More

    ಇದು ಜಗತ್ತಿನ ಅತ್ಯಂತ ದುಬಾರಿ ಮಾಸ್ಕ್​: ಇದರ ಬೆಲೆ ಕೇಳಿದ್ರೆ ಶಾಕ್​ ಆಗೋದು ಖಂಡಿತ!

    ಜೆರುಸಲೇಮ್​: ಮಹಾಮಾರಿ ಕರೊನಾ ವೈರಸ್​ ಬಂದಾಗಿನಿಂದ ಫೇಸ್​ ಮಾಸ್ಕ್ ಜೀವನದ ಭಾಗವಾಗಿದೆ. ಇದರಲ್ಲೂ ಅನೇಕ ರೀತಿಯ ವಿಭಿನ್ನತೆಯನ್ನು ನಾವು ಕಂಡಿದ್ದೇವೆ. ಅದರಲ್ಲೂ ಕೆಲವರು ಚಿನ್ನ ಅಥವಾ ಡೈಮಂಡ್​ನಲ್ಲಿ ಮಾಸ್ಕ್ ಮಾಡಿಸಿಕೊಂಡು ತಮ್ಮ ಸ್ಟೇಟಸ್​ ಪ್ರದರ್ಶನ ಮಾಡಿದವರು ಇದ್ದಾರೆ.

    ಇದೀಗ ಇಸ್ರೇಲ್​ನ ಜ್ಯುವೆಲ್ಲರಿ ಕಂಪನಿಯೊಂದು ತಾನು ದುಬಾರಿ ಮಾಸ್ಕ್​ ಅನ್ನು ತಯಾರಿಸುವುದರಲ್ಲಿ ನಿರತರಾಗಿರುವುದಾಗಿ ಘೋಷಿಸಿದೆ. ಚಿನ್ನ ಮತ್ತು ವಜ್ರದಿಂದ ಸುತ್ತುವರಿದ ಈ ಮಾಸ್ಕ್​ ವಿಶ್ವದಲ್ಲೇ ದುಬಾರಿ ಮಾಸ್ಕ್ ಆಗಿರಲಿದೆ ಎಂದಿದ್ದಾರೆ. ​

    ಇನ್ನು ಈ ಮಾಸ್ಕ್​ ಅನ್ನು ಅಮೆರಿಕದಲ್ಲಿ ವಾಸವಿರುವ ಚೀನಾದ ಶಾಂಗೈ ನಗರದ ಅನಾಮಿಕ ಬಿಲಿಯನೇರ್​ಗಾಗಿ ತಯಾರಿಸಲಾಗುತ್ತಿದೆ. ಮಾಸ್ಕ್​ ತಯಾರಿಸಿ ಆತನಿಗೆ ನೀಡಲು ಡಿಸೆಂಬರ್​ 31ರ ಗಡವು ನೀಡಲಾಗಿದೆ. ​

    18 ಕ್ಯಾರೆಟ್ ವೈಟ್​​ ಗೋಲ್ಡ್ ಮಾಸ್ಕ್​ ಅನ್ನು 3,600 ಕಪ್ಪು ವಜ್ರದಿಂದ ಅಲಂಕರಿಸಲಾಗಿದೆ. ಅದಕ್ಕೆ ಉನ್ನತ ಮಟ್ಟದ ಎನ್​99 ಫಿಲ್ಟರ್​ ಅಳವಡಿಸಲಾಗಿದೆ. ಇದನ್ನು ಒರ್ನಾ ಆ್ಯಂಡ್​ ಇಸಾಕ್​ ಲೆವಿ ಎಂಬುವರು ಡಿಸೈನ್​ ಮಾಡಿದ್ದಾರೆ. ಇದರ ಬೆಲೆ 1.5 ಮಿಲಿಯನ್​ ಡಾಲರ್​. ಭಾರತೀಯ ಕರೆನ್ಸಿ ಪ್ರಕಾರ ಬರೋಬ್ಬರಿ 11 ಕೋಟಿ ರೂ. ಆಗಿದೆ.

    ಇನ್ನು ಈ ಬಗ್ಗೆ ಮಾತನಾಡಿರುವ ವಿನ್ಯಾಸಗಾರ ಲೆವಿ, ಬಹುಶಃ ಹಣ ಎಲ್ಲವನ್ನು ಕೊಳ್ಳಲು ಸಾಧ್ಯವಿಲ್ಲ. ಆದರೆ, ಈ ದುಬಾರಿ ಮಾಸ್ಕ್​ ಧರಿಸಿ ತಿರುಗಾಡುವುದರಿಂದ ಆತ ಎಲ್ಲರ ಗಮನ ಸೆಳೆಯುತ್ತಾನೆ. ಅದರಲ್ಲೇ ಆತ ಸಂತೋಷ ಕಾಣುತ್ತಾನೆ ಎಂದಿದ್ದಾರೆ.

    ದುಬಾರಿ ಮಾಸ್ಕ್​ ಸುಮಾರು 270 ಗ್ರಾಂ ತೂಗುತ್ತದೆ. ಇದು ಧರಿಸಲು ಆರಾಮದಾಯಕವಾಗಿರುವುದಿಲ್ಲ ಎನ್ನುತ್ತಾರೆ ತಯಾರಕರು. ಆದರೂ, ಸ್ಟೇಟಸ್​ ಪ್ರದರ್ಶನಕ್ಕಾಗಿ ಈ ಮಾಸ್ಕ್​ ಪಡೆಯಲಿದ್ದಾರೆ ಎಂದು ತಿಳಿದುಬಂದಿದೆ. (ಏಜೆನ್ಸೀಸ್​)

    ಉದ್ಯಮಿ ಮಗಳ ದಾರುಣ ಅಂತ್ಯ: ಐಶಾರಾಮಿ ಜೀವನವಿದ್ರೂ ಆತ್ಮಹತ್ಯೆಗೆ ಶರಣಾಗಿದ್ದೇಕೆ ಈ ಸುಂದರಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts