More

  ಶ್ರಮಿಕ ವರ್ಗವೇ ದೇಶದ ಅಡಿಪಾಯ: ಬಿವೈಆರ್

  ಶಿಕಾರಿಪುರ: ಕಾರ್ಮಿಕ ಶಕ್ತಿ ಅದ್ಭುತವಾದ ಶಕ್ತಿ. ದೇಶ ನಿರ್ಮಾಣ, ಅಭಿವೃದ್ಧಿ ಕಾರ್ಯಗಳಲ್ಲಿ ಕಾರ್ಮಿಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಕಾರ್ಮಿಕರು ದೇಶದ ಪ್ರಗತಿಯ ಜೀವಾಳ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಬಣ್ಣಿಸಿದರು.

  ತಾಲೂಕು ಪಂಚಾಯಿತಿ ಆವರಣದಲ್ಲಿ ತಾಲೂಕು ಆಡಳಿತ ಮತ್ತು ಕಾರ್ಮಿಕ ಇಲಾಖೆ ವತಿಯಿಂದ ಕಟ್ಟಡ ಕಾರ್ಮಿಕರ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಲು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಉಚಿತವಾಗಿ ಲ್ಯಾಪ್‌ಟಾಪ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ದೇಶದ ಅಡಿಪಾಯವೇ ಶ್ರಮಿಕ ವರ್ಗ. ಅವರ ಪರಿಶ್ರಮ ಅನುಪಮ. ಅವರದು ನಿರಂತರವಾದ ಕಾಯಕ. ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಕೆಲಸ ಮಾಡುತ್ತಾರೆ. ಕಾರ್ಮಿಕ ವರ್ಗದ ಅಭ್ಯುದಯವೇ ಸರ್ಕಾರದ ಗುರಿ ಆಗಬೇಕು ಎಂದರು.
  ಕಟ್ಟಡ ಕಾರ್ಮಿಕರ ಮಕ್ಕಳನ್ನು ಪ್ರೋತ್ಸಾಹಿಸುವ ಈ ಯೋಜನೆ ಅನುಕೂಲಕರವಾಗಿದೆ. ಇಂದು ಈ ಯೋಜನೆಯಲ್ಲಿ ಆಯ್ಕೆಯಾದ 55 ಜನ ಅರ್ಹ ಫಲಾನುಭವಿ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಲು ಸಂತಸ ಎನಿಸುತ್ತದೆ. ಅವರ ಭವಿಷ್ಯ ಹಸನಾಗಬೇಕು. ಅವರು ಆರ್ಥಿಕವಾಗಿ, ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಪ್ರಗತಿಯಾಗಬೇಕು ಎಂದು ಆಶಿಸಿದರು.
  ಕಾರ್ಮಿಕ ಇಲಾಖೆ ಅಧಿಕಾರಿಗಳಾದ ಸುಮಾ, ಸುಕೀತಾ, ಫಕೀರಪ್ಪ, ಮುಖಂಡರಾದ ಮಹದೇವಾಚಾರ್, ಸುಂದರ ಬಾಬು, ಸಂಜಯ್ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts