More

    ಕೆಲವೇ ವರ್ಷಗಳಲ್ಲಿ ಜಲ ಶೂನ್ಯ ಖಚಿತ: ಬಿಎಂಕೆ ಆತಂಕ

    ಶಿವಮೊಗ್ಗ: ಈ ವರ್ಷ ನಮ್ಮ ದೇಶದಲ್ಲಿ ಮೊದಲ ಬಾರಿಗೆ ಅತಿ ಹೆಚ್ಚು ಉಷ್ಣಾಂಶ ದಾಖಲಾಗಿದೆ. ಮುಂದಿನ ವರ್ಷ ಇದಕ್ಕಿಂತ ಹೆಚ್ಚು ಉಷ್ಣಾಂಶ ದಾಖಲಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈ ಪರಿಸ್ಥಿತಿ ಎದುರಿಸಲು ನಾವು ಸನ್ನದ್ಧರಾಗಬೇಕೆಂದು ಪರಿಸರ ತಜ್ಞ ಪ್ರೊ.ಎಂ.ಬಿ.ಕುಮಾರಸ್ವಾಮಿ ಹೇಳಿದರು.

    ಮೈತ್ರಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಿರ್ಮಲ ತುಂಗಾ ಅಭಿಯಾನ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತಿತರ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ವಿಶ್ವ ಜಲ ದಿನಾಚರಣೆಯಲ್ಲಿ ಮಾತನಾಡಿದ ಅವರು, ಭಾರತ ನೀರಿನ ಅಭಾವದಿಂದ ಬಳಲುತ್ತಿರುವ ದೇಶವಾಗಿದೆ. ಅಡಕೆ, ಭತ್ತ, ಕಬ್ಬು, ಹತ್ತಿ ಬೆಳೆಗಳನ್ನು ಹೇರಳವಾಗಿ ಬೆಳೆಯಲಾಗುತ್ತಿದೆ. ಇದಕ್ಕೆ ಹೆಚ್ಚಿನ ನೀರು ಬಳಕೆಯಾಗುತ್ತಿದೆ ಎಂದು ಹೇಳಿದರು.
    ಪರಿಸರ ರಕ್ಷಣೆಗೆ ಸಂಬಂಧಿಸಿದ ಎಲ್ಲ ನಿಯಮಗಳನ್ನು ಗಾಳಿಗೆ ತೂರಿದ ಪರಿಣಾಮ ಬರಗಾಲ, ಹಿಮ ಕರಗುವಿಕೆ ಹೆಚ್ಚುತ್ತಿದೆ. ಭೂಮಿಯ ಮೇಲ್ಮೈ ನೀರು ಸಾಕಾಗುತ್ತಿಲ್ಲವೆಂದು ನಾವು ಅಂತರ್ಜಲವನ್ನು ಬಗೆಯುತ್ತಿದ್ದೇವೆ. ಇದೇ ಪದ್ಧತಿ ಮುಂದುವರಿದರೆ ಇನ್ನು ಕೆಲವೇ ವರ್ಷಗಳಲ್ಲಿ ನಾವು ಜಲ ಶೂನ್ಯರಾಗುವುದರಲ್ಲಿ ಯಾವ ಸಂದೇಹ ಇಲ್ಲ ಎಂದು ಎಚ್ಚರಿಸಿದರು.
    ಪ್ರಾಚಾರ್ಯೆ ಜೆ.ಶಾಲಿನಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಶಿಲ್ಪಾ, ಪ್ರಮುಖರಾದ ಪ್ರೊ.ಟಿ.ಎಸ್.ಹೂವಯ್ಯ ಗೌಡ, ದಿನೇಶ ಹೊಸನಗರ, ಡಾ.ಬಾಲಕೃಷ್ಣ ಹೆಗಡೆ, ಲೋಕೇಶ್ವರಪ್ಪ, ಬಾಲು ನಾಯ್ಡು ಮುಂತಾದವರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts