More

    ಬೆರಟಹಳ್ಳಿ ಮಹದೇಶ್ವರಸ್ವಾಮಿ ಆರಾಧನೆ

    ಗುಂಡ್ಲುಪೇಟೆ: ತಾಲೂಕಿನ ಬೆರಟಹಳ್ಳಿ ಗ್ರಾಮದ ಅಕ್ಷಯ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ 27ನೇ ಆರಾಧನಾ ಮಹೋತ್ಸವ ಸೋಮವಾರ ವಿಜೃಂಭಣೆಯಿಂದ ನಡೆಯಿತು. ಸುಮಾರು 15 ಸಾವಿರಕ್ಕೂ ಹೆಚ್ಚು ಭಕ್ತರು ದೇವರ ದರ್ಶನ ಪಡೆದರು.

    ಕಳೆದ 26 ವರ್ಷಗಳಿಂದಲೂ ಪ್ರತಿ ಬಾರಿಯೂ ನೂತನ ವರ್ಷದಂದು ಗ್ರಾಮಸ್ಥರು ಸೇರಿ ಆರಾಧನೆ ನಡೆಸುತ್ತಾ ಬಂದಿದ್ದಾರೆ. ಈ ಅಂಗವಾಗಿ ಗ್ರಾಮದಲ್ಲಿ ಸೋಮಹಳ್ಳಿ ಶಿಲಾ ಮಠದ ಸಿದ್ದಮಲ್ಲಪ್ಪ ಸ್ವಾಮೀಜಿ ಹಾಗೂ ಬಲಚವಾಡಿಯ ಭಿಕ್ಷದ ಮಠದ ರಾಜೇಂದ್ರ ಸ್ವಾಮೀಜಿ ನೇತೃತ್ವದಲ್ಲಿ ಪೂಜಾ ಕಾರ್ಯ ನೆರವೇರಿತು. ಪೂರ್ಣಕುಂಭ, ನಂದಿಧ್ವಜ ಹಾಗೂ ಮಂಗಳವಾದ್ಯಗಳೊಂದಿಗೆ ಮಹದೇಶ್ವರರ ಉತ್ಸವ ಮೂರ್ತಿಯನ್ನು ಮೆರವಣಿಗೆ ಮಾಡಲಾಯಿತು.

    ದೇಗುಲದಲ್ಲಿ ಸ್ವಾಮಿಯ ಉದ್ಭವ ಲಿಂಗಕ್ಕೆ ಎಣ್ಣೆ ಮಜ್ಜನ ಮಾಡಿ ಪಂಚಾಮೃತ ಅಭಿಷೇಕ ನೆರವೇರಿಸಲಾಯಿತು. ಬಳಿಕ ಬೆಳ್ಳಿ ಕೊಳಗ ಧಾರಣೆ ಮಾಡಿ, ವಿವಿಧ ಪುಷ್ಪಗಳಿಂದ ಅಲಂಕರಿಸಿ ಮಹಾಮಂಗಳಾರತಿ ನಡೆಸಲಾಯಿತು. ಇದಕ್ಕೂ ಮೊದಲು ಗ್ರಾಮದ ಬಸವೇಶ್ವರ ದೇವಸ್ಥಾನದ ಆವರಣದಿಂದ ಮಹದೇಶ್ವರ ಹುಲಿವಾಹನ, ಅಶ್ವ ವಾಹನ ಉತ್ಸವ ಹಾಗೂ ಹಾಲರವಿ ಮೆರವಣಿಗೆ ನಡೆಸಲಾಯಿತು. ಗ್ರಾಮದ ಪ್ರತಿಯೊಂದು ಮನೆಯರು ಉತ್ಸವಕ್ಕೆ ಪೂಜೆ ಸಲ್ಲಿಸಿ ತಮ್ಮ ಭಕ್ತಿಭಾವ ಮೆರೆದರು. ದೇವಸ್ಥಾನಕ್ಕೆ ಆಗಮಿಸಿದ್ದ ಸಾವಿರಾರು ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts