More

    ಮಧ್ಯಾಹ್ನ ಬಿಟ್ಟುಹೋಗಿದ್ದನ್ನು ರಾತ್ರಿ ಕೊಟ್ಟು ಅನ್ನದ ಮಹತ್ವ ತಿಳಿಸಿದ ಅವ್ವ: ರೋಹಿಣಿ

    ನಾನಾಗ ಹೈಸ್ಕೂಲ್ ವಿದ್ಯಾರ್ಥಿನಿ. ಮೊದಲಿನಿಂದಲೂ ತಟ್ಟೆಯಲ್ಲಿ ಅನ್ನ ಹಾಕಿಸಿಕೊಂಡು ಬಿಡುವ ಅಭ್ಯಾಸವಿತ್ತು. ಅವ್ವ ಇದರಿಂದ ಬೇಸತ್ತಿದ್ದಳು. ಒಮ್ಮೆ ನಮ್ಮ ಆಪ್ತರಾಗಿದ್ದ ಮಾಜಿ ಸಚಿವೆ ಲೀಲಾದೇವಿ ಪ್ರಸಾದ್ ನಮ್ಮನೆಗೆ ಊಟಕ್ಕೆ ಬಂದಿದ್ದರು. ನಾನೂ ಕುಳಿತಿದ್ದೆ. ರೊಟ್ಟಿ, ಮೆಂತೆಪಲ್ಯ, ಎಣ್ಣೆಗಾಯಿ ಬದನೆಕಾಯಿ, ಜುಣಕದ ವಡೆ, ಮೊಸರನ್ನ ಮಾಡಿದ್ದರು. ತಟ್ಟೆಯಲ್ಲಿ ಮೊಸರನ್ನ, ಪಲ್ಯ ಬಿಟ್ಟೆ. ಅವ್ವ ‘ಬಿಡಬಾರದು, ಅನ್ನದ ಮೇಲೆ ಸೊಕ್ಕ ಮಾಡಿದರೆ ಮುಂದೆ ಅನ್ನ ಕಾಣಲ್ಲ’ ಅಂದರು. ಅಲ್ಲಿಯೇ ಇದ್ದ ಲೀಲಾದೇವಿ ಪ್ರಸಾದ್ ನನ್ನ ತಾಯಿಗೆ ‘ಅವಳ ತಟ್ಟೆ ಮುಚ್ಚಿಡು, ರಾತ್ರಿಯ ಊಟಕ್ಕೆ ಅದನ್ನೇ ಕೊಡು’ ಅಂದರು. ನನ್ನವ್ವ ಚಾಚೂ ತಪ್ಪದೆ ಅದನ್ನು ಪಾಲಿಸಬೇಕೆ?! ಮಧ್ಯಾಹ್ನ ಬಿಟ್ಟುಹೋಗಿದ್ದನ್ನು ರಾತ್ರಿ ಕೊಟ್ಟಾಗ ತಣ್ಣಗಾಗಿದ್ದನ್ನೇ ವಿಧಿಯಿಲ್ಲದೆ ತಿಂದೆ. ನನಗೇ ಅರಿವಿಲ್ಲದಂತೆ ಕಣ್ಣೀರು ಹರಿದಿತ್ತು. ಅದೇ ನನಗೊಂದು ಪಾಠವಾಯಿತು. ಮುಂದೆಂದೂ ನಾನು ಹಾಕಿಸಿಕೊಂಡ ತಿಂಡಿ ತಿನಿಸು ವ್ಯರ್ಥ ಮಾಡಿಲ್ಲ.

    | ರೋಹಿಣಿ ಯಾದವಾಡ ಶಿಕ್ಷಕಿ, ಅಥಣಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts