More

    ಕಾಫಿ ಉತ್ಪಾದನೆ ದೇಶದ ದೊಡ್ಡ ಉದ್ಯಮ: ಕೃಷಿಕ ಲಯನ್ಸ್ ಸಂಸ್ಥೆ ಆಡಳಿತಾಧಿಕಾರಿ ಕೆ.ಟಿ.ಹನುಮಂತು ಹೇಳಿಕೆ

    ಮಂಡ್ಯ: ಜಗತ್ತಿನಲ್ಲಿ ಭಾರತ 6ನೇ ಅತಿದೊಡ್ಡ ಕಾಫಿ ಉತ್ಪಾದನೆ ಮಾಡುವ ದೇಶವಾಗಿ ಬೆಳೆದಿದೆ. ಮಾತ್ರವಲ್ಲದೆ ದೊಡ್ಡ ಉದ್ಯಮವಾಗಿ ಬದಲಾಗಿದೆ ಎಂದು ಕೃಷಿಕ ಲಯನ್ಸ್ ಸಂಸ್ಥೆ ಆಡಳಿತಾಧಿಕಾರಿ ಕೆ.ಟಿ.ಹನುಮಂತು ಹೇಳಿದರು.
    ನಗರದ ವಿ.ವಿ ರಸ್ತೆಯಲ್ಲಿರುವ ಅಪೂರ್ವದರ್ಶಿನಿ ಸಭಾಂಗಣದಲ್ಲಿ ಕೃಷಿಕ ಲಯನ್ಸ್ ಸಂಸ್ಥೆ ಮತ್ತು ಪ್ರತಿಭಾಂಜಲಿ ಸುಗಮಸಂಗೀತ ಅಕಾಡೆಮಿಯಿಂದ ಆಯೋಜಿಸಿದ್ದ ವಿಶ್ವ ಕಾಫಿ ದಿನಾಚರಣೆ ಅಂಗವಾಗಿ ಉಚಿತ ಕಾಫಿ ಪಾನಿಯ ವಿತರಣೆ ಮತ್ತು ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಭಾರತ ಪ್ರತಿವರ್ಷ ಸುಮಾರು 3,20,000 ಮೆಗಾಟನ್ ಕಾಫಿಯನ್ನು ಉತ್ಪಾದಿಸುತ್ತಿದೆ. ಕರ್ನಾಟಕ, ಕೇರಳ ಮತ್ತು ತಮಿಳುನಾಡು ಪ್ರಮುಖ ಕಾಫಿ ಉತ್ಪಾದನಾ ರಾಜ್ಯಗಳಾಗಿವೆ. ಹಾಗೆ ಬೆಳೆದದ್ದರಲ್ಲಿ ಸುಮಾರು ಶೇ.70 ಕಾಫಿಯನ್ನು ಭಾರತ ರಫ್ತು ಮಾಡುತ್ತಿದೆ. ಆರ್ಥಿಕ ಮಟ್ಟವನ್ನು ಸುಧಾರಣೆ ಮಾಡುವುದರೊಂದಿಗೆ ಲಕ್ಷಾಂತರ ಜನರಿಗೆ ಉದ್ಯೋಗ, ಉದ್ಯಮವಾಗಿ ಲೋಕಮಾನ್ಯವಾಗಿದೆ ಎಂದು ನುಡಿದರು.
    ಕಾಫಿ ಪಾನಿಯ ಸೇವೆನೆಯಿಂದ ಆರೋಗ್ಯಕ್ಕೂ ಉತ್ತಮ, ಅತಿ ಸೇವನೆ ಒಳ್ಳಯದಲ್ಲ, ಮನೋಚೇತೋಹಾರಿಕೆಗೆ ನೆರವಾಗುತ್ತದೆ. ಮಾನಸಿಕ ಖಿನ್ನತೆಯನ್ನು ದೂರವಿಟ್ಟು ಉಲ್ಲಾಸದಿಂದ ಇರಲು ನೆರವಾಗುತ್ತದೆ. ಕಾಫಿ ಪ್ರಿಯಯರು ಕಾಫಿಗಾಗಿ ಒಂದು ಕಿ.ಮೀವರೆಗೂ ಸಂಚರಿಸಿ ಪಡೆದುಕೊಳ್ಳುತ್ತಾರೆ. ಇಂದಿನ ದಿನಗಳಲ್ಲಿ ಕಾಫಿ-ಟೀ ಪಾನಿಯಗಳು ಸ್ವಾದಿಷ್ಟವನ್ನು ಹೆಚ್ಚಿಸಿಕೊಂಡು ಗುಣಮಟ್ಟದ ಪಾನಿಯ ನೀಡಿ, ಪ್ರಿಯರನ್ನು ಹಿಡಿದಿಕೊಟ್ಟುಕೊಳ್ಳುವ ಸಾಮರ್ಧ್ಯವನ್ನು ಪಡೆದುಕೊಳ್ಳುತ್ತಿವೆ. ಸ್ವ ಉದ್ಯೋಗ-ಸ್ವ ಉದ್ಯಮವಾಗಿ ರೂಪುಗೊಳ್ಳುತ್ತಿರುವುದು ಉತ್ತಮ ಬೆಳೆವಣಿಗೆ ಎಂದು ಹೇಳಿದರು.
    ತಾಪಂ ಮಾಜಿ ಸದಸ್ಯ ಸಂತೋಷಗೌಡ, ಕರ್ನಾಟಕ ಸಂಘದ ಲೋಕೇಶ್, ಎಚ್.ಎಂ.ಲೋಕೇಶ್, ಅವಿನಾಶ್, ನಾಗಣ್ಣ, ರಂಗಸ್ವಾಮಿ, ರಮೇಶ್, ಸಾತನೂರು ಜಯರಾಂ, ಎಂ.ವಿ.ಕೃಷ್ಣ, ಗೋರವಾಲೆ ಚಂದ್ರಶೇಖರ್, ಗಾಯಕ ವಿದ್ಯಾಶಂಕರ್ ಇತರರಿದ್ದರು.
    ಇದೇ ಸಂದರ್ಭದಲ್ಲಿ ಸ್ವಾದಿಷ್ಟ ಕಾಫಿ ತಯಾರಕ ಕಾರ್ಮಿಕ ಜಾಕಿ, ಕಾಫಿ ಉದ್ಯಮಿ ಶಂಕರ್‌ಶೆಟ್ಟಿ, ಎನ್.ಶಂಕರ್‌ನಾರಾಯಣ್ ಅವರನ್ನು ಅಭಿನಂದಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts