More

    ಕಿಡ್ನಿಗೆ ‘ನೋವು’ ನೀಡುವ ಪೇನ್ ಕಿಲ್ಲರ್‌ಗಳು

    ಪಂಕಜ ಕೆ.ಎಂ. ಬೆಂಗಳೂರು

    ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳು, ತಂತ್ರಜ್ಞಾನ ಪ್ರಗತಿಯ ಲ ಜನಸಾಮಾನ್ಯರ ಕೈಗೂ ಎಟುಕುವಂತಿರಬೇಕು. ಈ ಧ್ಯೇಯದೊಂದಿಗೆ ಈ ಬಾರಿಯ ವಿಶ್ವ ಕಿಡ್ನಿ ದಿನವನ್ನು ಆಚರಿಸಲಾಗುತ್ತಿದೆ. ‘ಎಲ್ಲರಿಗೂ ಮೂತ್ರಪಿಂಡದ ಆರೋಗ್ಯ’- ಮುಂದುವರಿದ ಆರೈಕೆ ಮತ್ತು ಸೂಕ್ತ ಔಷಧೋಪಚಾರಕ್ಕೆ ಎಲ್ಲರಿಗೂ ಸಮಾನ ಅವಕಾಶ ಎಂಬುದು ಈ ವರ್ಷದ ಘೋಷವಾಕ್ಯವಾಗಿದೆ.

    ಮಧುಮೇಹ, ಅಧಿಕ ರಕ್ತದ ಒತ್ತಡ ಜತೆಗೆ ವೈದ್ಯರ ಸಲಹೆ ಪಡೆಯದೆ ನೋವು ನಿವಾರಕ ಮಾತ್ರೆಗಳನ್ನು ಸೇವನೆ ಮಾಡುವುದು ಮೂತ್ರಪಿಂಡ ಕಾಯಿಲೆಗೆ ಪ್ರಮುಖ ಕಾರಣವಾಗಿದೆ. ಮೂತ್ರಪಿಂಡ ಕಾಯಿಲೆ ಬಂದ ಮೇಲೆ ಚಿಕಿತ್ಸೆ ಪಡೆಯುವುದಕ್ಕಿಂತ ಅದರ ನಿಯಂತ್ರಣಕ್ಕೆ ಹೆಚ್ಚು ಒತ್ತು ನೀಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ರೋಗಿಗಳಿಗೆ ಔಷಧ ನೀಡುವಾಗ ವೈದ್ಯರು ಸಹ ಎಚ್ಚರಿಕೆ ವಹಿಸಬೇಕಿದೆ. ಅಂದರೆ ಕಿಡ್ನಿ ಆರೋಗ್ಯಕ್ಕೆ ಸಮಸ್ಯೆಯಾಗದ ಪ್ರಮಾಣದಲ್ಲಿ ಔಷಧ ನೀಡಬೇಕಾಗುತ್ತದೆ. ಅದೇ ರೀತಿಯಲ್ಲಿ ರೋಗಿಗಳು ಸಹ ವೈದ್ಯರ ಸಲಹೆ ಇಲ್ಲದೆ ನೋವು ನಿವಾರಕ ಸೇರಿ ಯಾವುದೇ ಔಷಧ- ಮಾತ್ರೆಗಳನ್ನು ಸೇವಿಸದಂತೆ ಜಾಗೃತಿ ಮೂಡಿಸುವುದು ಈ ದಿನದ ಉದ್ದೇಶವಾಗಿದೆ.

    ವಯಸ್ಸಾದವರು, ಮಧುಮೇಹಿಗಳು, ಅಧಿಕ ರಕ್ತದ ಒತ್ತಡ ಹೊಂದಿರುವವರು, ಸೋಂಕುಗಳಿಂದ ಬಳಲುತ್ತಿರುವವರು, ಗರ್ಭಿಣಿಯರು, ರೋಗನಿರೋಧಕ ಶಕ್ತಿ ಕಡಿಮೆ ಇರುವವರು, ವಾಂತಿಭೇದಿ ಆಗುತ್ತಿದ್ದರೆ ಅಂಥವರು ನೋವು ನಿವಾರಕ ಮಾತ್ರೆಗಳನ್ನು ಸೇವಿಸಬಾರದು. ಸೇವಿಸಿದಲ್ಲಿ ಇವು ಕಿಡ್ನಿ ಸೇರಿದಂತೆ ಆರೋಗ್ಯದ ಮೇಲೆ ಅಡ್ಡಪರಿಣಾಮಗಳನ್ನು ಉಂಟುಮಾಡುತ್ತವೆ ಎನ್ನುತ್ತಾರೆ ನೆಫ್ರೋ ಯುರಾಲಜಿ ಸಂಸ್ಥೆಯ ನೆಫ್ರೋಲಜಿ ವಿಭಾಗದ ಮುಖ್ಯಸ್ಥ ಡಾ.ಸಿ.ಜಿ. ಶ್ರೀಧರ್.

    ಸೂಕ್ತ ಚಿಕಿತ್ಸೆಗೆ ಇರುವ ಅಡೆತಡೆಗಳು:ನಮ್ಮಲ್ಲಿ ದೀರ್ಘಕಾಲದ ಮೂತ್ರಪಿಂಡ ವೈಲ್ಯದ ಬಗ್ಗೆ ಜನರಲ್ಲಿರುವ ಅರಿವಿನ ಕೊರತೆ, ನೂತನ ಚಿಕಿತ್ಸಾ ಪದ್ಧತಿಗಳ ಬಗ್ಗೆ ಮಾಹಿತಿ ಮತ್ತು ಜ್ಞಾನ ಇಲ್ಲದಿರುವುದು, ಮೂತ್ರಪಿಂಡ ತಜ್ಞರ ಕೊರತೆ, ದುಬಾರಿ ಚಿಕಿತ್ಸಾ ವೆಚ್ಚ, ಸಾರ್ವತ್ರಿಕ ಆರೋಗ್ಯ ಸೇವೆಗಳ ಕೊರತೆ, ಆರಂಭದಲ್ಲೇ ಕಾಯಿಲೆ ಪತ್ತೆ ಮಾಡದಿರುವ ಕಾರಣಗಳಿಂದ ಮೂತ್ರಪಿಂಡ ಸಮಸ್ಯೆಯ ಪ್ರಕರಣಗಳು ಹೆಚ್ಚುತ್ತಿವೆ. ಹೀಗಾಗಿ ಜನರು ಈ ಬಗ್ಗೆ ಸ್ವಯಂ ಜಾಗೃತರಾಗಿ ಪ್ರತಿ ಮೂರು ತಿಂಗಳಿಗೊಮ್ಮೆ ಕೆಲ ಸಾಮಾನ್ಯ ಹಾಗೂ ಸರಳ ಪರೀಕ್ಷೆಗಳ ಮೂಲಕ ಕಿಡ್ನಿ ಆರೋಗ್ಯದ ಮಾಹಿತಿ ಪಡೆದು ಆರಂಭದಲ್ಲೇ ಸಮಸ್ಯೆ ಬಗ್ಗೆ ತಿಳಿದರೆ ಸೂಕ್ತ ಚಿಕಿತ್ಸೆಯೊಂದಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ ಎನ್ನುತ್ತಾರೆ ತಜ್ಞರು.

    ಸರಳ ಪರೀಕ್ಷೆಗಳು: ಕಾಲಕಾಲಕ್ಕೆ ಮೂತ್ರದಲ್ಲಿ ಪ್ರೋಟಿನ್ ಮತ್ತು ಅಲ್ಬುಮಿನ್ ಅಂಶ ಎಷ್ಟು ಪ್ರಮಾಣದಲ್ಲಿ ಹೊರ ಹೋಗುತ್ತದೆ ಎಂಬುದನ್ನು ಪರೀಕ್ಷೆ ಮಾಡಿಸಬೇಕು. ವಯಸ್ಕರಲ್ಲಿ ದಿನಕ್ಕೆ 150 ಮಿ.ಗ್ರಾಂ. ಪ್ರೋಟಿನ್ ಮೂತ್ರ ವಿಸರ್ಜನೆ ಮೂಲಕ ಹೊರ ಹೋಗುತ್ತದೆ. ಇದಕ್ಕಿಂತ ಹೆಚ್ಚು ಹೋಗಬಾರದು. ಇದರೊಂದಿಗೆ ಅಲ್ಬುಮಿನ್ 30 ಮಿ.ಗ್ರಾಂ.ಗಿಂತ ಹೆಚ್ಚು ಹೊರಹೋಗಬಾರದು. ಇದು ಹೆಚ್ಚಿನ ಪ್ರಮಾಣದಲ್ಲಿದ್ದರೆ ಕಿಡ್ನಿ ಮತ್ತು ಹೃದಯಕ್ಕೆ ಸಮಸ್ಯೆ ಉಂಟು ಮಾಡುತ್ತದೆ. ಇದನ್ನು ಔಷಧದ ಮೂಲಕ ಸರಿಪಡಿಸಬಹುದು. ಜತೆಗೆ ಮಧುಮೇಹ, ರಕ್ತದ ಒತ್ತಡ ಪರೀಕ್ಷೆ ಮಾಡಿಸಿಕೊಳ್ಳಬೇಕು. ಇಷ್ಟು ಮಾಡಿದರೆ ಬಹುತೇಕ ಸಮಸ್ಯೆ ತಡೆಯಬಹುದಾಗಿದೆ.

    ಕಾರ್ಯವಿಧಾನ: ಎಲ್ಲರಲ್ಲೂ ಎರಡು ಮೂತ್ರಪಿಂಡಗಳಿರುತ್ತವೆ. ಇದರಲ್ಲಿ ಆರೋಗ್ಯಕರವಾದ ಒಂದು ಮೂತ್ರಪಿಂಡವಿದ್ದರೂ ಮನುಷ್ಯ ಉತ್ತಮ ಜೀವನ ನಡೆಸಬಹುದು. ಈ ಮೂತ್ರಪಿಂಡಗಳು ದೇಹದಲ್ಲಿನ ಅನಗತ್ಯ ಹಾಗೂ ಹೆಚ್ಚುವರಿ ತ್ಯಾಜ್ಯವನ್ನು ಹೊರಹಾಕಿ ಸ್ವಚ್ಛಗೊಳಿಸುತ್ತದೆ. ವಿಟಮಿನ್ ಡಿ ಉತ್ಪಾದಿಸಿ ಮೂಳೆಗೆ ಶಕ್ತಿ ತುಂಬುತ್ತದೆ, ಕೆಂಪು ರಕ್ತ ಕಣಗಳನ್ನು ಅಭಿವೃದ್ಧಿಪಡಿಸಿ ದೇಹದಲ್ಲಿ ರಕ್ತದ ಮಟ್ಟವನ್ನು ಹೆಚ್ಚಿಸುತ್ತದೆ. ರೆಮಿನ್ ಎಂಬ ಅಂಶವು ರಕ್ತದ ಒತ್ತಡವನ್ನು ಹಾಗೂ ನೀರು, ಲವಣ ಮತ್ತು ಆಮ್ಲ ಅಂಶವನ್ನು ನಿಯಂತ್ರಿಸುತ್ತದೆ.

    ಸಮಸ್ಯೆಗಳಿಗೆ ಕಾರಣಗಳು: ಮಧುಮೇಹ, ಕಾಮಾಲೆ (ಹೆಪಟೈಟಿಸ್), ಅನಿಯಂತ್ರಿತ ರಕ್ತದ ಒತ್ತಡ, ಸೋಂಕುಗಳು, ಧೂಮಪಾನ, ಮದ್ಯಪಾನ, ಅಸಮಪರ್ಕ ಆಹಾರ ಸೇವನೆ, ಕಡಿಮೆ ನೀರು ಕುಡಿಯುವುದು, ಕಿಡ್ನಿಯಲ್ಲಿ ಕಲ್ಲು, ಅನುವಂಶೀಯ ಕಾಯಿಲೆಗಳು, ಹುಟ್ಟಿನಿಂದ ಬರುವ ಕಾಯಿಲೆಗಳು, ಮೂತ್ರನಾಳ ಕಟ್ಟಿಕೊಳ್ಳುವುದು, ತೀವ್ರ ವಾಂತಿ ಮತ್ತು ಬೇಧಿಯಾದ ಸಂದರ್ಭದಲ್ಲಿ ಮೂತ್ರಪಿಂಡದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

    ಕಾಯಿಲೆಯ ಲಕ್ಷಣಗಳು
    * ತೀವ್ರವಾದ ತಲೆನೋವು, ತಲೆ ಸುತ್ತುವಿಕೆ
    * ಮೂತ್ರದಲ್ಲಿ ಗಾಢವಾದ ಬಣ್ಣ
    * ಪದೇಪದೆ ಮೂತ್ರ ವಿಸರ್ಜನೆ ಮಾಡುವುದು
    * ಕಣ್ಣಿನ ಸುತ್ತ ಊತ ಕಾಣಿಸಿಕೊಳ್ಳುವುದು
    * ಹಸಿವಾಗದಿರುವುದು ಮತ್ತು ಕಿರಿಕಿರಿ
    * ಮೊಣಕಾಲು ಮತ್ತು ಪಾದಗಳಲ್ಲಿ ಊತ
    * ವಾಕರಿಕೆ ಅಥವಾ ವಾಂತಿ ಆಗುವುದು
    * ಮೂತ್ರ ವಿಸರ್ಜನೆ ವೇಳೆ ಉರಿಯುವುದು
    * ಮೂತ್ರದಲ್ಲಿ ನೊರೆ ಹಾಗೂ ರಕ್ತ ಬರುವುದು
    * ತೂಕ ಕಡಿಮೆ ಆಗುವುದು, ಮೈಯಲ್ಲಿ ತುರಿಕೆ

    ಕಿಡ್ನಿ ಕಸಿಯ ಅಗತ್ಯತೆ? ಕಿಡ್ನಿ ಸಂಪೂರ್ಣ ಹಾಳಾಗಿ ಡಯಾಲಿಸಿಸ್‌ಗೆ ಒಳಪಡಿಸಲಾಗದ ಸಂದರ್ಭದಲ್ಲಿ ಕಿಡ್ನಿ ಕಸಿ ಮಾಡಿಸುವುದು ಅನಿವಾರ್ಯ ಹಾಗೂ ಅಂತಿಮ ಪರಿಹಾರ. ಒಂದು ಮೂತ್ರಪಿಂಡ ಆರೋಗ್ಯವಾಗಿದ್ದರೆ ಸಮಸ್ಯೆ ಇಲ್ಲ. ಎರಡೂ ಹಾಳಾಗಿದ್ದರೆ ದಾನಿಗಳಿಂದ (ರಕ್ತಸಂಬಂಧಿ ಅಥವಾ ಮಿದುಳು ನಿಷ್ಕ್ರಿಯಗೊಂಡ ವ್ಯಕ್ತಿ) ಪಡೆದ ಮೂತ್ರಪಿಂಡವನ್ನು ಕಸಿ ಮಾಡಲಾಗುತ್ತದೆ. ವೈದ್ಯಕೀಯ ಕ್ಷೇತ್ರದಲ್ಲಿ ಇಂದು ವೈಜ್ಞಾನಿಕ ಹಾಗೂ ತಂತ್ರಜ್ಞಾನವಾಗಿ ಬಹಳಷ್ಟು ಬೆಳವಣಿಗೆ ಹೊಂದಿರುವುದರಿಂದ ಬೇರೆಬೇರೆ ರಕ್ತದ ಗುಂಪು ಹೊಂದಿದ್ದರೂ ಮೂತ್ರಪಿಂಡ ಕಸಿ ಮಾಡಬಹುದಾಗಿದೆ.

    ಮೂತ್ರಪಿಂಡ ದಿನದ ಇತಿಹಾಸ: ‘ನಮ್ಮ ಮೂತ್ರಪಿಂಡಗಳು ಸರಿಯಾಗಿವೆಯೇ’? ಎಂಬ ೋಷಣೆಯೊಂದಿಗೆ 2006ರಲ್ಲಿ ಇಂಟರ್‌ನ್ಯಾಷನಲ್ ಸೊಸೈಟಿ ಆ್ ನೆ್ರೆೆಲಜಿ (ಐಎಸ್‌ಎನ್) ಮತ್ತು ಇಂಟನ್ಯಾಷನಲ್ ೆಡರೇಷನ್ ಆ್ ಕಿಡ್ನಿ ೌಂಡೇಷನ್ ಸಹಯೋಗದಲ್ಲಿ ವಿಶ್ವ ಮೂತ್ರಪಿಂಡ ದಿನ ಆಚರಿಸಲಾಯಿತು. ಕಿಡ್ನಿ ಆರೋಗ್ಯ ಹಾಗೂ ಸಂಬಂಧಿತ ಸಮಸ್ಯೆಗಳ ಬಗ್ಗೆ ಜನರಿಗೆ ಮಾಹಿತಿ ನೀಡುವ ಉದ್ದೆಶದೊಂದಿಗೆ 66 ದೇಶಗಳಲ್ಲಿ ಒಟ್ಟಿಗೆ ಈ ದಿನ ಆಚರಿಸಲಾಯಿತು. ಇದೀಗ 80ಕ್ಕೂ ಅಧಿಕ ದೇಶಗಳಲ್ಲಿ ವಿಶ್ವ ಮೂತ್ರಪಿಂಡ ದಿನ ಆಚರಣೆ ಮೂಲಕ ಕಿಡ್ನಿ ಆರೋಗ್ಯ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts