More

    ವಿಶ್ವ ಸಾಂಸ್ಕೃತಿಕ ಉತ್ಸವ: ಎರಡನೇ ದಿನ 180 ದೇಶಗಳ ಜನರಿಂದ ಶಾಂತಿಗಾಗಿ ಪ್ರಾರ್ಥನೆ

    ಬೆಂಗಳೂರು: ಗುರುದೇವ ಶ್ರೀ ಶ್ರೀ ರವಿಶಂಕರ ಅವರ ಸಮ್ಮುಖದಲ್ಲಿ ವಾಷಿಂಗ್ಟನ್ ಡಿಸಿಯ ನ್ಯಾಷನಲ್ ಮಾಲ್​ನಲ್ಲಿ ಹಮ್ಮಿಕೊಳ್ಳಲಾಗಿರುವ ವಿಶ್ವ ಸಾಂಸ್ಕೃತಿಕ ಉತ್ಸವ ಎರಡನೇ ದಿನವೂ ಅದ್ಧೂರಿಯಾಗಿ ನಡೆಯಿತು. ಎರಡನೆಯ ದಿನವಾದ ಇಂದು 180 ದೇಶಗಳಿಂದ ಬಂದಿದ್ದ ಪ್ರತಿನಿಧಿಗಳು ಯೂಕ್ರೇನಿನ ಶಾಂತಿಗಾಗಿ ಗುರುದೇವರ ಸಮ್ಮುಖದಲ್ಲಿ ಪ್ರಾರ್ಥಿಸಿಕೊಂಡರು.

    180 ದೇಶಗಳಿಂದ ಬಂದಿದ್ದ ಜನರು ಒಬ್ಬರನ್ನೊಬ್ಬರು ಕಲೆತು, ನೃತ್ಯ, ಸಂಗೀತ ಮತ್ತು ಆಹಾರದೊಡನೆ ಜಗತ್ತಿನ ವಿವಿಧ ಸಂಸ್ಕೃತಿಗಳನ್ನು ಸಂಭ್ರಮಿಸಿದರು. ಬೃಹತ್ ಪ್ರಮಾಣದಲ್ಲಿ ನಡೆದ ಈ ಉತ್ಸವದಲ್ಲಿ ನೂರಾರು ಬಾವುಟಗಳು ಹಾರಾಟ ನಡೆಸಿದ್ದು, ಮತ್ತೊಮ್ಮೆ ಏಕತೆಯ ಭಾವ ಎಲ್ಲೆಡೆ ರಾರಾಜಿಸಿತು. ವಿಶ್ವವನ್ನು ಒಗ್ಗೂಡಿಸಲು ಹೊರಟಿರುವ ಭಾರತದ ಸಂಕಲ್ಪ ಶಕ್ತಿಯನ್ನು ಎತ್ತಿ ತೋರಿಸುತ್ತಿತ್ತು.

    ಎರಡನೆಯ ದಿನವೂ ವಾಷಿಂಗ್ಟನ್ ಡಿಸಿ ನ್ಯಾಷನಲ್ ಮಾಲ್​ನ ಐತಿಹಾಸಿಕ ಲಿಂಕನ್ ಸ್ಮಾರಕದ ಎದುರು ಸಾವಿರಾರು ಜನ ತಮ್ಮ ತಮ್ಮ ಮ್ಯಾಟ್ ಹಾಸಿ ಯೋಗ ಮಾಡುವುದರೊಂದಿಗೆ ಈ ಉತ್ಸವ ಪ್ರಾರಂಭವಾಯಿತು. ಅಲ್ಲಿ ನೆರೆದಿದ್ದ ಎಲ್ಲರಿಗೂ, ಗುರುದೇವ ಶ್ರೀ ಶ್ರೀ ರವಿಶಂಕರರು ಒಂದು ಅನುಪಮವಾದ ಉಸಿರಾಟ, ಯೋಗ ಮತ್ತು ಧ್ಯಾನದ ಪ್ರಕ್ರಿಯೆಗಳನ್ನು ಹೇಳಿಕೊಟ್ಟರು.

    ವಿಶ್ವ ಸಾಂಸ್ಕೃತಿಕ ಉತ್ಸವ: ಎರಡನೇ ದಿನ 180 ದೇಶಗಳ ಜನರಿಂದ ಶಾಂತಿಗಾಗಿ ಪ್ರಾರ್ಥನೆ

    ಸಂಜೆಯ ವೇಳೆಗೆ ಮನಸೂರೆಗೊಳ್ಳುವಂತಹ ಪ್ರದರ್ಶನಗಳು ಜರುಗಿದವು. ಗಣ್ಯರ ಸ್ಫೂರ್ತಿದಾಯಕವಾದ ಭಾಷಣಗಳು, ಮನುಷ್ಯರ ಬಾಂಧವ್ಯಗಳನ್ನು ಇನ್ನಷ್ಟು ಬೆಸೆಯುವಂತಿತ್ತು. ಭಾರತದ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮಾತನಾಡಿ, ಪರ್ವತ ಶ್ರೇಣಿಗಳು, ಕರಾವಳಿ ಬಯಲು, ನದಿಯ ತೀರ, ಮರುಭೂಮಿ ಪ್ರದೇಶ, ಹೀಗೆ ಪ್ರಪಂಚದ ಮೂಲೆಮೂಲೆಗಳಿಂದ ಬಂದು ಜನರು ಇಲ್ಲಿ ಸೇರಿದ್ದಾರೆ. ಗುರುದೇವರು ಇಲ್ಲಿ ಒಂದು ಪುಟ್ಟ ಪ್ರಪಂಚವನ್ನೇ ನಿರ್ಮಿಸಿದ್ದಾರೆ ಎಂದು ಹೇಳಿದರು.

    ಅನೇಕ ಕಲಾರೂಪಗಳ ಪ್ರದರ್ಶನಗಳು ನಡೆದವು, ಅವುಗಳಲ್ಲಿ ಪಾರಂಪರಿಕ ಯೂಕ್ರೇನ್​​ನ ಹಾಡಿನ ಪ್ರದರ್ಶನ ಕೂಡ ಒಂದು. ಇದನ್ನು ಯೂಕ್ರೇನ್​​ನ ಖ್ಯಾತ ಸಂಗೀತಗಾರ ಒಲೇನ ಅಸ್ತಶೇವ ನಡೆಸಿಕೊಟ್ಟರು. ಯುದ್ಧದ ಕಾರಣದಿಂದಾಗಿ ಇವರು ತಮ್ಮ ಮಾತೃಭೂಮಿಯನ್ನು ತೊರೆದಿದ್ದರು. ಮನ ಕಲುಕುವ ಈ ಹಾಡಿನ ಪ್ರದರ್ಶನದ ನಂತರ, ಜನರೆಲ್ಲರೂ ಸೇರಿ ಯೂಕ್ರೇನಿನ ಶಾಂತಿಗಾಗಿ ಗುರುದೇವರ ಸಮ್ಮುಖದಲ್ಲಿ ಪ್ರಾರ್ಥಿಸಿದರು.

    ಎಲ್ಲರನ್ನೂ ಎಚ್ಚರಿಸುವಂತೆ ಬಿರುಸಿನ ಭಾಷಣ ಮಾಡಿದ ರೆವರೆಂಡ್ ಜೆರಾಲ್ಡ್ ದುರ್ಲೆ, ಆರ್ಟ್ ಆಫ್ ಲಿವಿಂಗ್ ಹೆಸರನ್ನು ಆರ್ಟ್ ಆಫ್ ಪ್ರೂಫ್ ಎಂದು ಬದಲಿಸಬೇಕು. ಏಕೆಂದರೆ, ನಾವು ಎಲ್ಲರನ್ನೂ ಪ್ರೀತಿಸಬಹುದು, ನಾವು ಎಲ್ಲರೊಂದಿಗೆ ಹಂಚಿಕೊಳ್ಳಬಹುದು ಎಂದು ಗುರುದೇವರು ಪ್ರೂವ್ ಮಾಡಿದ್ದಾರೆ ಎಂದರು.

    ವಿಶ್ವ ಸಾಂಸ್ಕೃತಿಕ ಉತ್ಸವ: ಎರಡನೇ ದಿನ 180 ದೇಶಗಳ ಜನರಿಂದ ಶಾಂತಿಗಾಗಿ ಪ್ರಾರ್ಥನೆ

    ಅಮೆರಿಕದ ವೆಂಚರ್ ಕ್ಯಾಪಿಟಲ್ ಹೂಡಿಕೆದಾರ ಟಿಮ್ ಡ್ರೇಪರ್ ಮಾತನಾಡಿ, ಅಮೆರಿಕನ್ನರಾದ ನಾವು ಇತರ ಜನರನ್ನು ಅನ್ಯಲೋಕದವರಂತೆ ಕಂಡಿದ್ದೇವೆ. ಅದು ಒಳ್ಳೆಯ ಬೆಳವಣಿಗೆ ಆಗಿರಲಿಲ್ಲ. ಆದರೆ ಈಗ ಬದಲಾವಣೆ ಆರಂಭವಾಗಿದೆ ಮತ್ತು ಗುರುದೇವರ ನಾಯಕತ್ವದಲ್ಲಿ ಜನರನ್ನು ಒಂದಾಗಿ ತರುತ್ತಿದ್ದೇವೆ. ಈಗ ಭೂಮಿಯ ಮೇಲಿರುವ ಯಾರೂ ಏಲಿಯನ್ನರಲ್ಲ. ಆದರೆ ಈ ಭೂಮಿಯ ಮೇಲೆ ಯಾರಾದರೂ ಏಲಿಯನ್ನರು ಇದ್ದು, ನಿಮ್ಮ ನಾಯಕರ ಬಳಿಗೆ ಕರೆದೊಯ್ಯಿರಿ ಎಂದರೆ, ನಾನು ಅವರನ್ನು ಗುರುದೇವ ಶ್ರೀ ಶ್ರೀ ರವಿಶಂಕರರ ಬಳಿಗೆ ಕರೆದೊಯ್ಯುತ್ತೇನೆ ಎಂದರು.

    ಮಾರಿಷಿಯಸ್ ಅಧ್ಯಕ್ಷ ಪೃಥ್ವಿರಾಜ್​ಸಿಂಗ್ ರೂಪನ್, ಭಾರತದ ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ, ಜಪಾನಿನ ಮಾಜಿ ಪ್ರಧಾನಮಂತ್ರಿ ದಿವಂಗತ ಶಿಂಜೊ ಅಬೆಯವರ ಪತ್ನಿ ಅಕೀ ಅಬೆ, ಯುಎಸ್ ಸರ್ಜನ್ ಜನೆರಲ್ ಡಾ.ವಿವೇಕ್ ಮೂರ್ತಿ ಇನ್ನಿತರ ಗಣ್ಯರು ಎರಡನೇ ದಿನ ಉಪಸ್ಥಿತರಾಗಿದ್ದರು.

    ಎರಡನೆಯ ಸಾಂಸ್ಕೃತಿಕ ಮಹೋತ್ಸವದಂದು, 10,000 ಜನರಿಂದ ಗರ್ಭನೃತ್ಯ ನಡೆಯಿತು ಮತ್ತು ಅವರೊಡನೆ ಗ್ರಾಮಿ ಪ್ರಶಸ್ತಿ ವಿಜೇತ ಭಾರತೀಯ ಅಮೆರಿಕನ್ನರಾದ ಫಾಲು ಶಾ ಹಾಡಿದರು. 200 ಜನರನ್ನೊಳಗೊಂಡ ಭಾಂಗ್ರ ನೃತ್ಯ, ಐರಿಶ್​ನ ಸ್ಟೆಪ್ ನೃತ್ಯ, ಅಫ್ಘಾನ್​ನ ಸುಮಧುರ ಸಂಗೀತ, 1000 ಚೀನಿ ಅಮೆರಿಕನ್ನರಿಂದ ವೈಭವಯುತ ನೃತ್ಯ ಹಾಗೂ ಗಾಯನ, ಜತೆಗೆ ಕುಂಗ್ ಫೂ ಪ್ರದರ್ಶನವೂ ನಡೆಯಿತು.

    ಭವ್ಯವಾದ ಡ್ರಾಗನ್ ಮತ್ತು ಸಿಂಹಗಳು ಕಲಾತ್ಮಕ ಕಲ್ಪನೆಯನ್ನು ಜೀವಂತವಾಗಿಸಿದವು. ಇಂಡೊನೇಷ್ಯಾ, ಬ್ರೆಜಿಲ್, ಬೊಲಿವಿಯ ಮತ್ತು ಲ್ಯಾಟಿನ್ ಅಮೆರಿಕದ ದೇಶಗಳ ಅವಿಸ್ಮರಣೀಯವಾದ ನೃತ್ಯಗಳ ಪ್ರಸ್ತುತಿ ನಡೆಯಿತು. ಖ್ಯಾತ ಕುರ್ಟಿಸ್ ಬ್ಲೋ ಅವರ ನೇತೃತ್ವದಲ್ಲಿ ಹಿಪ್ ಹಾಪ್ ಮತ್ತು ಬ್ರೇಕ್ ಡಾನ್ಸ್ ಪ್ರದರ್ಶನ. 1200 ಹಾಡುಗಾರರ ಗಾಸ್ಪೆಲ್ ಕಾಯರ್, ಪಾಕಿಸ್ತಾನದ ಮನಮೋಹಕ ಪ್ರದರ್ಶನವು ನಡೆಯಿತು.

    ವಿಶ್ವ ಸಾಂಸ್ಕೃತಿಕ ಉತ್ಸವ: ಎರಡನೇ ದಿನ 180 ದೇಶಗಳ ಜನರಿಂದ ಶಾಂತಿಗಾಗಿ ಪ್ರಾರ್ಥನೆ

    ಸರ್ಜನ್ ಜನರಲ್ ಡಾ. ವಿವೇಕ್ ಮೂರ್ತಿ ಮಾತನಾಡಿ, ಇಂಥ ಉತ್ಸವಗಳು ಬಹಳ ಮುಖ್ಯ. ನಾವೆಲ್ಲರೂ ಪರಸ್ಪರ ಹೊಂದಿರುವ ಸಂಬಂಧ ಎಷ್ಟು ಅವಶ್ಯಕವಾದದ್ದು ಎಂದು ಇದು ತೋರಿಸುತ್ತದೆ. ಇಂದಿನ ದಿನಗಳಲ್ಲಿ ಏಕಾಂಗಿತನ ಹಾಗೂ ಪ್ರತ್ಯೇಕತೆಯ ಭಾವ ವಿಪರೀತ ಹೆಚ್ಚಾಗಿದ್ದು, ಈ ಸಂಬಂಧವನ್ನು ನೆನಪಿಸಿಕೊಳ್ಳುವುದು ಅವಶ್ಯಕವಾಗಿದೆ ಎಂದರು.

    ಓ.. ಮತ್ತೆ ಸದ್ದು ಮಾಡುತ್ತಿರುವ ‘ಕಾಂತಾರ’; ವರ್ಷದ ಬಳಿಕವೂ ನೆನಪಿಸಿಕೊಳ್ಳುತ್ತಿರುವ ಜನರು..

    ಲಕ್ಷುರಿ ಕಾರಲ್ಲಿ ಬಂದು ಸೊಪ್ಪು ಮಾರಿದ ರೈತ!; ಮಾರ್ಕೆಟ್​ಗೆ ಬರ್ತಿದ್ದಂತೆ ಪಂಚೆ ಬಿಚ್ಚಿ ವ್ಯಾಪಾರಕ್ಕಿಳಿದ ವಿಡಿಯೋ ವೈರಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts