More

    ಹರಾಜಿಗಿದೆ ವಿಶ್ವದ ಅತಿ ದೊಡ್ಡ ಬಿಳಿ ವಜ್ರ ದಿ ರಾಕ್​​: 30ಮಿಲಿಯನ್​ ಡಾಲರ್​ಗೆ ಮಾರಾಟವಾಗುವ ನಿರೀಕ್ಷೆ

    ಜಿನೇವಾ: ವಿಶ್ವದ ಅತಿ ದೊಡ್ಡ ದಿ ರಾಕ್​​ ಹೆಸರಿನ ಬಿಳಿ ವಜ್ರವನ್ನು ಮುಂದಿನ ವಾರ ಹರಾಜಿಗಿಡಲು ಸಿದ್ಧತೆ ನಡೆಸಲಾಗಿದೆ. 200 ಕ್ಯಾರೆಟ್​ಗೂ ಅಧಿಕ ತೂಕವಿರುವ ಎರಡು ವಜ್ರದ ದೊಡ್ಡ ಹರಳುಗಳು ಇದರಲ್ಲಿದೆ.

    ಗಾಲ್ಫ್​​ ಬಾಲ್​ ಗಾತ್ರವಿರುವ 228.31 ಕ್ಯಾರೆಟ್​ನ ಈ ವಜ್ರವನ್ನು ಸದ್ಯ ಹರಾಜಿಗಿಡಲಾಗುವುದು. ಬರೋಬ್ಬರಿ 30ಮಿಲಿಯನ್​ ಡಾಲರ್​ ಹರಾಜಿಗಿಡಲಾಗಿದೆ ಎಂದು ಹರಾಜುದಾರರು ತಿಳಿಸಿದ್ದಾರೆ.

    ಜಿನೇವಾದ ಕ್ರಿಸ್ಟಿ ಆಭರಣ ಸಂಸ್ಥೆ ಬಿಳಿ ವಜ್ರದ ಹರಾಜಿಗಿಡಲು ಸದ್ಯ ಬೆಲೆಯನ್ನು ನಿಗದಿಪಡಿಸಿದೆ. ಇನ್ನು ಹರಾಜು ಪ್ರಕ್ರಿಯೆಯಲ್ಲಿ ಇನ್ನೂ ಹೆಚ್ಚು ಬೆಲೆಗೆ ಮಾರಾಟವಾಗುವ ಸಾಧ್ಯತೆ ಇದೆ ಎಂದು ಹೇಳಿದೆ.

    ಇದು ಸಂಪೂರ್ಣವಾಗಿ ಪಿಯರ್​ ಆಕಾರದಲ್ಲಿದ್ದು, ಹರಾಜಿನಲ್ಲಿ ಮಾರಾಟವಾಗುವ ಅಪರೂಪದ ರತ್ನಗಳಲ್ಲಿ ಒಂದಾಗಿದೆ.ದಕ್ಷಿಣ ಆಫ್ರಿಕಾದಲ್ಲಿ ಗಣಿಗಾರಿಕೆ ಮಾಡಲಾದ ದಿ ರಾಕ್​​ ವಜ್ರವು ಹಿಂದಿನ ಮಾಲೀಕರು ನೆಕ್ಲೇಸ್​ ರೂಪದಲ್ಲಿ ಧರಿಸುತ್ತಿದ್ದರು. 2017ರಲ್ಲಿ 163.41 ಕ್ಯಾರೆಟ್​ ಡೈಮಂಡ್​​ ಹರಳುಗಳಲ್ಲಿ ಹರಾಜಿಗಿಡಲಾಗಿತ್ತು.

    ಕ್ರಿಸ್ಟಿ ಸಂಸ್ಥೆಯು ಇದನ್ನು 205.07 ಕ್ಯಾರೆಟ್​​ ಗೆ ಅಭಿವೃದ್ಧಿಪಡಿಸಿದೆ. ಇದು 1918ರಲ್ಲಿ ಮೊದಲ ಬಾರಿಗೆ ಮಾರಾಟವಾಗಿತ್ತು. ಲಂಡನ್​ನಲ್ಲಿ ಇದನ್ನು ಹರಾಜಿಗಿಡಲಾಗಿತ್ತು. ಆಗ 10,000 ಪೌಂಡ್​ (12,350ಡಾಲರ್​)ಗೆ ಮಾರಾಟವಾಗಿತ್ತು.

    ಬಿಬಿಎಂಪಿ ವ್ಯಾಪ್ತಿಯ ಆರೋಗ್ಯ ಕೇಂದ್ರಗಳು ಮತ್ತೆ ಆರೋಗ್ಯ ಇಲಾಖೆಯ ಸುಪರ್ದಿಗೆ: ಸರ್ಕಾರದಿಂದ ಆದೇಶ

    ಕೊಡಗಿನಲ್ಲಿ ಭಾರೀ ಮಳೆ,ಬಿರುಗಾಳಿಗೆ ಹಾರಿಹೊದ ಮನೆಯ ಮೇಲ್ಛಾವಣಿ, ಕುಸಿದ ಮನೆ ಗೋಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts