More

    ಕರೊನಾಗೆ ತತ್ತರಿಸಿರುವ ಸ್ಪೇನ್​ನಲ್ಲಿ ಕೈಗಾರಿಕೆಗಳ ಕಾರ್ಯಾರಂಭ, ಉದ್ಯೋಗಕ್ಕೆ ತೆರಳಲು ಅನುಮತಿ, ಮೆಟ್ರೋ ಸಂಚಾರ ಶುರು

    ಮ್ಯಾಡ್ರಿಡ್​: ಕರೊನಾದಿಂದ ಭಾರಿ ಸಂಕಷ್ಟಕ್ಕೆ ಗುರಿಯಾಗಿರುವ ಸ್ಪೇನ್​ನಲ್ಲಿ ಜನರು ಎಂದಿನಂತೆ ಉದ್ಯೋಗಕ್ಕೆ ತೆರಳುತ್ತಿದ್ದಾರೆ. ಕೈಗಾರಿಕೆಗಳ ಮೇಲೆ ವಿಧಿಸಿದ್ದ ನಿರ್ಬಂಧವನ್ನು ತೆರವು ಮಾಡಲಾಗಿದ್ದು, ಅತ್ಯಾವಶ್ಯಕವಲ್ಲ ಸೇವೆಗಳ ಉದ್ಯೋಗಿಗಳು ಕೆಲಸಕ್ಕೆ ತೆರಳಲು ಅನುಮತಿ ನೀಡಲಾಗಿದೆ.

    ಇದರ ಹೊರತಾಗಿಯೂ, ಪ್ರಸ್ತುತ ಸ್ಪೇನ್​ನಲ್ಲಿ ಸೋಮವಾರ 2,,665ಕ್ಕೂ ಅಧಿಕ ಹೊಸ ಸೋಂಕಿತ ಪ್ರಕರಣಗಳು ವರದಿಯಾಗಿದ್ದು, 280ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ. ಈವರೆಗೆ ಸೋಂಕಿತರ ಸಂಖ್ಯೆ 1,69,496 ಹಾಗೂ ಒಟ್ಟಾರೆ ಮೃತಪಟ್ಟವರು 17,469. ಆದರೆ, ಕಳೆದ 24 ದಿನಗಳಲ್ಲಿ ಏರುಗತಿಯಲ್ಲಿದ್ದ ಕೋವಿಡ್​ ಪೀಡಿತರ ಪ್ರಕರಣ ಹಾಗೂ ಮರಣದ ಪ್ರಮಾಣ ಕೆಲ ದಿನಗಳಿಂದ ಇಳಿಮುಖವಾಗಿದೆ. ಹೀಗಾಗಿ ಎರಡು ವಾರಗಳ ಅವಧಿಗೆ ವಿಧಿಸಲಾಗಿದ್ದ ತೀವ್ರ ದಿಗ್ಬಂಧನವನ್ನು ತೆರವು ಮಾಡಿದೆ.

    ಹೀಗಾಗಿ ಕಾರ್ಖಾನೆಗೆ ತೆರಳುವವರು, ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಕೆಲಸ ಮಾಡಲು ಯಾವುದೇ ನಿರ್ಬಂಧವಿಲ್ಲ. ಮೆಟ್ರೊ ಸಂಚಾರ ಆರಂಭವಾಗಿದ್ದು, ಪೊಲೀಸರು ಮೆಟ್ರೋ ನಿಲ್ದಾಣಗಳಲ್ಲಿ ಜನರಿಗೆ ಮಾಸ್ಕ್​ಗಳನ್ನು ವಿತರಿಸುತ್ತಿದ್ದಾರೆ. ಸುರಕ್ಷಿತ ಅಂತರವನ್ನು ಕಾಯ್ದುಕೊಂಡು ಪ್ರಯಾಣಿಸುವಂತೆ ಸೂಚಿಸುತ್ತಿದ್ದಾರೆ.

    ಸ್ಪೇನ್​ನಲ್ಲಿ ಮಾರ್ಚ್​ 30 ರಿಂದ ಎರಡು ವಾರಗಳ ದಿಗ್ಬಂಧನ ವಿಧಿಸಲಾಗಿತ್ತು. ಜನರು ಮನೆಯಿಂದ ಹೊರಗೆ ಬರುವಂತೆಯೇ ಇರಲಿಲ್ಲ. ಆದರೆ, ದೇಶದ ಆರ್ಥಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸ್ಪೇನ್​ ಈ ನಿರ್ಧಾರ ಕೈಗೊಂಡಿದೆ. ಇದನ್ನು ಕೆಲ ನಾಯಕರು ವಿರೋಧಿಸಿದ್ದಾರೆ.

    ವಿಶೇಷವೆಂದರೆ, ಇಟಲಿಯಲ್ಲೂ ವ್ಯಾಪಾರ ವಹಿವಾಟಿಗೆ ಅವಕಾಶ ಮಾಡಿಕೊಡಲಾಗಿದೆ. ಬಟ್ಟೆ ಅಂಗಡಿ, ಪುಸ್ತಕ ಮಳಿಗೆ, ಸ್ಟೇಷನರಿ ವಸ್ತುಗಳ ಮಳಿಗೆಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಯುರೋಪ್​ನಲ್ಲಿ ಸುದೀರ್ಘ ಕಾಲ ದಿಗ್ಬಂಧನ ವಿಧಿಸಿದ್ದ ರಾಷ್ಟ್ರವೆಂದರೆ ಇಟಲಿ. ಈಗ ಅಲ್ಲೂ ಜನರ ಸಂಚಾರಕ್ಕೆ ಅವಕಾಶ ನೀಡಲಾಗಿದೆ.

    ಡೆನ್ಮಾಕ್​ರ್ನಲ್ಲಿ ಶಾಲೆ, ಡೇ ಕೇರ್​ ಸೆಂಟರ್​ಗಳು ಬುಧವಾರ ಆರಂಭವಾಗಲಿವೆ. ಜನರ ಸಂಚಾರ ಮೇಲಿದ್ದ ನಿರ್ಬಂಧವನ್ನು ತೆರವು ಮಾಡಲಾಗಿದೆ.

    ದೆಹಲಿಯಲ್ಲಿ ಎರಡನೇ ದಿನವೂ ಲಘುವಾಗಿ ನಡುಗಿದ ಭೂಮಿ, 2.7 ತೀವ್ರತೆ ದಾಖಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts