟೆ ಮುಂಭಾಗದಲ್ಲಿ ಪ್ರಚಾರ ನಡೆಸಿದ್ದರಿಂದ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ಮಧ್ಯೆ ಕೆಲ ಕಾಲ ಮಾತಿನ ಚಕಮಕಿ ನಡೆಯಿತು. ಕಂಪ್ಲಿ ತಾಲೂಕಿನ ಎಮ್ಮಿಗನೂರು ಗ್ರಾಮದ ಗ್ರಾಪಂ ಸದಸ್ಯ ಮೌನೇಶ್(43) ಅನಾರೋಗ್ಯದಿಂದ ಬೆಳಗಿನ ಜಾವ ಮೃತಪಟ್ಟಿದ್ದಾರೆ. ನಗರದ ಬಸವೇಶ್ವರ ಕಾಲೊನಿ ನಿವಾಸಿಯೊಬ್ಬರ ಪತ್ನಿ ಒಂದು ವರ್ಷದ ಹಿಂದಯೇ ಮೃತಪಟ್ಟಿದ್ದಾರೆ. ಅದರೆ, ಮತದಾನ ಪಟ್ಟಿಯಿಂದ ಪತ್ನಿ ಹೆಸರು ತೆಗೆಯದೆ ಪತಿಯ ಹೆಸರನ್ನು ತೆಗೆದು ಹಾಕಲಾಗಿದೆ ಎಂದು ಆರೋಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts